• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು; ವಿಮಾನ ಪ್ರಯಾಣಿಕರ ಗಮನಕ್ಕೆ

|
Google Oneindia Kannada News

ಬೆಂಗಳೂರು, ಜೂನ್ 24; ವಿವಿಧ ರಾಜ್ಯಗಳಲ್ಲಿ ಕೋವಿಡ್ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಾಗಿದೆ. ವಿಮಾನದ ಮೂಲಕ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ವಿಮಾನ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ, ಲಸಿಕೆ ಪಡೆದ ಪ್ರಮಾಣ ಪತ್ರ ಹಾಜರು ಪಡಿಸುವುದು ಕಡ್ಡಾಯವಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳಿಗೆ ಸಂಚಾರ ನಡೆಸುವ ಜನರಿಗೆ ಮಾಹಿತಿ ಇಲ್ಲಿದೆ. ಯಾವ-ಯಾವ ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್ ವರದಿ, ಲಸಿಕೆ ಪಡೆದ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ಮಾಹಿತಿ ನೀಡಲಾಗಿದೆ.

ಹಾಸನ ವಿಮಾನ ನಿಲ್ದಾಣ ಯೋಜನೆಗೆ ಅನುದಾನ ಕೊಟ್ಟ ಸರ್ಕಾರಹಾಸನ ವಿಮಾನ ನಿಲ್ದಾಣ ಯೋಜನೆಗೆ ಅನುದಾನ ಕೊಟ್ಟ ಸರ್ಕಾರ

ರಾಜಸ್ಥಾನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಆರ್‌ಟಿಪಿಸಿಆರ್ ವರದಿ ತೋರಿಸುವುದು ಬೇಡ. ಆದರೆ 28 ದಿನಗಳ ಮೊದಲು ಎರಡೂ ಡೋಸ್ ಲಸಿಕೆ ಪಡೆದಿದ್ದೇವೆ ಎಂಬ ಪ್ರಮಾಣ ಪತ್ರವನ್ನು ನೀಡಬೇಕು ನಾಗಾಲ್ಯಾಂಡ್, ಓಡಿಶಾದಲ್ಲೂ ಪ್ರಮಾಣ ಪತ್ರ ನೀಡಿದರೆ ಸಾಕು. ಪಂಜಾಬ್‌ನಲ್ಲಿ ಎರಡು ವಾರದ ಹಿಂದೆ 1 ಡೋಸ್ ಲಸಿಕೆ ಪಡೆದಿದ್ದರು ಪ್ರಯಾಣಿಕರಿಗೆ ಮುಂದೆ ಸಾಗಲು ಅವಕಾಶವಿದೆ.

ಜೂನ್ 23ರಿಂದ ಭಾರತಕ್ಕೆ ದುಬೈ ಎಮಿರೇಟ್ಸ್ ವಿಮಾನ ಹಾರಾಟಜೂನ್ 23ರಿಂದ ಭಾರತಕ್ಕೆ ದುಬೈ ಎಮಿರೇಟ್ಸ್ ವಿಮಾನ ಹಾರಾಟ

ಕೋವಿಡ್ ರಿಪೋರ್ಟ್ ಕಡ್ಡಾಯ; ಮಹಾರಾಷ್ಟ್ರ, ಮೇಘಾಲಯ, ಅಂಡಮಾನ್ ವಿಮಾನ ನಿಲ್ದಾಣದಲ್ಲಿ 48 ಗಂಟೆಗಳ ಮೊದಲ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ. ಚಂಡೀಗಢ್, ಗೋವಾ, ಗುಜರಾತ್, ಜಮ್ಮು & ಕಾಶ್ಮೀರ, ಕೇರಳ, ಮಧ್ಯಪ್ರದೇಶ, ಮಣಿಪುರ, ತಮಿಳುನಾಡು, ತ್ರಿಪುರ, ಉತ್ತರಾಖಂಡ್, ಪಶ್ಚಿಮ ಬಂಗಾಳದಲ್ಲಿ 72 ಗಂಟೆಗಳ ಮೊದಲ ಪ್ರಮಾಣ ಪತ್ರ ನೀಡಬಹುದು.

 ಸಂಪೂರ್ಣ ಲಸಿಕೆ ಪಡೆದಿದ್ದರೆ, ದೇಶೀಯ ವಿಮಾನ ಪ್ರಯಾಣ ಸುಲಭ ಹೇಗೆ? ಸಂಪೂರ್ಣ ಲಸಿಕೆ ಪಡೆದಿದ್ದರೆ, ದೇಶೀಯ ವಿಮಾನ ಪ್ರಯಾಣ ಸುಲಭ ಹೇಗೆ?

ಉತ್ತರ ಪ್ರದೇಶ, ಅಸ್ಸಾಂ, ಮಿಜೋರಾಂ, ನಾಗಾಲ್ಯಾಂಡ್, ಅಂಡಮಾನ್‌ಗಳಲ್ಲಿ ಆಂಟಿಜೆನ್ ಪರೀಕ್ಷೆ ಮಾಡಿದ ಪ್ರಮಾಣ ಪತ್ರವನ್ನು ಸಹ ಸ್ವೀಕಾರ ಮಾಡಲಾಗುತ್ತದೆ. ಕೇರಳ, ಗುಜರಾತ್, ಅಸ್ಸಾಂಗಳಲ್ಲಿ 500 ರಿಂದ 900 ರೂ. ಶುಲ್ಕ ಪಾವತಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಕ್ವಾರಂಟೈನ್ ಇಲ್ಲ; ನೆಗೆಟಿವ್ ಆರ್‌ಟಿಪಿಸಿಆರ್ ವರದಿ ಇದ್ದರೆ ಚಂಡೀಗಢ್, ಗುಜರಾತ್, ಮಣಿಪುರ, ಓಡಿಶಾ ಮತ್ತು ತ್ರಿಪುರದಲ್ಲಿ ಪ್ರಯಾಣಿಕರಿಗೆ ಕ್ವಾರಂಟೈನ್ ಇಲ್ಲ. ಹರ್ಯಾಣ, ಹಿಮಾಚಲ ಪ್ರದೇಶದಲ್ಲಿ ಯಾವುದೇ ಪ್ರಮಾಣ ಪತ್ರಗಳನ್ನು ಕೇಳುವುದಿಲ್ಲ. ಅಂಡಮಾನ್‌ನಲ್ಲಿ ಪ್ರಮಾಣ ಪತ್ರ ಇಲ್ಲದಿದ್ದರೆ ಅದೇ ವಿಮಾನದಲ್ಲಿ ವಾಪಸ್ ಕಳಿಸುತ್ತಾರೆ.

ಅಂಡಮಾನ್‌ಗೆ ಹೋಗುವ ಪ್ರಯಾಣಿಕರು ನೆಗೆಟಿವ್ ರಿಪೋರ್ಟ್ ಇದ್ದರೂ 7 ದಿನಗಳ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಕೇರಳ ರಾಜ್ಯದಲ್ಲಿ ನೆಗೆಟಿವ್ ವರದಿ ಇಲ್ಲದಿದ್ದರೆ 2 ವಾರಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು.

   Delta Covid ಮೇಲೆ ಲಸಿಕೆಯ ಪರಿಣಾಮವೇನು | Pfizer | Astrazeneca | Oneindia Kannada
   English summary
   Air passengers heading out of Bengaluru now can produce negative RT-PCR reports and vaccination certificate as proof in airports.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X