ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತಿ ದೀರ್ಘ ವಾಯುಮಾರ್ಗದ ಸಾರಥ್ಯ ವಹಿಸಿ ಇತಿಹಾಸ ಸೃಷ್ಟಿಸಿದ ಮಹಿಳಾ ಪೈಲಟ್ ತಂಡ

|
Google Oneindia Kannada News

ಬೆಂಗಳೂರು, ಜನವರಿ 11: ವಿಶ್ವದ ಅತಿ ದೀರ್ಘ ವಾಯು ಮಾರ್ಗದ ವಿಮಾನ ಯಾನವನ್ನು ಸಮರ್ಥವಾಗಿ ನಿರ್ವಹಿಸಿರುವ ನಾಲ್ವರು ಮಹಿಳಾ ಪೈಲಟ್ ಗಳು ಇತಿಹಾಸ ನಿರ್ಮಿಸಿದ್ದಾರೆ.

ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯು ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ನಡುವೆ ನೇರ ವಿಮಾನ ಯಾನ ಸೇವೆ ಆರಂಭಿಸಿದ್ದು, ಮಹಿಳಾ ಪೈಲಟ್ ಗಳೇ ಈ ಯಾನದ ಸಾರಥ್ಯ ವಹಿಸಿದ್ದು, ಯಶಸ್ವಿಯಾಗಿ ತಮ್ಮ ಜವಾಬ್ದಾರಿಯನ್ನು ಪೂರೈಸಿದ್ದಾರೆ. ಮುಂದೆ ಓದಿ...

 ಬೆಂಗಳೂರು ತಲುಪಿದ ಸ್ಯಾನ್ ಫ್ರಾನ್ಸಿಸ್ಕೊ ವಿಮಾನ

ಬೆಂಗಳೂರು ತಲುಪಿದ ಸ್ಯಾನ್ ಫ್ರಾನ್ಸಿಸ್ಕೊ ವಿಮಾನ

ಏರ್ ಇಂಡಿಯಾ ಸಂಸ್ಥೆ ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ನಡುವೆ ನೇರ ವಿಮಾನ ಯಾನ ಆರಂಭಿಸಿದ್ದು, ಎಐ 176 ವಿಮಾನ ಶನಿವಾರ ರಾತ್ರಿ ಸ್ಯಾನ್ ಫ್ರಾನ್ಸಿಸ್ಕೊದಿಂದ ಹೊರಟು ಸೋಮವಾರ ಬೆಳಗ್ಗಿನ ಜಾವ 4 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಮಹಿಳಾ ಪೈಲಟ್ ಗಳ ನೇತೃತ್ವದಲ್ಲಿ ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ವಿಮಾನಯಾನ ಆರಂಭಮಹಿಳಾ ಪೈಲಟ್ ಗಳ ನೇತೃತ್ವದಲ್ಲಿ ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ವಿಮಾನಯಾನ ಆರಂಭ

 ವಿಮಾನ ಯಾನ ನಿರ್ವಹಣೆ ಹೊತ್ತಿದ್ದ ಮಹಿಳೆಯರು

ವಿಮಾನ ಯಾನ ನಿರ್ವಹಣೆ ಹೊತ್ತಿದ್ದ ಮಹಿಳೆಯರು

ಈ ವಿಮಾನ ಯಾನದ ನಿರ್ವಹಣೆಯನ್ನು ನಾಲ್ಕು ಮಹಿಳಾ ಪೈಲಟ್ ಗಳಿಗೆ ನೀಡಲಾಗಿತ್ತು. ಕ್ಯಾಪ್ಟನ್ ಝೋಯಾ ಅಗರ್ ವಾಲ್ ನೇತೃತ್ವದಲ್ಲಿ ಮಹಿಳಾ ತಂಡ ಶನಿವಾರ ಮೊದಲ ವಿಮಾನ ಸಂಚಾರ ಆರಂಭಿಸಿತ್ತು. ಕ್ಯಾಪ್ಟನ್ ಪಾಪಗರಿ ತನ್ಮಯ್, ಕ್ಯಾಪ್ಟನ್ ಆಕಾಂಕ್ಷ ಸೋನಾವಾರ್, ಕ್ಯಾಪ್ಟನ್ ಶಿವಾನಿ ಮನಹಾಸ್ ಅವರನ್ನೊಳಗೊಂಡ ಈ ತಂಡ ವಿಮಾನ ಸಂಚಾರದ ಸಾರಥ್ಯ ವಹಿಸಿತ್ತು.

