ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಟಿ ಮೇಟ್ಟಿಲೇರಲಿದ್ದಾರೆ ಅಲೋಕ್ ಕುಮಾರ್

|
Google Oneindia Kannada News

ಬೆಂಗಳೂರು, ಮೇ 28 : ಲಾಟರಿ ಹಗರಣದ ನಂಟು ಹೊಂದಿದ ಆರೋಪದ ಮೇಲೆ ಅಮಾನತಾಗಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ)ಗೆ ಅಮಾನತು ಪ್ರಶ್ನಿಸಿದ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಒಂದಂಕಿ ಲಾಟರಿ ಹಗರಣದ ತನಿಖೆ ನಡೆಸುತ್ತಿದ್ದ ಸಿಐಡಿ, ಹಗರಣದಲ್ಲಿ ಅಲೋಕ್ ಕುಮಾರ್ ಭಾಗಿಯಾಗಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿತ್ತು. ವರದಿ ಅನ್ವಯ ಸರ್ಕಾರ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತ (ಪಶ್ಚಿಮ) ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಲೋಕ್ ಕುಮಾರ್ ಅವರನ್ನು ಮೇ 23ರಂದು ಅಮಾನತು ಮಾಡಿತ್ತು. [ಸಿಐಡಿ ಪ್ರಶ್ನೆಗಳಿಗೆ ಅಲೋಕ್ ಕುಮಾರ್ ಉತ್ತರವೇನು?]

Alok Kumar

ಕರ್ನಾಟಕ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಸಿಎಟಿಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಬುಧವಾರ ಈ ಕುರಿತು ಅವರು ಹಲವು ವಕೀಲರೊಂದಿಗೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ಎರಡು ದಿನ ಸಿಐಡಿ ತನಿಖೆಗೆ ಹಾಜರಾಗಿರುವ ಅವರು ಮುಂದಿನ ವಾರ ಸಿಎಟಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. [ಅಲೋಕ್ ಕುಮಾರ್ ಅಮಾನತು]

ಸಿಬಿಐ ತನಿಖೆ : ಕರ್ನಾಟಕ ಸರ್ಕಾರ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಈಗಾಗಲೇ ಘೋಷಿಸಿದೆ. ಈ ಕುರಿತ ಪ್ರಕ್ರಿಯೆಗಳು ಪೂರ್ಣಗೊಳ್ಳಲು 15 ದಿನಗಳು ಬೇಕಾಗಬಹುದು. ಕರ್ನಾಟಕ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಸಿಬಿಐ ತನಿಖೆ ಆರಂಭವಾಗಲಿದೆ. [ಲಾಟರಿ ಹಗರಣ ಸಿಬಿಐ ತನಿಖೆಗೆ ಕೊಟ್ಟಿದ್ದೇಕೆ? ಸಿದ್ದು ಉತ್ತರ ಕೇಳಿ]

English summary
Single Digit Lottery Scam : Suspended Additional Commissioner of Police Alok Kumar may approach Central Administrative Tribunal (CAT) over Karnataka government action against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X