ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.ಜೆ. ಹಳ್ಳಿ ಗಲಭೆ: ಸಂಪತ್ ರಾಜ್‌ಗೆ ಜಾಮೀನು; ಸೋನಿಯಾ ಗಾಂಧಿಗೆ ಪತ್ರ!

|
Google Oneindia Kannada News

ಬೆಂಗಳೂರು, ಫೆ. 12: ಇಲ್ಲಿನ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಗಲಭೆಯ ಪ್ರಮುಖ ಆರೋಪ, ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ಜಾಮೀನು ಸಿಕ್ಕಿದೆ. ಸಂಪತ್ ರಾಜ್ ಅವರಿಗೆ ಜಾಮೀನು ಸಿಕ್ಕಿರುವ ಕುರಿತು ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ‌ ಶ್ರೀನಿವಾಸ್ ಮೂರ್ತಿ ಅವರು ಪ್ರತಿಕ್ರಿಯೆ ನೀಡಿದ್ದು, ಅವನು ಸುಮ್ಮನೆ ಕೂರುವುದಿಲ್ಲ, ನನಗೆ ಮುಂದೆಯೂ ಬೆದರಿಕೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮನೆಯನ್ನೇ ಸುಟ್ಟವರು, ನನ್ನನ್ನ ಬಿಡ್ತಾರಾ? ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಪ್ರಶ್ನೆ ಮಾಡಿದ್ದಾರೆ. ಆದರೂ ನಾನು ಹೋರಾಟವನ್ನು ಮುಂದುವರೆಸುತ್ತೇನೆ. ಈ ಹಿಂದೆಯೆ ಸಂಪತ್ ಮೇಲೆ ಕ್ರಮಕ್ಕೆ ಒತ್ತಡ ತಂದಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೂ ನಾವೆಲ್ಲರೂ ಮನವಿ ಮಾಡಿದ್ದೇವೆ. ಆದರೂ ಡಿಕೆ ಶಿವಕುಮಾರ್ ಅವರು ಏನೂ ಕ್ರಮ ತೆಗೆದುಕೊಂಡಿಲ್ಲ. ನಾನೊಬ್ಬ ಶಾಸಕ, ನನಗೇ ಈ ರೀತಿಯಾಗಿದೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಮಾದ್ಯಮಗಳ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು ಗಲಭೆ FIR: ಬೆಚ್ಚಿಬಿಳಿಸುತ್ತಿದೆ ಲೂಟಿ, ಸಂಚು!ಬೆಂಗಳೂರು ಗಲಭೆ FIR: ಬೆಚ್ಚಿಬಿಳಿಸುತ್ತಿದೆ ಲೂಟಿ, ಸಂಚು!

ಡಿ.ಕೆ. ಶಿವಕುಮಾರ್ ಮೇಲೆ ಬೇಸರ

ಡಿ.ಕೆ. ಶಿವಕುಮಾರ್ ಮೇಲೆ ಬೇಸರ

ಅವರಿಗೆ ಶಿಕ್ಷೆಯಾಗಬೇಕು, ಆದರೆ ಇವತ್ತಿಗೂ ಆಗಿಲ್ಲ. ನ್ಯಾಯಾಲಯ ಜಾಮೀನು ಕೊಟ್ಟಿರುವ ಬಗ್ಗೆ ನಾನು ಮಾತನಾಡುವುದಿಲ್ಲ. ಅದನ್ನು ನಾನು ಒಪ್ಪುತ್ತೇನೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಾನು ದೇವರನ್ನು ನಂಬಿದ್ದೇನೆ. ಆ ದೇವರು ಶಿಕ್ಷೆಯನ್ನು ಕೊಡಬೇಕು. ನಾನು‌ ಹೋರಾಟ ಮುಂದುವರಿಸುತ್ತೇನೆ. ಮಾಧ್ಯಮಗಳು ನನ್ನ‌ ಬೆಂಬಲಕ್ಕಿವೆ. ಮಾಧ್ಯಮಗಳು ನಮಗೆ ನ್ಯಾಯ ಕೊಡಿಸುವ ಭರವಸೆಯಿದೆ. ನಮ್ಮ ತಂದೆಯೂ ರಾಜಕೀಯದಲ್ಲಿದ್ದವರು. ಡಿ.ಕೆ.ಶಿವಕುಮಾರ್ ಯಾಕೆ ಅವರ ಪರ ನಿಂತಿದ್ದಾರೋ ಗೊತ್ತಿಲ್ಲ ಎಂದು ಆತಂಕದಿಂದ ಮಾದ್ಯಮಗಳೊಂದಿದೆ ತಮ್ಮ ನೋವನ್ನು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಹಂಚಿಕೊಂಡರು.

