ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷಾಂತರ ವಿದ್ಯಾರ್ಥಿಗಳಿಗೆ ಶುಭ ಸುದ್ದಿ, ಮಧ್ಯಾಹ್ನದ ಬಿಸಿಊಟ ಆರಂಭ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21: ಕೋವಿಡ್ -19 ಸಾಂಕ್ರಾಮಿಕದ ದೆಸೆಯಿಂದ ಶಾಲೆಗಳು ಮುಚ್ಚಿದ್ದರಿಂದ ಕಲಿಕೆ ಜೊತೆಗೆ ಪೌಷ್ಟಿಕ ಆಹಾರದ ಕೊರತೆಯನ್ನು ಅನೇಕ ಮಕ್ಕಳು ಎದುರಿಸಿದ್ದಾರೆ. ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಇದರಿಂದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

"ಕೋವಿಡ್ -19 ಸಾಂಕ್ರಾಮಿಕವು ಕಳೆದ 18 ತಿಂಗಳುಗಳಿಂದ ಮಕ್ಕಳನ್ನು ಶಾಲೆಯಿಂದ ಹೊರಗಿಟ್ಟ ನಂತರ ಅಕ್ಷಯ ಪಾತ್ರೆ ಪ್ರತಿಷ್ಠಾನವು ಇಂದು ಮಧ್ಯಾಹ್ನದ ಊಟ (ಎಂಡಿಎಂ) ಯೋಜನೆಯನ್ನು ಪುನರಾರಂಭಿಸಿದೆ, ಕರ್ನಾಟಕ ರಾಜ್ಯ ಸರ್ಕಾರದ ಧನಾತ್ಮಕ ನಿರ್ಧಾರಕ್ಕೆ ಧನ್ಯವಾದಗಳು,'' ಎಂದು ಬೆಂಗಳೂರು ಮೂಲದ ಅಕ್ಷಯಪಾತ್ರ ಫೌಂಡೇಶನ್ ಪ್ರತಿಕ್ರಿಯಿಸಿದೆ.

ಮಧ್ಯಾಹ್ನದ ಊಟ ಕಾರ್ಯಕ್ರಮವು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದ್ದು, ಅವರು ಬಿಸಿ ಪೌಷ್ಟಿಕ ಆಹಾರವನ್ನು ಸೇವಿಸುತ್ತಾರೆ.

Akshaya Patra Foundation starts serving Mid Day meals in Bengaluru

ಇಂದು, ರಾಜಾಜಿನಗರ, ವಸಂತಪುರ ಮತ್ತು ಜಿಗಣಿ ಕೇಂದ್ರೀಕೃತ ಅಡುಗೆಮನೆಗಳಲ್ಲಿರುವ ನಮ್ಮ ಮೂರು ಅಡುಗೆಮನೆಗಳ ಮೂಲಕ ಬೆಂಗಳೂರು ಮತ್ತು ಸುತ್ತಮುತ್ತಲಿನ 789 ಶಾಲೆಗಳಲ್ಲಿ ಓದುತ್ತಿರುವ 75,000 ಕ್ಕೂ ಹೆಚ್ಚು ಮಕ್ಕಳಿಗೆ ಇಂದಿನಿಂದ ಸೇವೆ ಆರಂಭಿಸಲಾಗಿದೆ.

ಶಾಲೆಯ ಊಟ ಕಾರ್ಯಕ್ರಮವನ್ನು ಸುರಕ್ಷಿತ ರೀತಿಯಲ್ಲಿ ಪುನರಾರಂಭಿಸುವ ಅಗತ್ಯವನ್ನು ಪ್ರತಿಷ್ಠಾನವು ಗುರುತಿಸುತ್ತದೆ. ಸುರಕ್ಷಿತ ಮತ್ತು ಪೌಷ್ಟಿಕ ಆಹಾರ ವಿತರಣೆಗಾಗಿ ನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಉದ್ಯೋಗಿಗಳಿಗೆ ಸಂಪೂರ್ಣ ಲಸಿಕೆ ನೀಡಲಾಗಿದೆ ಮತ್ತು ಮ್ಯಾಪ್ ಮಾಡಿದ ಶಾಲೆಗಳಿಗೆ ಆಹಾರ ತಯಾರಿಕೆ, ಪ್ಯಾಕೇಜಿಂಗ್ ಮಾಡುವುದು ಮತ್ತು ತಲುಪಿಸುವಲ್ಲಿ ನಾವು ಕೋವಿಡ್ ಸುರಕ್ಷತಾ ಪ್ರೋಟೋಕಾಲ್‍ಗಳನ್ನು ಎಚ್ಚರಿಕೆಯಿಂದ ಅನುಸರಿಸಲು ಮತ್ತು ಅಗತ್ಯ ತರಬೇತಿ ನೀಡಲಾಗಿದೆ.

