ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್ 12ರಂದು ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ವಿದ್ಯುತ್ ವ್ಯತ್ಯಯ

|
Google Oneindia Kannada News

ನವದೆಹಲಿ, ಅಕ್ಟೋಬರ್ 12: ಕಲ್ಲಿದ್ದಲು ಕೊರತೆ ವಿದ್ಯುತ್ ಸ್ಥಾವರಗಳ ಸ್ಥಗಿತದ ಬಿಸಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ತಟ್ಟಿದಂತೆ ತೋರುತ್ತಿದೆ. ಮಂಗಳವಾರ ಸಿಲಿಕಾನ್ ಸಿಟಿಯ ನಾಲ್ಕೂ ದಿಕ್ಕುಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ರಾಜ್ಯಕ್ಕೆ ನಾಲ್ಕು ರೇಖ್ ಮೂಲಕ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸುವಂತೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರವನ್ನು ಒತ್ತಾಯಿಸಿದ್ದಾರೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ಮಹಾರಾಷ್ಟ್ರದ ಚಂದ್ರಾಪುರ ಮತ್ತು ಒಡಿಶಾದ ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ ಗಣಿಗಳಿಂದ ಕರ್ನಾಟಕವು ಕಲ್ಲಿದ್ದಲು ಹಂಚಿಕೆ ಪಡೆದಿರುವುದರ ಅನುಮತಿಯನ್ನು ಎದುರು ನೋಡುತ್ತಿದೆ ಎಂದು ಸಿಎಂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು?ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು?

ಈ ಮಧ್ಯೆ ಬೆಂಗಳೂರಿನಲ್ಲಿರುವ ಹಲವು ಪ್ರದೇಶಗಳಲ್ಲಿ ಅಕ್ಟೋಬರ್ 12ರ ಮಂಗಳವಾರ ವಿದ್ಯುತ್ ಸ್ಥಗಿತವನ್ನು ಎದುರಿಸಲಿದೆ ಎಂದು ಸರ್ಕಾರಿ ಸ್ವಾಮ್ಯದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ. ಸಿಲಿಕಾನ್ ಸಿಟಿಯ ಯಾವ ಯಾವ ಪ್ರದೇಶಗಳಲ್ಲಿ ಮಂಗಳವಾರ ಪವರ್ ಕಟ್ ಆಗಲಿದೆ ಎಂಬುದನ್ನು ತಿಳಿಯಿರಿ.

ದಕ್ಷಿಣ ವಲಯ

ದಕ್ಷಿಣ ವಲಯ

ಬೆಂಗಳೂರು ದಕ್ಷಿಣ ವಲಯದ ಜೆಪಿ ನಗರ 3ನೇ ಹಂತ ಮತ್ತು ಜಯನಗರ ವಿಭಾಗದ ಬಿಜಿ ರಸ್ತೆ, ರಾಘವೇಂದ್ರ ಅಪಾರ್ಟ್ ಮೆಂಟ್ ಹಾಗೂ ಕೋರಮಂಗಲದ ಮುನೇಶ್ವರ ಟೆಂಪಲ್ ಪ್ರದೇಶದಲ್ಲಿ ಮಧ್ಯಾಹ್ನ 1.30ರಿಂದ 4 ಗಂಟೆವರೆಗೂ ವಿದ್ಯುತ್ ವ್ಯತ್ಯಯ ಆಗಲಿದೆ. ಅದೇ ರೀತಿ, ಮಂಗಳವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಬಿಕೆ ವೃತ್ತ, ಸುರಭಿ ನಗರ, ಹೊಸ ರಸ್ತೆ, ಕೋನಪ್ಪನ ಅಗ್ರಹಾರ ಮತ್ತು ಕ್ಲಬ್ ರಸ್ತೆ ವೃತ್ತ ಸೇರಿದಂತೆ ಎಚ್‌ಎಸ್‌ಆರ್ ಲೇಔಟ್ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಜಯನಗರ ವಿಭಾಗದ ಆರ್‌ಬಿಐ ಲೇಔಟ್, ಎಸ್‌ಬಿಎಂ ಕಾಲೋನಿ, ಹರಿ ನಗರ, ಈಶ್ವರ ಲೇಔಟ್ ಮತ್ತು ಶಿವಶಕ್ತಿ ನಗರಗಳಂತಹ ಪ್ರದೇಶಗಳು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ದೀರ್ಘಾವಧಿಯ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ.

