ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ಯ ಖರೀದಿ ಬಿಲ್‌ ವೈರಲ್: ಬಾರ್ ಮಾಲೀಕನ ಮೇಲೆ ಕೇಸ್‌

By Coovercolly Indresh
|
Google Oneindia Kannada News

ಬೆಂಗಳೂರು, ಮೇ 5: ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ 52,800 ರೂ.ಗಳ ಮದ್ಯದ ಖರೀದಿ ಬಿಲ್ ಮಾರಾಟಗಾರ ಮತ್ತು ಖರೀದಿದಾರ ಇಬ್ಬರನ್ನೂ ತೊಂದರೆಗೆ ಸಿಲುಕಿಸಿದೆ.

Recommended Video

ಲಾಕ್ ಡೌನ್ ಸಡಿಲಿಕೆ ನಂತರ ಆರೋಗ್ಯ ಸಚಿವರಾದ ಶ್ರೀರಾಮುಲು ವಿಶೇಷ ಸಂದೇಶ ರವಾನಿಸಿದ್ದಾರೆ | Oneindia Kannada

ಅನುಮತಿ ನೀಡಿರುವ ಮಿತಿಗಿಂತ ಹೆಚ್ಚು ಮದ್ಯವನ್ನು ಮಾರಾಟ ಮಾಡಿದ್ದಕ್ಕಾಗಿ ಕರ್ನಾಟಕ ಅಬಕಾರಿ ಇಲಾಖೆ, ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದೆ. ಚಿಲ್ಲರೆ ಮದ್ಯದಂಗಡಿಗಳು ದಿನಕ್ಕೆ 2.6 ಲೀಟರ್ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ (ಐಎಂಎಫ್ಎಲ್) ಅಥವಾ 18 ಲೀಟರ್ ಬಿಯರ್ ಕ್ಕಿಂತ ಹೆಚ್ಚಿನದನ್ನು ಓರ್ವ ಗ್ರಾಹಕನಿಗೆ ಮಾರಾಟ ಮಾಡುವುದು ಅಬಕಾರಿ ಕಾಯ್ದೆಯನ್ವಯ ಅಪರಾಧವಾಗಿದೆ.

ಅಬ್ಬಬ್ಬಾ.. ಎಣ್ಣೆಪಾರ್ಟಿಯ 'ಈ' ಬಿಲ್ ನೋಡಿ ಕುಡಿಯದವರೂ ತಲೆ ತಿರುಗಿ ಬೀಳ್ತಾರೆ!ಅಬ್ಬಬ್ಬಾ.. ಎಣ್ಣೆಪಾರ್ಟಿಯ 'ಈ' ಬಿಲ್ ನೋಡಿ ಕುಡಿಯದವರೂ ತಲೆ ತಿರುಗಿ ಬೀಳ್ತಾರೆ!

ಆದರೆ ಚಿಲ್ಲರೆ ಮದ್ಯ ವ್ಯಾಪಾರಿಯು ಬೆಂಗಳೂರು ದಕ್ಷಿಣದ ತಾವರೆಕೆರೆಯ ವೆನಿಲ್ಲಾ ಸ್ಪಿರಿಟ್ ಜೋನ್ ನಲ್ಲಿ 13.5 ಲೀಟರ್ ಮದ್ಯ ಮತ್ತು 35 ಲೀಟರ್ ಬಿಯರ್ ಅನ್ನು ಒಬ್ಬನೇ ಗ್ರಾಹಕರಿಗೆ ಮಾರಾಟ ಮಾಡಿದ್ದಾರೆ.

Alcohol Purchase Bill Viral: Filed Case Against Bar Owner In Bengaluru

46 ದಿನಗಳ ಲಾಕ್‌ಡೌನ್ ನಂತರ ಸೋಮವಾರ ಮದ್ಯದಂಗಡಿಗಳು ಮತ್ತೆ ತೆರೆದ ಕೆಲವೇ ಗಂಟೆಗಳ ನಂತರ ಈ ಮದ್ಯ ಖರೀದಿ ಬಿಲ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅಬಕಾರಿ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಅದರೆ ಈ ಬಿಲ್‌ ನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಖರೀದಿದಾರ ಇನ್ನೂ ಪತ್ತೆ ಆಗಿಲ್ಲ. ಅಬಕಾರಿ ಇಲಾಖೆಯು ಖರೀದಿದಾರರ ವಿರುದ್ಧವೂ ಪ್ರಕರಣ ದಾಖಲಿಸಬಹುದಾಗಿದೆ, ಏಕೆಂದರೆ ನಿಯಮಗಳು ಓರ್ವ ವ್ಯಕ್ತಿಯು 2.6 ಲೀಟರ್‌ಗಿಂತ ಹೆಚ್ಚಿನ ಮದ್ಯ ಹೊಂದುವುದನ್ನು ನಿಷೇಧಿಸಿದೆ.

ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ?ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ?

ಅಬಕಾರಿ ಅಧಿಕಾರಿಗಳು ಅಂಗಡಿ ಮಾಲೀಕರನ್ನು ಪ್ರಶ್ನಿಸಿದಾಗ, ಎಂಟು ಜನರ ಗುಂಪು ಈ ಮದ್ಯವನ್ನು ಖರೀದಿಸಿದೆ, ಆದರೆ ಒಂದೇ ಕಾರ್ಡ್ ಬಳಸಿ ಹಣ ಪಾವತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

""ಇದು ಅಬಕಾರಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಆಗಿದ್ದು, ಮದ್ಯ ಮಾರಾಟಗಾರ ಎಸ್‌.ವೆಂಕಟೇಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ '' ಎಂದು ಬೆಂಗಳೂರು ದಕ್ಷಿಣ ವಿಭಾಗದ ಅಬಕಾರಿ ಜಿಲ್ಲಾಧಿಕಾರಿ ಎ.ಗಿರಿ 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದರು. ಖರೀದಿಸಿದಾತನನ್ನು ಪತ್ತೆ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.

ಈ ಮಧ್ಯೆ ಮಂಗಳೂರಿನಲ್ಲಿ ಕೂಡ ಓರ್ವ ಖರೀದಿಸಿರುವ 59,952 ರೂ.ಗಳ ಬಿಲ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

English summary
The Karnataka Excise Department has filed a case against the seller for selling liquor beyond the sanctioned limit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X