• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ಕೊಲೆ ಬೆದರಿಕೆ ಆರೋಪ

By Manjunatha
|
Google Oneindia Kannada News

ಬೆಂಗಳೂರು, ಜುಲೈ 23: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ವಿರುದ್ಧ ಕೊಲೆ ಬೆದರಿಕೆಯ ಆರೋಪ ಮಾಡಲಾಗಿದೆ.

ಹೊಸಕೆರೆಯ ನಿವಾಸಿ ಮಣಿ ಎನ್ನುವರು ಈ ಆರೋಪ ಮಾಡಿದ್ದರು, ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಗೂಳಿಹಟ್ಟಿ ಶೇಖರ್ ಅವರಿಗೆ ಕೊಟ್ಟಿರುವ ಸಾಲವನ್ನು ತಿರುಗಿ ಕೇಳಿದ್ದಕ್ಕೆ ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಬಿಜೆಪಿಗೆ ಸೇರ್ಪಡೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಬಿಜೆಪಿಗೆ ಸೇರ್ಪಡೆ

'ಗೂಳಿಹಟ್ಟಿ ಶೇಖರ್ ಅವರಿಗೆ ಮೊದಲು 3 ಲಕ್ಷ ಹಣ, ಆ ನಂತರ 5 ಲಕ್ಷ ಹಣವನ್ನು ಸಾಲವಾಗಿ ನೀಡಿದ್ದೆ, ಆದರೆ ಅದನ್ನು ವಾಪಾಸ್ ಕೇಳಲು ಹೋದಾಗ ಅವರು ಹಾಗೂ ಅವರ ಕುಟುಂಬದವರು ನನಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

ಶೇಖರ್ ಅವರು ಎರಡು ಚೆಕ್‌ಗಳನ್ನು ನೀಡಿದ್ದರು, ಅದನ್ನು ಬ್ಯಾಂಕ್‌ಗೆ ಹಾಕಿದಾಗ ಎರಡೂ ಚೆಕ್ ಬೌನ್ಸ್ ಆಗಿವೆ. ಚೆಕ್ ಬೌನ್ಸ್ ಕೇಸು ಹಾಕಲಾಗಿದ್ದು, ಶಾಸಕರಿಗೆ ನೋಟಿಸ್ ಸಹ ಕಳುಹಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕಾಂಗ್ರೆಸ್‌ಗೆ? ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕಾಂಗ್ರೆಸ್‌ಗೆ?

ಹೊಸದುರ್ಗ ಕ್ಷೇತ್ರದಿಂದ ಗೆದ್ದಿರುವ ಗೂಳಿಹಟ್ಟಿ ಶೇಖರ್ ಅವರು, ಬಿಜೆಪಿ ಅಧಿಕಾರಾವಧಿಯಲ್ಲಿ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಸದನದಲ್ಲಿ ಅಂಗಿ ಹರಿದುಕೊಂಡು ಭಾರೀ ಸುದ್ದಿ ಮಾಡಿದ್ದರು. ಅಲ್ಲದೆ ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಶಾಸರಿಗೆ ನೀಡಿದ್ದ ಔತಣಕೂಟದಲ್ಲಿ ಕಾಣಿಸಿಕೊಂಡದ್ದು ಸಹ ಸುದ್ದಿಯಾಗಿತ್ತು.

English summary
Bengaluru resident Mani accused that BJP MLA Goolihatti Shekhar threatens to kill him. He said MLA G.Shekhar need to return his money which he gave to him. but when he asked about it MLA and his family threatened to kill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X