ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರ ನಮ್ಮ ಮೆಟ್ರೋ ಎಲ್ಲಾ ನಿಲ್ದಾಣಗಳಲ್ಲೂ ಪಾರ್ಕಿಂಗ್ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಮೇ 9: ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ನಿರ್ಮಿಸಲಾಗಿದ್ದ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರ ಪಾರ್ಕಿಂಗ್ ಸೌಲಭ್ಯ ಲಭ್ಯವಾಗಲಿದೆ.

ಬಸ್‌ಗಳು, ಆಟೋರಿಕ್ಷಾ, ಬಾಡಿಗೆ ಬೈಕ್‌ಗಳು ಹಾಗೂ ಖಾಸಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅನುಕೂಲವಾಗುವಂತೆ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ.

ಬೆಂಗಳೂರಲ್ಲಿ ಸ್ಮಾರ್ಟ್ ಪಾರ್ಕಿಂಗ್‌ಗೆ ಸಿಕ್ತು ಅನುಮತಿ, ಎಲ್ಲೆಲ್ಲಿ ನಿರ್ಮಾಣ?ಬೆಂಗಳೂರಲ್ಲಿ ಸ್ಮಾರ್ಟ್ ಪಾರ್ಕಿಂಗ್‌ಗೆ ಸಿಕ್ತು ಅನುಮತಿ, ಎಲ್ಲೆಲ್ಲಿ ನಿರ್ಮಾಣ?

ಹಲವು ಮೆಟ್ರೋ ನಿಲ್ದಾಣಗಳಲ್ಲಿ ವಾಹನ ನಿಲುಗಡೆಯದ್ದೇ ಸಮಸ್ಯೆಯಾಗಿತ್ತು. ಹೋಟೆಲ್, ಪುಸ್ತಕ ಮಳಿಗೆಗಳು ಇನ್ನಿತರೆ ವಾಣಿಜ್ಯ ಉದ್ದೇಶಗಳಿಗಾಗಿ ಸ್ಥಳಾವಕಾಶವನ್ನು ಕಲ್ಪಿಸಲಾಗಿತ್ತು. ಇದೀಗ ಅವುಗಳನ್ನು ತೆರವುಗೊಳಿಸಿ ಪಾರ್ಕಿಂಗ್ ಜಾಗವನ್ನಾಗಿ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಹೋಟೆಲ್ ಇನ್ನಿತರೆ ವಾಣಿಜ್ಯ ಕಟ್ಟಡಗಳಿಗೆ ಗುಡ್ ಬೈ

ಹೋಟೆಲ್ ಇನ್ನಿತರೆ ವಾಣಿಜ್ಯ ಕಟ್ಟಡಗಳಿಗೆ ಗುಡ್ ಬೈ

ಹೋಟೆಲ್ ಇನ್ನಿತರೆ ಮಳಿಗೆಗಳಿಗೆ ಅವಕಾಶ ನೀಡಿದ್ದೀರಿ, ಆದರೆ ಪಾರ್ಕಿಂಗ್ ಸೌಲಭ್ಯವೇ ಇಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಕಾರಣದಿಂದ ವಾಣಿಜ್ಯ ಕಾರಣಗಳಿಗಾಗಿ ನಿರ್ಮಿಸಲಾಗಿರುವ ಹೋಟೆಲ್, ಮಳಿಗೆಗಳನ್ನು ತೆರವುಗೊಳಿಸಿ ಅಲ್ಲಿ ಪಾರ್ಕಿಂಗ್ ನಿರ್ಮಿಸಲಾಗುತ್ತದೆ.

