ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ರೂ. ನಾಣ್ಯದ ವಿವಾದ; ಬಿಎಂಟಿಸಿಯಿಂದ ಸುತ್ತೋಲೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 25 : ಹತ್ತು ರೂಪಾಯಿ ನಾಣ್ಯ ಚಾಲ್ತಿಯಲ್ಲಿ ಇರುವ ಬಗ್ಗೆ ಪ್ರತಿದಿನ ಗೊಂದಲ ಉಂಟಾಗುತ್ತದೆ. ಅದರಲ್ಲಿಯೂ ಬಸ್‌ಗಳಲ್ಲಿ ನಾಣ್ಯವನ್ನು ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ವಾಹಕರು, ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 10 ರೂ. ನಾಣ್ಯದ ಕುರಿತು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಹತ್ತು ರೂ. ನಾಣ್ಯವನ್ನು ಆರ್‌ಬಿಐ ನಿಷೇಧ ಮಾಡಿಲ್ಲ. ನ್ಯಾಣ್ಯವನ್ನು ಪ್ರಯಾಣಿಕರಿಂದ ಸ್ವೀಕರಿಸಿ ಎಂದು ಸುತ್ತೋಲೆಯಲ್ಲಿ ಹೇಳಿದೆ.

ದ್ವಿತೀಯ ಪಿಯುಸಿ ಪರೀಕ್ಷೆ; ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣದ್ವಿತೀಯ ಪಿಯುಸಿ ಪರೀಕ್ಷೆ; ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ

Allow 10 Rs Coin BMTC Issues Circular

ಬಸ್, ಬಸ್ ಡಿಪೋಗಳಲ್ಲಿ 10 ರೂ. ನಾಣ್ಯವನ್ನು ಸ್ವೀಕಾರ ಮಾಡಬಹುದು. ಪ್ರಯಾಣಿಕರು ನಾಣ್ಯವನ್ನು ನೀಡಿದರೆ ಅದನ್ನು ನಿರ್ವಾಹಕರು ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದರಿಂದಾಗಿ ಗೊಂದಲ ನಿವಾರಣೆಯಾಗಿದೆ.

ಬ್ರೇಕಿಂಗ್ ನ್ಯೂಸ್; ಸರ್ಕಾರಿ ಬಸ್ ದರ ಶೇ 12ರಷ್ಟು ಏರಿಕೆ ಬ್ರೇಕಿಂಗ್ ನ್ಯೂಸ್; ಸರ್ಕಾರಿ ಬಸ್ ದರ ಶೇ 12ರಷ್ಟು ಏರಿಕೆ

ಪ್ರಯಾಣಿಕರು ಟಿಕೆಟ್ ಪಡೆಯುವಾಗ 10 ರೂ. ನಾಣ್ಯ ನೀಡಿದರೆ ಸ್ವೀಕಾರ ಮಾಡಬಹುದು. ನಿರ್ವಾಹಕರು ಚಿಲ್ಲರೆ ನೀಡುವಾಗ 10 ರೂ. ನಾಣ್ಯವನ್ನು ನೀಡಬಹುದು ಎಂದು ಬಿಎಂಟಿಸಿಯ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಬಿಎಂಟಿಸಿ ಬಸ್ ಬಳಕೆದಾರರು ಹೊರಗೆಡವಿರುವ ಆಸಕ್ತಿಕರ ಅಂಕಿ-ಅಂಶಬಿಎಂಟಿಸಿ ಬಸ್ ಬಳಕೆದಾರರು ಹೊರಗೆಡವಿರುವ ಆಸಕ್ತಿಕರ ಅಂಕಿ-ಅಂಶ

10 ರೂ. ನಾಣ್ಯವನ್ನು ಆರ್‌ಬಿಐ ನಿಷೇಧಿಸಿದೆ. ಇದು ಚಲಾವಣೆಯಾಗುವುದಿಲ್ಲ ಎಂಬ ಕುರಿತು ಹಲವಾರು ಸುದ್ದಿಗಳು ಹಬ್ಬಿವೆ. ಆದ್ದರಿಂದ, ಬಸ್, ಅಂಗಡಿ ಸೇರಿದಂತೆ ಹಲವು ಕಡೆ ನಾಣ್ಯಗಳನ್ನು ತೆಗೆದುಕೊಳ್ಳುವುದಿಲ್ಲ.

ಬಿಎಂಟಿಸಿ ಬಸ್‌ನಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಸಂಚಾರ ನಡೆಸುವರು. ಒಂದಲ್ಲ ಒಂದು ಬಾರಿ 10 ರೂ. ನಾಣ್ಯ ಪ್ರಯಾಣಿಕರು ಅಥವ ನಿರ್ವಾಹಕರ ಕೈ ಸೇರುತ್ತದೆ. ನಾಣ್ಯ ತೆಗೆದುಕೊಳ್ಳುವ ವಿಚಾರದಲ್ಲಿಯೇ ಮಾತಿನ ಚಕಮಕಿ ನಡೆಯುತ್ತಿತ್ತು.

English summary
Bangalore Metropolitan Transport Corporation (BMTC) issued circular to allow and use Rs 10 coin in buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X