 ಅತಿ ದೀರ್ಘ ವಾಯುಯಾನ

ಅತಿ ದೀರ್ಘ ವಾಯುಯಾನ

ಈ ವಿಮಾನ ಯಾನ ವಿಶ್ವದ ಅತಿ ದೀರ್ಘ ವಾಯುಯಾನ ಎನಿಸಿದ್ದು, ವಿಮಾನವು ಉತ್ತರ ಧ್ರುವವನ್ನು ಹಾದು, ಅಟ್ಲಾಂಟಿಕ್ ಮಾರ್ಗದ ಮೂಲಕ 16 ಸಾವಿರ ಕಿಲೋ ಮೀಟರ್ ಕ್ರಮಿಸಿ ಬೆಂಗಳೂರು ತಲುಪುತ್ತದೆ. ಒಟ್ಟು 238 ಸೀಟುಗಳಿರುವ ಬೋಯಿಂಗ್ 777-200 ಎಲ್ ಆರ್ ವಿಮಾನಗಳನ್ನು ಏರ್ ಇಂಡಿಯಾ ಕಾರ್ಯಾಚರಣೆ ನಡೆಸಲಿದೆ.

"ನಮ್ಮ ನಾರಿ ಶಕ್ತಿ ಇತಿಹಾಸ ಸೃಷ್ಟಿಸಿದೆ"

ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ, "ಏರ್ ಇಂಡಿಯಾದ ಮಹಿಳಾ ಶಕ್ತಿ ವಿಶ್ವದಲ್ಲೇ ಎತ್ತರಕ್ಕೆ ಹಾರಲಿದೆ" ಎಂದು ಶ್ಲಾಘಿಸಿದ್ದರು. ಇದೀಗ "ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡ ನಮ್ಮ ನಾರಿ ಶಕ್ತಿ ಇತಿಹಾಸವನ್ನೇ ನಿರ್ಮಿಸಿದೆ" ಎಂದು ಹಾಡಿ ಹೊಗಳಿದ್ದಾರೆ.

Recommended Video

ಕೊನೆಗೂ BJP cabinet ವಿಸ್ತರಣೆ ಒಳ್ಳೆ ಕಾಲ ಬಂತು!! | Oneindia Kannada
 ಸಂತಸ ಹಂಚಿಕೊಂಡ ಪೈಟಲ್ ಗಳು

ಸಂತಸ ಹಂಚಿಕೊಂಡ ಪೈಟಲ್ ಗಳು

ದುರ್ಗಮ ಎನಿಸಿರುವ ಉತ್ತರ ಧ್ರುವವನ್ನು ಹಾದು ಬಂದಿದ್ದೇವೆ. ನನಗೆ ಈ ಜವಾಬ್ದಾರಿ ಕೊಟ್ಟಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಎಲ್ಲ ಮಹಿಳಾ ಪೈಟಲ್ ಗಳೇ ಈ ಯಾನವನ್ನು ನಿಭಾಯಿಸಿ ಇತಿಹಾಸ ನಿರ್ಮಿಸಿದ್ದೇವೆ. ಈ ಸಾಧನೆಯ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ" ಎಂದು ಕ್ಯಾಪ್ಟನ್ ಝೋಯಾ ಅಗರ್ ವಾಲ್ ಸಂತಸ ವ್ಯಕ್ತಪಡಿಸಿದ್ದಾರೆ. "ಈ ಸಾಹಸ ರೋಮಾಂಚನಕಾರಿ ಎನಿಸಿತು. ಸ್ಯಾನ್ ಫ್ರಾನ್ಸಿಸ್ಕೊದಿಂದ ಬೆಂಗಳೂರು ತಲುಪಲು 17 ಗಂಟೆಗಳಾಯಿತು ಎಂದು ಕ್ಯಾಪ್ಟನ್ ಶಿವಾನಿ ಮನಹಾಸ್ ಸಂತಸಗೊಂಡಿದ್ದಾರೆ.

English summary
Four women pilots created history by covering Air India's longest direct route sanfrancisco bengaluru flight which landed at Kempegowda International Airport on monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X