ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲೆ ಆರಂಭದ ಬೆನ್ನಲ್ಲೇ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟವೂ ರೆಡಿ!

|
Google Oneindia Kannada News

ಬೆಂಗಳೂರು, ಮೇ 16: 35 ದಿನಗಳ ಬೇಸಿಗೆಯ ರಜೆಯ ನಂತರ ಶಾಲೆಗಳು ಪುನರಾರಂಭಗೊಂಡಿದ್ದು, ಪ್ರಸಕ್ತ 2022-23 ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳು ಮರಳಿ ಶಾಲೆಗೆ ಬಂದಿದ್ದಾರೆ. ಈ ನಿಟ್ಟಿನಲ್ಲಿ, ಅಕ್ಷಯ ಪಾತ್ರೆ ಪ್ರತಿಷ್ಠಾನ ಬೆಂಗಳೂರಿನ ಸುತ್ತಮುತ್ತಲಿನ 1200 ಶಾಲೆಗಳಲ್ಲಿ ಓದುತ್ತಿರುವ 1,50,000 ಮಕ್ಕಳಿಗೆ, ರಾಜಾಜಿನಗರ, ಗುಣಿ ಅಗ್ರಹಾರ ಹಾಗೂ ಜಿಗಣಿಯಲ್ಲಿರುವ ಕೇಂದ್ರೀಕೃತ ಪಾಕಶಾಲೆಗಳ ಮೂಲಕ ಬಿಸಿಯೂಟವನ್ನು ಇಂದಿನಿಂದ 16ನೇ ಮೇ-2022 ನಿಂದ ನೀಡಲಿದೆ. ಪ್ರತಿಷ್ಠಾನದ ಬಿಸಿಯೂಟ ಯೋಜನೆ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳ ಮಕ್ಕಳಿಗೆ ಪ್ರಯೋಜನವಾಗಲಿದೆ.

ಮದ್ಯಾಹ್ನ ಬಿಸಿಯೂಟ ಕಾರ್ಯಕ್ರಮ ಪುನರಾರಂಭಗೊಂಡಿರುವ ಬೆನ್ನಲ್ಲೇ, ಇದರ ಅನುಷ್ಠಾನದಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪೌಷ್ಟಿಕ ಆಹಾರ ಪೂರೈಕೆ ಹಾಗೂ ಕೋವಿಡ್ ಶಿಷ್ಟಾಚಾರ ನಿಯಮಾವಳಿಗಳನ್ನು ಪಾಲಿಸಲು ನಮ್ಮ ಸಿಬ್ಬಂದಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗಿದೆ. ಬಿಸಿಯೂಟದ ತಯಾರಿ, ಪ್ಯಾಕೇಜಿಂಗ್ ಹಾಗೂ ಪೂರೈಕೆಯಾಗುವವರೆಗೂ ಕಟ್ಟುನಿಟ್ಟಿನ ಕೋವಿಡ್ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗುತ್ತದೆ.

ಪಿಎಂ ಪೋಷಣ್ ವ್ಯಾಪ್ತಿಗೆ 11.20 ಲಕ್ಷ ಶಾಲೆ, 11.80 ಕೋಟಿ ಮಕ್ಕಳುಪಿಎಂ ಪೋಷಣ್ ವ್ಯಾಪ್ತಿಗೆ 11.20 ಲಕ್ಷ ಶಾಲೆ, 11.80 ಕೋಟಿ ಮಕ್ಕಳು

ಸೊಪ್ಪಿನ ಸಾಂಬಾರ್ ಹಾಗೂ ಅನ್ನ

ಸೊಪ್ಪಿನ ಸಾಂಬಾರ್ ಹಾಗೂ ಅನ್ನ

35 ದಿನಗಳ ಬೇಸಿಗೆ ರಜೆಯ ನಂತರ ಪುನರಾರಂಭಗೊಂಡಿರುವ ಶಾಲೆಗಳ ಫಲಾನುಭವಿ ಮಕ್ಕಳಿಗೆ ವಿಶೇಷವಾದ ಖಾದ್ಯಪಟ್ಟಿಯನ್ನು ಪ್ರತಿಷ್ಠಾನವು ತಯಾರಿಸಿದ್ದು, ಅದರಲ್ಲಿ: ಪುಷ್ಟೀಕರಿಸಿದ ಅನ್ನ (ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಬೇಕಾಗಿರುವ ಪೋಷಕಾಂಶಗಳನ್ನು ಸೇರಿಸುವುದು), ಸೊಪ್ಪಿನ ಸಾಂಬಾರ್, ಹೆಸರು ಬೇಳೆ ಪಾಯಸವನ್ನು ನೀಡಲಾಗುತ್ತದೆ.