ಪಶ್ಚಿಮ ವಲಯ

ಪಶ್ಚಿಮ ವಲಯ

ರಾಜಾಜಿನಗರ ವಿಭಾಗದ ಗೋವಿಂದರಾಜ ನಗರ, ಕೋಳಿಮನೆ ರಸ್ತೆ, ಸುಬಣ್ಣ ಗಾರ್ಡನ್, ಜಿಕೆಡಬ್ಲ್ಯೂ ಲೇಔಟ್, ವಿನಾಯಕ ಲೇಔಟ್, ಅನುಭವ ನಗರ, ಮಾರುತಿ ನಗರ, ಮತ್ತು ಗಂಗೊಂಡನಹಳ್ಳಿ ನಿವಾಸಿಗಳು ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ. ಆರ್.ಆರ್.ನಗರ ವಿಭಾಗದ ಎಚ್.ಬಿ.ಸಮಾಜ ರಸ್ತೆ ಮತ್ತು ರಂಗನಾಥ ಕಾಲೋನಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 6ರವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ. ಅದೇ ರೀತಿ, ಶಿರಸಿ ವೃತ್ತದಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ದ್ವಾರಕನಗರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿದ್ಯುತ್ ಕಡಿತವಾಗಲಿದೆ. ಕೆಂಗೇರಿ ವಿಭಾಗದ ಭೂಮಿಕಾ ಲೇಔಟ್, ಪತಂಗಿರಿ ಮತ್ತು ಕೃಷ್ಣಾ ಗಾರ್ಡನ್ ಪ್ರದೇಶದಲ್ಲಿ ಕೂಡ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 5 ರ ನಡುವೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಪೂರ್ವ ವಲಯ

ಪೂರ್ವ ವಲಯ

ಇಂದಿರಾನಗರ ವಿಭಾಗದ ಹೊಯ್ಸಳ ನಗರ, 11ನೇ ಕ್ರಾಸ್ ಮತ್ತು ಮೀನಾಕ್ಷಿ ದೇವಸ್ಥಾನ ರಸ್ತೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಕಡಿತವಾಗಲಿದೆ. ಶಿವಾಜಿನಗರ ವಿಭಾಗದ ರಾಯಲ್ ಎನ್ಕ್ಲೇವ್ ಮತ್ತು ಪೋನಪ್ಪ ಲೇಔಟ್ ಭಾಗದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅದೇ ರೀತಿ, ಭಾರತ್ ನಗರ ಮತ್ತು ಫಾತಿಮಾ ಲೇಔಟ್ ನಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಮತ್ತು ದೂಪನಹಳ್ಳಿಯ ಕೆಲವು ಭಾಗಗಳಲ್ಲಿ ಮಧ್ಯಾಹ್ನ 2 ರಿಂದ 5 ರವರೆಗೆ ವಿದ್ಯುತ್ ಕಡಿತ ಇರುತ್ತದೆ.

ವಿಧಾನಸೌಧ ವಿಭಾಗದ ರಾಜಭವನ ಮತ್ತು ಮಾಗಡಿ ಮುಖ್ಯರಸ್ತೆಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಕನ್ನಿಂಗ್‌ಹ್ಯಾಮ್ ರಸ್ತೆ ಮತ್ತು ಮೈಸೂರು ರಸ್ತೆಯಲ್ಲಿ ಮಧ್ಯಾಹ್ನ 2.30 ರಿಂದ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಉತ್ತರ ವಲಯ

ಉತ್ತರ ವಲಯ

ಹೆಬ್ಬಾಳ ವಿಭಾಗದ ಕೋಗಿಲು ಲೇಔಟ್, ಅಗ್ರಹಾರ ಮತ್ತು ತಿರುಮೇನಹಳ್ಳಿ ಗ್ರಾಮದ ನಿವಾಸಿಗಳು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವನ್ನು ಎದುರಿಸುತ್ತಾರೆ. ಇದೇ ರೀತಿ ಬಾಗಲೂರು ಕ್ರಾಸ್‌ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮತ್ತು ಎಂಎಲ್‌ಎ ಲೇಔಟ್ ನಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಪವರ್ ಕಟ್ ಆಗಲಿದೆ. ಪೀಣ್ಯ ವಿಭಾಗದಲ್ಲಿ ಪೈಪ್‌ಲೈನ್ ರಸ್ತೆ, ಪ್ರಶಾಂತನಗರ ಸುತ್ತಮುತ್ತ, ಎಂಟಿಎಸ್ ಕಾಲೋನಿ, ಎಜಿಬಿಜಿ ಲೇಔಟ್, ಜಿಡಿ ನಾಯ್ಡು ಹಾಲ್ ರಸ್ತೆ ಮತ್ತು ಎಂಎಲ್ ಲೇಔಟ್ ಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಮಲ್ಲೇಶ್ವರ ವಿಭಾಗದ ಗಾಯತ್ರಿನಗರ ಮತ್ತು ಇ-ಬ್ಲಾಕ್ ರಾಜಾಜಿನಗರದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ವಿದ್ಯುತ್ ಕಡಿತವಾಗಲಿದ್ದು, ಅದೇ ರೀತಿಯ ಸ್ಥಗಿತವನ್ನು ಎಚ್‌ಎಂಟಿ ಲೇಔಟ್‌ಗೆ ಬೆಳಿಗ್ಗೆ 10.30 ರಿಂದ ಸಂಜೆ 6 ರವರೆಗೆ ನಿಗದಿಪಡಿಸಲಾಗಿದೆ.

Recommended Video

Dan Christian ಅವರ ಪತ್ನಿಗೆ ಹಿಂಸೆ ಕೊಡುತ್ತಿರುವ RCB ಅಭಿಮಾನಿಗಳು | Oneindia Kannada

English summary
Bengaluru's All Four Zones face power cuts on October 12, says state-run BESCOM: Look Here for Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X