ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶಿ ವಿಮಾನ ಪ್ರಯಾಣ: ಈ ರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ

|
Google Oneindia Kannada News

ನವದೆಹಲಿ, ಮೇ 23: ಮೇ 25 ರಿಂದ ಕೋವಿಡ್ ತಡೆಯ ಕಟ್ಟುನಿಟ್ಟಿನ ನಿಯಮಗಳೊಂದಿಗೆ ದೇಶಿ ವಿಮಾನಯಾನ ಆರಂಭವಾಗಲಿದೆ. ಆದರೆ, ಒಳಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಇರುವುದಿಲ್ಲ, ಇದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು ಎಂದು ಕೇಂದ್ರ ಸರ್ಕಾರ ಹೇಳಿದೆ.

Recommended Video

ನಾಳೆ ಬೇಕಾಬಿಟ್ಟಿ ರಸ್ತೆಗೆ ಇಳಿದರೆ ಕಠಿಣ ಶಿಕ್ಷೆ | Curfew | Oneindia Kannada

ಹೀಗಾಗಿ ಕರ್ನಾಟಕ ಸರ್ಕಾರ, ರಾಜ್ಯದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದಿಳಿಯುವ ಪ್ರಯಾಣಿಕರಿಗೆ, ಆರು ರಾಜ್ಯಗಳನ್ನು ಹೊರತುಪಡಿಸಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ತಗೆದಿದೆ.

ಕರ್ನಾಟಕದಲ್ಲಿ ಭಾನುವಾರ ಕರ್ಫ್ಯೂ: ಯಾವುದು ಓಪನ್? ಯಾವುದು ಬಂದ್? ಇಲ್ಲಿದೆ ಲಿಸ್ಟ್ಕರ್ನಾಟಕದಲ್ಲಿ ಭಾನುವಾರ ಕರ್ಫ್ಯೂ: ಯಾವುದು ಓಪನ್? ಯಾವುದು ಬಂದ್? ಇಲ್ಲಿದೆ ಲಿಸ್ಟ್

ಕೊರೊನಾ ಸೋಂಕಿತರು ಹೆಚ್ಚಿರುವ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ನವದೆಹಲಿ, ಮಧ್ಯಪ್ರದೇಶ ಮತ್ತು ಗುಜರಾತ್‌ನಿಂದ ವಿಮಾನದಲ್ಲಿ ಕರ್ನಾಟಕಕ್ಕೆ ಬರುವರನ್ನು 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇಡಲು ನಿರ್ಧರಿಸಲಾಗಿದೆ. ಏಳು ದಿನ ಸಾಂಸ್ಥಿಕ ಹಾಗೂ ಏಳು ದಿನ ಹೋಮ್‌ ಕ್ವಾರಂಟೈನ್‌ನಲ್ಲಿ ಇಡಲಾಗುವುದು ಎಂದು ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Domestik Flight Service Resume: Quarantine Must For 6 States In Karnataka

ಮೇ 25 ರಂದು ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಿದೆ. ವಿಮಾ ಪ್ರಯಾಣಕ್ಕೆ ಸಚಿವಾಲಯ ಹಲವಾರು ಷರತ್ತುಗಳನ್ನು ವಿಧಿಸಿದೆ. ವೃದ್ಧರು, ಗರ್ಭಿಣಿಯರು ಮತ್ತು ಮಕ್ಕಳಿಗೆ ಪ್ರಯಾಣ ಅವಕಾಶ ಇಲ್ಲ. ಮೂರನೇ ಒಂದು ಭಾಗದಷ್ಟು ವಿಮಾನಗಳು ಸಂಚರಿಸಲಿವೆ.

English summary
Domestik Flight Service Resume: Quarantine Must For 6 States In Karnataka, Maharastra, gujarat, tamilunadu, delhi, madhya pradesh and rajastan Flight passengers must take Quarantine in karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X