ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Air Quality : ಬೆಂಗಳೂರಲ್ಲಿ ದಿಢೀರನೇ ಶೇ.40 ವಾಯು ಮಾಲಿನ್ಯ ಏರಿಕೆ..!

|
Google Oneindia Kannada News

ಬೆಂಗಳೂರು, ಡಿಸೆಂಬರ್ 05: ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ನಂತರ ತುಸು ಬದಲಾವಣೆಯಾಗಿದ್ದ ವಾಯು ಮಾಲಿನ್ಯ ಪ್ರಮಾಣ ಇದೀಗ ದಿಢೀರನೇ ಗಣನೀಯಮಟ್ಟಕ್ಕೆ ಏರಿಕೆ ಕಂಡಿದೆ. ಒಂದೇ ವರ್ಷದಲ್ಲಿ ಶೇ. 40ರಷ್ಟು ವಾಯುಮಾಲಿನ್ಯ ಹೆಚ್ಚಾಗಿದೆ ಎಂಬ ಅಂಶ ಬಹಿರಂಗವಾಗಿದೆ.

ಕೋವಿಡ್ ಕಾಲದಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಬೆಂಗಳೂರು ನಗರದ ವಾಯುಮಾಲೀನ್ಯ ಭಾರಿ ಪ್ರಮಾಣದಲ್ಲಿ ತಗ್ಗಿತ್ತು. ಇದೀಗ ವಾಯುಮಾಲಿನ್ಯ ಏಕಾಏಕಿ ಏರಿಕೆಯಾಗುವ ಮೂಲಕ ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿದೆ. ಇದು ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಹೊಸ ಅಧ್ಯಯನದ ಮೂಲಕ ಅಧಿಕೃತವಾಗಿದ್ದು, ಈ ಮೂಲಕ ಉದ್ಯಾನನಗರಿ, ಗ್ರೀನ್ ಸಿಟಿ ಎಂಬ ಹೆಸರಿಗೆ ಕುಂದುಂಟಾಗುವ ವಾತಾವರಣ ನಿರ್ಮಾಣವಾಗುತ್ತಿದೆ.

Breaking: ಜಗತ್ತಿನ ಮೊದಲ ಕೋವಿಡ್-19 ನಾಸಲ್ ಲಸಿಕೆಗೆ ಅನುಮೋದನೆ Breaking: ಜಗತ್ತಿನ ಮೊದಲ ಕೋವಿಡ್-19 ನಾಸಲ್ ಲಸಿಕೆಗೆ ಅನುಮೋದನೆ

ಬೆಂಗಳೂರಲ್ಲಿ ಹೆಚ್ಚಾಗುತ್ತಿದೆ ವಾಯು ಮಾಲಿನ್ಯ

ಬೆಂಗಳೂರು ನಗರದ ವಾತಾವರಣ ತಣ್ಣಗಿದ್ದಷ್ಟೂ ಗಾಳಿಯ ಗುಣಮಟ್ಟ ಕುಸಿಯುತ್ತಿದೆ. ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ವಾತಾವರಣದಲ್ಲಿ ಚಳಿಗಾಲದ ಲಕ್ಷಣಗಳು ಆರಂಭವಾಗುತ್ತಿದ್ದಂತೆಯೇ ವಾಯು ಮಾಲಿನ್ಯ ಪ್ರಮಾಣ ಕೂಡಾ ಏರಿಕೆ ಆಗಿದೆ. ವಾಯು ಗುಣಮಟ್ಟ ಸೂಚ್ಯಂಕದ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗಾ ವಹಿಸುತ್ತದೆ.