''18 ತಿಂಗಳ ನಂತರ ಶಾಲೆಗಳನ್ನು ಪುನರಾರಂಭಿಸಿದ ನಂತರ, ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ, ಆಲೂಗಡ್ಡೆ ಮತ್ತು ಎಲೆಕೋಸು ತುಂಬಿದ ವೆಜ್ ಬಿರಿಯಾನಿ ಮತ್ತು ಮೂಂಗ್ ದಾಲ್ ಪಾಯಸಂ ರೂಪದಲ್ಲಿ ಸಿಹಿ ಹೀಗೆ ನಾವು ಫಲಾನುಭವಿಗಳಿಗೆ ವಿಶೇಷ ಮೆನುವನ್ನು ತಯಾರಿಸಿದ್ದೇವೆ," ಎಂದು ಅಕ್ಷಯಪಾತ್ರ ಸಂಸ್ಥೆಯ ಪ್ರತಿನಿಧಿ ತಿಳಿಸಿದರು.

Akshaya Patra Foundation starts serving Mid Day meals in Bengaluru

ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಕೊರತೆ:
ಶಿಕ್ಷಣ ತಜ್ಞರು, ಆರೋಗ್ಯ ತಜ್ಞರು, ಶಾಲಾ ಅಭಿವೃದ್ಧಿ ಮತ್ತು ಸಲಹಾ ಸಮಿತಿಯ ಸದಸ್ಯರು ಮತ್ತು ಶಿಕ್ಷಕರು ಆರನೇ ತರಗತಿಗಿಂತ ಕಡಿಮೆ ತರಗತಿಗಳನ್ನು ಮುಚ್ಚುವಂತೆ ಸಲಹೆಗಳನ್ನು ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಕೊರತೆ ಎದುರಾಗುತ್ತಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದ್ದಾರೆ. ಅಂಗನವಾಡಿಗಳೂ ಬಂದ್ ಆಗಿದ್ದು, ಮಕ್ಕಳಲ್ಲಿ ಅಪೌಷ್ಟಿಕತೆ ಎದುರಾಗುತ್ತಿದೆ. ಸರ್ಕಾರ ಕೂಡಲೇ ಬಿಸಿಯೂಟ ಕಾರ್ಯಕ್ರಮ ಆರಂಭಿಸಬೇಕಿದೆ ಎಂದು ಆರೋಗ್ಯ ತಜ್ಞ ಡಾ.ಬೆವಿಂಜೆ ಶ್ರೀನಿವಾಸ ಕಕ್ಕಿಳಾಯ ಅವರು ಹೇಳಿದ್ದಾರೆ.

ಬಿಸಿಯೂಟದ ಬದಲಾಗಿ ಸರ್ಕಾರ ಫುಡ್ ಕಿಟ್ ಗಳನ್ನು ನೀಡಿದ್ದರೂ ಕೂಡ ಅದರಲ್ಲಿ ಅಕ್ಕಿ, ಬೇಳೆಯನ್ನಷ್ಟೇ ನೀಡಲಾಗಿದೆ. ತರಕಾರಿ, ಹಾಲಿನ ಪುಡಿ ನೀಡಲಾಗಿಲ್ಲ. ಕೂಲಿಗೆ ತೆರಳಲುವ ಪೋಷಕರು ಮನೆಯಲ್ಲಿ ಆಹಾರವನ್ನು ತಯಾರಿಸುವುದಿಲ್ಲ. ಮಕ್ಕಳು ಆಹಾರವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ನೀಡುವ ಫುಡ್ ಕಿಟ್ ಗಳು ಉಪಯೋಗಕ್ಕೆ ಬರುವುದಿಲ್ಲ ಎಂದು ಪೋಷಕರೊಬ್ಬರು ಹೇಳಿದ್ದಾರೆ.

Akshaya Patra Foundation starts serving Mid Day meals in Bengaluru

ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಅಡುಗೆ ಎಣ್ಣೆ ಹಾಗೂ ಬೇಳೆಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

Recommended Video

ವಿದೇಶದಿಂದ ಸಿಕ್ಕ ಗಿಫ್ಟ್ ಗಳನ್ನೇ ಮಾರಿಕೊಳ್ಳೋ ದುಸ್ಥಿತಿ ಬಂತು ಪಾಕಿಸ್ತಾನಕ್ಕೆ | Oneindia Kannada

ಉಪ್ಪು, ಎಣ್ಣೆ ಮತ್ತು ಬೇಳೆ ಸಂಗ್ರಹಿಸಿ ವಿತರಿಸಲು ಕರ್ನಾಟಕ ಆಹಾರ ನಿಗಮಕ್ಕೆ ನಿರ್ದೇಶನ ನೀಡಲಾಗಿದೆ. ಶಾಲೆಗಳು ಆರಂಭವಾಗಿ ಅಲ್ಲಿಯೇ ಅಡುಗೆ ಮಾಡುವ ವ್ಯವಸ್ಥೆ ಮತ್ತೆ ಜಾರಿಗೆ ಬರುವವರೆಗೆ ಈ ವ್ಯವಸ್ಥೆ ಮುಂದುವರೆಸಲು ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ತಿಳಿಸಿದೆ.

English summary
Akshaya Patra Foundation starts serving Mid Day meals in Bengaluru. A Bengaluru-based non-profit organisation running one of the world’s largest school meals project in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X