ಬಿಜೆಪಿಗೆ ಅಖಂಡ ಶ್ರೀನಿವಾಸಮೂರ್ತಿ? ಆರ್. ಅಶೋಕ್ ಸ್ಪಷ್ಟನೆ!ಬಿಜೆಪಿಗೆ ಅಖಂಡ ಶ್ರೀನಿವಾಸಮೂರ್ತಿ? ಆರ್. ಅಶೋಕ್ ಸ್ಪಷ್ಟನೆ!

ಸೋನಿಯಾ ಗಾಂಧಿಗೆ ಪತ್ರ!

ಸೋನಿಯಾ ಗಾಂಧಿಗೆ ಪತ್ರ!

ನಾನು‌ ಬೇರೆ ಪಕ್ಷದಿಂದ ವಲಸೆ ಬಂದಿರಬಹುದು. ಆದರೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಅತಿ ಹೆಚ್ಚಿನ ಮತಗಳಿಂದ ಗೆದ್ದಿದ್ದೇನೆ. ಮನೆಯನ್ನೇ ಸುಟ್ಟವನು, ನನ್ನನ್ನು ಸುಡದೇ ಬಿಡುತ್ತಾರಾ? ನನಗೆ ಈಗಲೂ ಬೆದರಿಕೆ ಇದೆ, ಮುಂದೆಯೂ ಇರುತ್ತದೆ. ಮನೆ ಸುಟ್ಟುಕೊಂಡು ನಾವು ಬೀದಿಯಲ್ಲಿದ್ದೇವೆ. ರಾಜ್ಯ ಕಾಂಗ್ರೆಸ್ ನಾಯಕರು ಕ್ರಮಕ್ಕೆ ಮುಂದಾಗದಿದ್ದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುತ್ತೇನೆ. ಘಟನೆಯನ್ನು ವಿವರಿಸಿ ಎಲ್ಲವನ್ನೂ ಹೈಕಮಾಂಡ್ ಗಮನಕ್ಕೆ ತರುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಅವರು ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ.

ಅಖಂಡ ಶ್ರೀನಿವಾಸಮೂರ್ತಿ ಒತ್ತಾಯ

ಅಖಂಡ ಶ್ರೀನಿವಾಸಮೂರ್ತಿ ಒತ್ತಾಯ

ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಶಾಸಕ ಶ್ರೀನಿವಾಸಮೂರ್ತಿ ಅವರು ಬಹಿರಂಗವಾಗಿಯೆ ಆಗ್ರಹಿಸಿದ್ದರು. ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂಥ ವಿಚಾರಗಳನ್ನು ಬಹಿರಂಗವಾಗಿ ಚರ್ಚೆ ಮಾಡುವುದಲ್ಲ, ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು ಎಂದಿದ್ದರು. ಜೊತೆಗೆ ಶ್ರೀನಿವಾಸಮೂರ್ತಿ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು.


ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಈವರೆಗೂ ನನ್ನ ಬಳಿ ಬಂದು ಮಾತನಾಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ಅದರದೇ ಆದ ಪ್ರಕ್ರಿಯೆ ನಡೆಯುತ್ತಿದೆ. ಕೇವಲ ಒಬ್ಬರ ಅಭಿಪ್ರಾಯದ ಮೇಲೆ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಶ್ರೀನಿವಾಸಮೂರ್ತಿ ಅವರ ಆರೋಪದ ಬಗ್ಗೆ ಈ ಹಿಂದೆಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದರು.

Recommended Video

'ಟಗರು' ವಿರುದ್ಧ 'ಹಳ್ಳಿಹಕ್ಕಿ' ಗುಟುರು..! | Oneindia Kannada
ಘಟನೆಯ ವಿವರ

ಘಟನೆಯ ವಿವರ

ಫೇಸ್‌ಬುಕ್‌ ಕಮೆಂಟ್‌ಗೆ ಸಂಬಂಧಿಸಿದಂತೆ ಕಳೆದ ಆಗಷ್ಟ್‌ 11, 2020ರಂದು ರಾತ್ರಿ ಏಕಾಏಕಿ 2 ಸಾವಿರ ರಿಂದ 3 ಸಾವಿರ ಜನ ದುಷ್ಕರ್ಮಿಗಳ ಗುಂಪು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ದಾಳಿ ಮಾಡಿತ್ತು. ಮನೆಗೆ ಬೆಂಕಿ ಇಟ್ಟಿದ್ದ ದುಷ್ಕರ್ಮಿಗಳು, ಜನರು ಮನೆಯ ಹೊರಭಾಗದಲ್ಲಿ ನಿಲ್ಲಿಸಿದ್ದ ಕಾರುಗಳು, ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದರು ಎಂದು ಎಫ್‌ಐಆರ್ ದಾಖಲಾಗಿತ್ತು.

ಜೊತೆಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿನ ಒಟ್ಟು 28 ವಸ್ತುಗಳನ್ನು ಲೂಟಿ ಮಾಡಲಾಗಿದೆ. ಮನೆಯಲ್ಲಿನ ಸುಮಾರು 20 ಲಕ್ಷ ರೂ ಮೌಲ್ಯದ 5 ನೂರು ಗ್ರಾಂ ಚಿನ್ನಾಭರಣ, ಕಾವಲ್ ಬೈರಸಂದ್ರದ ವಾಸದ ಮನೆಯ ಮೂಲ ಪತ್ರಗಳು, ಶ್ಯಾಂಪುರ ರಸ್ತೆಯ ವಾಸದ ಮನೆ ಹಾಗೂ ವಾಣಿಜ್ಯ ಕಟ್ಟಡದ ಮೂಲಪತ್ರಗಳು, ವಾಹನಗಳ ಮೂಲ ದಾಖಲೆಗಳು, ಸಾದಹಳ್ಳಿ ಹಾಗೂ ಇತರೇ ಜಮೀನಿನ ಮೂಲಪತ್ರಗಳು, ಅಂದಾಜು 50 ಲಕ್ಷ ರೂ. ಮೌಲ್ಯದ ಆರು ಗಾಡ್ರೇಜ್ ಬೀರುಗಳು, ಎರಡು ಕಂಪ್ಯೂಟರ್‌ಗಳು, ಎರಡು ಲ್ಯಾಪ್‌ಟಾಪ್‌ಗಳು, ಒಂದು ಟೆಲಿಫೋನ್, ಎರಡು ಟಿವಿಗಳು, ಎರಡು ಕಾರ್ಯನಿರ್ವಾಹಕ ಕಡತಗಳನ್ನು ಲೂಟಿ ಮಾಡಿದ್ದಾರೆ.

ಮನೆಯ ಹೊರಗಡೆ ನಿಲ್ಲಿಸಿದ್ದ ಹೊಂಡಾ ಬ್ರಿಯೋ ಕಾರು, ಯಮಹಾ ಆರ್‌ಎಕ್ಸ್‌ ಬೈ್ಟ, ಎರಡು ರಾಯನ್ ಎಲ್‌ಫೀಲ್ಡ್‌ ಬೈಕ್‌ಗಳು, ಬಜಾಜ್ ಸ್ಕೂಟರ್‌ ಸೇರಿದಂತೆ ಒಟ್ಟು ಒಟ್ಟು ಸುಮಾರು 20 ಲಕ್ಷ ರೂ. ಮೌಲ್ಯದ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ಇನ್ನು ಶಾಸಕರ ಸಹೋದರ ಮಹೇಶ್ ಕುಮಾರ್ ಅವರಿಗೆ ಸೇರಿದ 10 ಲಕ್ಷ ರೂ ಮೌಲ್ಯದ 250 ಗ್ರಾಂ ಚಿನ್ನಾಭರಣ, ಬೀರುವಿನಲ್ಲಿದ್ದ 8 ರಿಂದ 8.5 ಲಕ್ಷ ರೂ. ನಗದು ಹಣವನ್ನು ದೋಚಿದ್ದಾರೆ. ಜೊತೆಗೆ ವಾಹನಗಳ ನೋಂದಣಿ ಪತ್ರಗಳು, ಪಾಸ್‌ಪೋರ್ಟ್‌ಗಳು, ವಿದ್ಯಾಭ್ಯಾಸದ ಎಲ್ಲಾ ಕಾಗದ ಪತ್ರಗಳು, ಮಹೇಶ್ ಕುಮಾರ್ ಅವರಿಗೆ ಸೇರಿದ ಎಲ್ಲ ಆಸ್ತಿಗಳ ಮೂಲ ದಾಖಲೆಗಳನ್ನು ನಷ್ಠ ಮಾಡಲಾಗಿದೆ.

ಮತ್ತೊಬ್ಬ ಸಹೋದರ ಚಂದ್ರಶೇಖರ್ ಅವರಿಗೆ ಸೇರಿದ ಅಂದಾಜು 20 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನಾಭರಣ, ಜಮೀನು ಮತ್ತು ನಿವೇಶನ ಮೂಲ ಪತ್ರಗಳು, ವಿದ್ಯಾಭ್ಯಾಸದ ಎಲ್ಲ ಮೂಲ ಪ್ರಮಾಣಪತ್ರಗಳು, 3 ಲಕ್ಷ ರೂಪಾಯಿ ನಗದು ಹಣವನ್ನು ಕಿಡಗೇಡಿಗಳು ದೋಚಿದ್ದಾರೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ದೂರಿನನ್ವಯ ಸುಮಾರು 3 ಕೋಟಿ ರೂಪಾಯಿಗಳಷ್ಟು ಹಾನಿಯಾಗಿದೆ ಎಂದು ಎಫ್‌ಐಆರ್ ದಾಖಲಾಗಿತ್ತು.

English summary
State Congress leaders are not taking any action against former Mayor Sampath Raj, the main accused in the Bengaluru riots on August 11, 2020. Pukeshinagar Congress MLA Akhanda Srinivasamurthy said he would write a letter to AICC president Sonia Gandhi. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X