Air Pollution Sudden Increase To 40% In One Year KSPCB Report Said

1 ವರ್ಷಕ್ಕೆ ಶೇ.40ರಷ್ಟು ಮಾಲಿನ್ಯ ಏರಿಕೆ

ಬೆಂಗಳೂರಲ್ಲಿ ಪ್ರಸ್ತಕ 2022ದ ನವೆಂಬರ್ ತಿಂಗಳ 30 ದಿನಗಳ ಅಧ್ಯಯನ ಪ್ರಕಾರ AQI (ವಾಯು ಗುಣಮಟ್ಟ ಸೂಚ್ಯಂಕ) 93 ಆಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ AQI 66ನಷ್ಟು ದಾಖಲಾಗಿದೆ. ಅಂದರೆ ಒಂದೇ ವರ್ಷಕ್ಕೆ ಶೇ. 40ರಷ್ಟು ವಾಯುಮಾಲಿನ್ಯ ಏರಿಕೆ ಆಗಿದೆ.

ಅಧಿಕ ವಾಯುಮಾಲಿನ್ಯದ ಪ್ರದೇಶಗಳು

ಬೆಂಗಳೂರು ಸಿಟಿ ಜಂಕ್ಷನ್, ಹೆಬ್ಬಾಳ, ಮೈಸೂರು ರಸ್ತೆ, ಸಾಣೆಗುರುವನಹಳ್ಳಿ, ನಿಮ್ಹಾನ್ಸ್, ಜಯನಗರ ಹಾಗೂ ಸಿಲ್ಕ್ ಬೋರ್ಡ್‌ನಲ್ಲಿರುವ ಏಳು ನಿರ್ವಹಣಾ ನಿಲ್ದಾಣ‌ಗಳ ಸಹಾಯದಿಂದ AQI ಅಳೆತೆ ಮಾಡಲಾಗಿದೆ. ಅಕ್ಟೋಬರ್ ಮತ್ತು ಜನವರಿ ತಿಂಗಳ ನಡುವೆ ಕಳಪೆ ಗಾಳಿಯ ಗುಣಮಟ್ಟ ಕಂಡು ಬಂದಿದೆ. ಪ್ರತಿ ವರ್ಷ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ಹೆಚ್ಚಳವನ್ನು ಗಮನಿಸುತ್ತದೆ ಎಂದು ಮಂಡಳಿಯ ಡೇಟಾದ ಉಸ್ತುವಾರಿ ಜಯಪ್ರಕಾಶ್ ಮಾಹಿತಿ ನೀಡಿದ್ದಾರೆ.

Air Pollution Sudden Increase To 40% In One Year KSPCB Report Said

ಅಕ್ಟೋಬರ್‌ ನಂತರ ಚಳಿಗಾಲ ಆರಂಭವಾಗುತ್ತಿದ್ದಂತೆ ನಗರದ ವಾಯು ಗುಣಮಟ್ಟ ಸೂಚ್ಯಂಕ ಮೇಲ್ವಿಚಾರಣೆ ಮಾಡಲಾಗಿದೆ. ಅದರನ್ವಯ ಮಂಡಳಿಗೆ ಬಂದ ವರದಿಯು ನಗರ ನಿವಾಸಿಗಳ ಆರೋಗ್ಯ ಕಾಳಜಿ ವಹಿಸುವಂತೆ ಎಚ್ಚರಿಸುತ್ತಿದೆ. ವರದಿ ಪ್ರಕಾರ, ನಗರದಲ್ಲಿ ಗಾಳಿ ಗುಣಮಟ್ಟ ಮಧ್ಯಮ ಮತ್ತು ಅತ್ಯಂತ ಕಳಪೆ ಮಧ್ಯದಲ್ಲಿ ಇದೆ. ಚಳಿಗಾಲಕ್ಕೆ ಸಂಬಂಧಿಸಿದ ನೈಸರ್ಗಿಕ ಪರಿಸ್ಥಿತಿಗಳ ಹೊರತಾಗಿ ಹೆಚ್ಚಾದ ವಾಹನಗಳ ಹೊಗೆಯಿಂದ ಉಸಿರಾಡಲು ಶುದ್ಧ ಗಾಳಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

English summary
Bengaluru Air Pollution: Air Pollution sudden increase to 40% in one year in Bengaluru Karnataka State Pollution Control Board (KSPCB) Report said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X