Recommended Video

ಈ ಬೌಲರ್ ನ ಹಾಡಿ ಹೊಗಳಿದ ಎಂ ಎಸ್ ಧೋನಿ! | Oneindia Kannada
ಈ ಯೋಜನೆ ಪುನರ್ ಆರಂಭ

ಈ ಯೋಜನೆ ಪುನರ್ ಆರಂಭ

ಕೋವಿಡ್ -19 ಸಾಂಕ್ರಾಮಿಕದ ದೆಸೆಯಿಂದ ಶಾಲೆಗಳು ಮುಚ್ಚಿದ್ದರಿಂದ ಕಲಿಕೆ ಜೊತೆಗೆ ಪೌಷ್ಟಿಕ ಆಹಾರದ ಕೊರತೆಯನ್ನು ಅನೇಕ ಮಕ್ಕಳು ಎದುರಿಸಿದ್ದಾರೆ. ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿ 2021 ಅಕ್ಟೋಬರ್ ತಿಂಗಳಿನಿಂದ ಈ ಯೋಜನೆ ಪುನರ್ ಆರಂಭಿಸಲಾಯಿತು. ಇದರಿಂದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಯೋಜನ ಪಡೆದುಕೊಂಡಿವೆ.

 ಪ್ರೌಢಶಿಕ್ಷಣ ಇಲಾಖೆಯಿಂದ ಸೂಚನೆ

ಪ್ರೌಢಶಿಕ್ಷಣ ಇಲಾಖೆಯಿಂದ ಸೂಚನೆ

''18 ತಿಂಗಳ ನಂತರ ಶಾಲೆಗಳನ್ನು ಪುನರಾರಂಭಿಸಿದ ನಂತರ, ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ, ಆಲೂಗಡ್ಡೆ ಮತ್ತು ಎಲೆಕೋಸು ತುಂಬಿದ ವೆಜ್ ಬಿರಿಯಾನಿ ಮತ್ತು ಮೂಂಗ್ ದಾಲ್ ಪಾಯಸಂ ರೂಪದಲ್ಲಿ ಸಿಹಿ ಹೀಗೆ ನಾವು ಫಲಾನುಭವಿಗಳಿಗೆ ವಿಶೇಷ ಮೆನುವನ್ನು ತಯಾರಿಸಿದ್ದೇವೆ," ಎಂದು ಅಕ್ಷಯಪಾತ್ರ ಸಂಸ್ಥೆಯ ಪ್ರತಿನಿಧಿ ತಿಳಿಸಿದರು. ಉಪ್ಪು, ಎಣ್ಣೆ ಮತ್ತು ಬೇಳೆ ಸಂಗ್ರಹಿಸಿ ವಿತರಿಸಲು ಕರ್ನಾಟಕ ಆಹಾರ ನಿಗಮಕ್ಕೆ ನಿರ್ದೇಶನ ನೀಡಲಾಗಿದೆ. ಶಾಲೆಗಳು ಆರಂಭವಾಗಿ ಅಲ್ಲಿಯೇ ಅಡುಗೆ ಮಾಡುವ ವ್ಯವಸ್ಥೆ ಮತ್ತೆ ಜಾರಿಗೆ ಬರುವವರೆಗೆ ಈ ವ್ಯವಸ್ಥೆ ಮುಂದುವರೆಸಲು ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಕೊರತೆ

ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಕೊರತೆ

ಶಿಕ್ಷಣ ತಜ್ಞರು, ಆರೋಗ್ಯ ತಜ್ಞರು, ಶಾಲಾ ಅಭಿವೃದ್ಧಿ ಮತ್ತು ಸಲಹಾ ಸಮಿತಿಯ ಸದಸ್ಯರು ಮತ್ತು ಶಿಕ್ಷಕರು ಆರನೇ ತರಗತಿಗಿಂತ ಕಡಿಮೆ ತರಗತಿಗಳನ್ನು ಮುಚ್ಚುವಂತೆ ಸಲಹೆಗಳನ್ನು ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಕೊರತೆ ಎದುರಾಗುತ್ತಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದ್ದಾರೆ. ಅಂಗನವಾಡಿಗಳೂ ಬಂದ್ ಆಗಿದ್ದು, ಮಕ್ಕಳಲ್ಲಿ ಅಪೌಷ್ಟಿಕತೆ ಎದುರಾಗುತ್ತಿದೆ. ಸರ್ಕಾರ ಕೂಡಲೇ ಬಿಸಿಯೂಟ ಕಾರ್ಯಕ್ರಮ ಆರಂಭಿಸಬೇಕಿದೆ ಎಂದು ಆರೋಗ್ಯ ತಜ್ಞ ಡಾ.ಬೆವಿಂಜೆ ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ.

English summary
In view of this, The Akshaya Patra Foundation today resumed the Mid-Day Meal (MDM) Scheme in Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X