ಹೆಚ್ಚು ಪ್ರಯಾಣಿಕರನ್ನು ಕರೆತರುವುದೇ ನಮ್ಮ ಉದ್ದೇಶ

ಹೆಚ್ಚು ಪ್ರಯಾಣಿಕರನ್ನು ಕರೆತರುವುದೇ ನಮ್ಮ ಉದ್ದೇಶ

ಎಲ್ಲೆಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲು ಅನುಮತಿ ನೀಡಿದ್ದೇವೆ ಅಲ್ಲೆಲ್ಲ ಅನುಮತಿಯನ್ನು ವಾಪಸ್ ಪಡೆಯುತ್ತಿದ್ದು, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಮೆಟ್ರೋದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದೇವೆ. ಹೆಚ್ಚು ಪ್ರಯಾಣಿಕರು ಮೆಟ್ರೋ ಬಳಸುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಜಯ್ ಸೇಠ್ ತಿಳಿಸಿದ್ದಾರೆ.

ನಮ್ಮ ಮೆಟ್ರೋ 2 ನೇ ಹಂತ: ನಿಲ್ದಾಣದ ವಿಶೇಷತೆಗಳೇನು?ನಮ್ಮ ಮೆಟ್ರೋ 2 ನೇ ಹಂತ: ನಿಲ್ದಾಣದ ವಿಶೇಷತೆಗಳೇನು?

ಜಾಹೀರಾತು ನಿಷೇಧದಿಂದ 10 ಕೋಟಿ ರೂ ನಷ್ಟ

ಜಾಹೀರಾತು ನಿಷೇಧದಿಂದ 10 ಕೋಟಿ ರೂ ನಷ್ಟ

ನಮ್ಮ ಮೆಟ್ರೋ ಪಿಲ್ಲರ್‌ಗಳಲ್ಲಿ ಜಾಹೀರಾತು ನಿಷೇಧದಿಂದಾಗಿ ನಮ್ಮ ಮೆಟ್ರೋಗೆ ಸುಮಾರು 10 ಕೋಟಿ ರೂ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2018-19ನೇ ಸಾಲಿನಲ್ಲಿ ಮೆಟ್ರೋದ ಆದಾಯ 404 ಕೋಟಿ ರೂ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 80 ಕೋಟಿ ರೂ ಹೆಚ್ಚಿನ ಆದಾಯವೂ ಕೂಡ ಲಭ್ಯವಾಗಿತ್ತು. ಆದರೆ ಬಿಬಿಎಂಪಿಯು ಮೆಟ್ರೋ ಪಿಲ್ಲರ್‌ಗಳ ಮೇಲಿನ ಜಾಹೀರಾತು ನಿಷೇಧ ಮಾಡಿರುವ ಕಾರಣ 10 ಕೋಟಿ ರೂ ನಷ್ಟವಾಗಿದೆ.

ಯಾವ್ಯಾವ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಇದೆ

ಯಾವ್ಯಾವ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಇದೆ

ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ 1567 ದ್ವಿಚಕ್ರವಾಹನ, 373 ಕಾರುಗಳು, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 1514 ದ್ವಿಚಕ್ರವಾಹನ, 375 ಕಾರುಗಳು, ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 927 ದ್ವಿಚಕ್ರ ವಾಹನಗಳು, 32 ಕಾರುಗಳು, ಎಸ್‌ವಿ ರಸ್ತೆಯಲ್ಲಿ 712 ದ್ವಿಚಕ್ರ ವಾಹನಗಳು, 164 ಕಾರುಗಳು, ನಾಗಸಂದ್ರದಲ್ಲಿ 371 ದ್ವಿಚಕ್ರ ವಾಹನಗಳು, 57 ಕಾರುಗಳು, ಬನಶಂಕರಿಯಲ್ಲಿ 319 ದ್ವಿಚಕ್ರ ವಾಹನಗಳು, 52 ಕಾರುಗಳನ್ನು ನಿಲುಗಡೆ ಮಾಡಲು ಅವಕಾಶವಿದೆ.

ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಕೆಆರ್‌ಪುರಂಗೆ ಸಂಪರ್ಕ?ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಕೆಆರ್‌ಪುರಂಗೆ ಸಂಪರ್ಕ?

English summary
Several Namma metro stations in the city without parking facility may finally get a dedicated space for, buses, auto rickshaws, private two wheelers, rental bikes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X