ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ಯಾಕ್ಸಿ ಚಾಲಕನ ಸಾವು, ಬಿಐಎಎಲ್ ಗೆ ತಲೆ ಬಿಸಿ

By Mahesh
|
Google Oneindia Kannada News

ಬೆಂಗಳೂರು, ಅ.28: ದೇವನಹಳ್ಳಿ ವಿಮಾನನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಕ್ಕೆ ಬಿಐಎಎಲ್ ಸಂಸ್ಥೆ ನಿರ್ಲಕ್ಷ್ಯವೇ ಕಾರಣೆ ಎಂದು ಹೇಳಿ ಟ್ಯಾಕ್ಸಿ ಸೇವೆ ಬಂದ್ಮಾಡಲಾಗಿದೆ. ಇದರಿಂದ ವಿಮಾನದ ಬಳಿ ಆಗಮಿಸಿದ ಪ್ರಯಾಣಿಕರು ಪರದಾಡುವಂತಾಗಿದೆ. ಭಾನುವಾರ ಶುರುವಾದ ಬಂದ್ ಸೋಮವಾರ ಬೆಳಗ್ಗೆ ಕೂಡಾ ಮುಂದುವರೆದಿದೆ.

ಟ್ಯಾಕ್ಸಿ ಚಾಲಕನ ಸಾವಿಗೆ ಪರಿಹಾರ ರೂಪದಲ್ಲಿ ರು. 10 ಲಕ್ಷ ನೀಡಬೇಕು ಎಂದು ಟ್ಯಾಕ್ಸಿ ಚಾಲಕರು ಒತ್ತಾಯಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿ ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್ ನೀಡದಿರುವುದನ್ನು ಚಾಲಕರು ಖಂಡಿಸಿದ್ದಾರೆ.

ಬಿಐಎಎಲ್ ತಾರತಮ್ಯ ನೀತಿ ಖಂಡಿಸಿ 500ಕ್ಕೂ ಹೆಚ್ಚು ಟ್ಯಾಕ್ಸಿ ಚಾಲಕರು ವಿಮಾನ ನಿಲ್ದಾಣದ ಆವರಣದಲ್ಲೇ ರಾತ್ರಿ ಸುಮಾರು 11 ಗಂಟೆವರೆಗೂ ಪ್ರತಿಭಟನೆ ಮುಂದುವರಿಸಿದ್ದರಿಂದಾಗಿ ತೀವ್ರ ಗೊಂದಲದ ವಾತಾವರಣ ಉಂಟಾಗಿತ್ತು. ಮಧ್ಯಾಹ್ನ ಸುಮಾರು 12.30ಕ್ಕೆ ಆರಂಭವಾದ ಪ್ರತಿಭಟನೆ ರಾತ್ರಿ ಬಹುಹೊತ್ತಿನವರೆಗೂ ಮುಂದುವರಿದಿದ್ದರಿಂದ ವಿಮಾನದಲ್ಲಿ ಆಗಮಿಸಿದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.

ತುಂಬಿದ ವೋಲ್ವೋ ಬಸ್ :
ಟ್ಯಾಕ್ಸಿ ಚಾಲಕರ ಮುಷ್ಕರದಿಂದಾಗಿ ಬಿಎಂಟಿಸಿ ವೋಲ್ವೋ ಬಸ್ ತುಂಬಿ ತುಳುಕುತ್ತಿತ್ತು. ಭಾನುವಾರ ಬೆಳಿಗ್ಗೆ 10.45ರ ಸುಮಾರಿಗೆ ಮೆರು ಕ್ಯಾಬ್ ಚಾಲಕ ಮಾರುತಿ ಪ್ರಸನ್ನ (38) ತೀವ್ರ ಹೃದಯಾಘಾತವಾಗಿ ಕುಸಿದು ಬಿದ್ದರು. ಸಹ ಚಾಲಕರು ತಕ್ಷಣ ಬಿಐಎಎಲ್ ಆಂಬುಲೆನ್ಸ್ ಗೆ ಕರೆಮಾಡಿದರೂ ಸಿಬ್ಬಂದಿ ಆಂಬುಲೆನ್ಸ್ ಕಳುಹಿಸಲಿಲ್ಲ. ತೀವ್ರ ಒತ್ತಾಯದ ನಂತರ ಸುಮಾರು 45 ನಿಮಿಷ ತಡವಾಗಿ ಆಂಬುಲೆನ್ಸ್ ಕಳುಹಿಸಲಾಯಿತು. ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮಾರುತಿ ಪ್ರಸನ್ನ ಅವರು ಮೃತಪಟ್ಟರು. ಇದರಿಂದ ಕುಪಿತರಾದ ಚಾಲಕರು ಪ್ರತಿಭಟನೆಗಿಳಿದರು.

Passengers stranded as airport taxis go on snap strike

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯವರಾದ ಮಾರುತಿ ಪ್ರಸನ್ನ ಅವರು ಕಳೆದ ಕೆಲ ತಿಂಗಳುಗಳಿಂದ ಮೆರು ಕ್ಯಾಬ್ ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಿಐಎಎಲ್ ಅಧಿಕಾರಿಗಳು ಇಲ್ಲಿ ಕ್ಯಾಬ್ ಚಾಲಕರಿಗೆ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಕರೆ ಮಾಡಿದ ತಕ್ಷಣ ಆಂಬುಲೆನ್ಸ್ ನೀಡಿದ್ದರೆ ಮಾರುತಿ ಪ್ರಸನ್ನ ಅವರು ಬದುಕುವ ಸಾಧ್ಯತೆ ಇತ್ತು ಎಂದು ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾರುತಿ ಪ್ರಸನ್ನ ಅವರ ಸಾವಿಗೆ ನೇರವಾಗಿ ಬಿಐಎಎಲ್ ಅಧಿಕಾರಿಗಳೇ ಹೊಣೆ. ಹೀಗಾಗಿ ಮೇರು, ಮೆಗಾ, ಕೆಎಸ್ ಟಿಡಿಸಿ ಕ್ಯಾಬ್ ಗಳು ಮುಷ್ಕರ ನಿರತರಾಗಬೇಕಾಯಿತು. ಸುಮಾರು 2000ಕ್ಕೂ ಅಧಿಕ ಟ್ಯಾಕ್ಸಿ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಸಂಘಟನೆ ಕಾರ್ಯದರ್ಶಿ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.

ಆಗ್ನೇಯ ಡಿಸಿಪಿ ಸುರೇಶ್ ಮಾತನಾಡಿ, ಮಾರುತಿ ಪ್ರಸನ್ನ ಅವರದ್ದು ಸಹಜ ಸಾವು. ಆದರೆ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ನೀಡಿಲ್ಲ ಎಂಬ ಕಾರಣಕ್ಕೆ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಯಾರೂ ಕೂಡ ಪೊಲೀಸರಿಗೆ ದೂರು ನೀಡಿಲ್ಲ. ಆದರೆ ಸೂಕ್ತ ಪರಿಹಾರ ಕೇಳುತ್ತಿದ್ದಾರೆ ಎಂದು ಹೇಳಿದರು.

ಮಾರುತಿ ಪ್ರಸನ್ನ ಕುಟುಂಬದವರಿಗೆ ಮೆರು ಕ್ಯಾಬ್ ಸಂಸ್ಥೆ ಎರಡು ಲಕ್ಷ ಪರಿಹಾರ ನೀಡಲು ಒಪ್ಪಿಕೊಂಡಿದೆ. ಆದರೆ ಚಾಲಕರು 10 ಲಕ್ಷ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಸುರೇಶ್ ತಿಳಿಸಿದರು.

English summary
Passengers travelling to and from the Bengaluru International Airport were in for a shock when they found that none of the airport taxis were plying on Sunday and Monday(Oct.28).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X