ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನದಲ್ಲಿ ಗಾಳಿ ಬರುತ್ತಿಲ್ಲ ಎಂದು ಪ್ರಯಾಣಿಕ ಮಾಡಿದ್ದೇನು?

|
Google Oneindia Kannada News

ಬೆಂಗಳೂರು, ಏ.26: ನಗರದ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಲಕ್ನೋಗೆ ಪ್ರಯಾಣ ಬೆಳೆಸಿದ್ದ ಡಚ್ ಪ್ರಜೆಯೊಬ್ಬ ಗಾಳಿ ಬರುತ್ತಿಲ್ಲ ಎಂದು ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆದು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ಡಚ್ ಪ್ರಜೆಯೊಬ್ಬ ಗಿಟಾರ್ ಬಾಕ್ಸ್‌ನಲ್ಲಿ ಏನಿದೆ ಎಂದು ಕೇಳಿದರೆ ಮಷಿನ್ ಇದೆ ಎಂದು ತಮಾಷೆ ಮಾಡಲು ಹೋಗಿ ಸಿಂಗಾಪುರ ವಿಮಾನ 15 ಗಂಟೆ ತಡವಾಗಿ ಹೋಗುವಂತೆ ಮಾಡಿದ್ದ.

ಗಿಟಾರ್ ಬಾಕ್ಸ್‌ಲ್ಲಿ ಮಷಿನ್ ಗನ್ ? ಕೆಐಎನಿಂದ 15 ಗಂಟೆ ತಡವಾಗಿ ಹೊರಟ ವಿಮಾನಗಿಟಾರ್ ಬಾಕ್ಸ್‌ಲ್ಲಿ ಮಷಿನ್ ಗನ್ ? ಕೆಐಎನಿಂದ 15 ಗಂಟೆ ತಡವಾಗಿ ಹೊರಟ ವಿಮಾನ

ಇದಾದ ಎರಡೇ ದಿನದಲ್ಲಿ ಲಕ್ನೋಗೆ ಹೋಗುವ ವಿಮಾನದಲ್ಲಿ ತುರ್ತು ಬಾಗಿಲು ತೆರೆದು ಆತಂಕ ಸೃಷ್ಟಿ ಮಾಡಿದ್ದ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಗೋ ಏರ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಮಾದ ವೆಸಗಿದ ವ್ಯಕ್ತಿಗೆ ಸಿಐಎಸ್‌ಎಫ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Air passenger opened emergency window for Fresh Air

ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಕೆಐಎನಿಂದ ಲಕ್ನೋಗೆ ಹೊರಟಿದ್ದ ಗೋ ಏರ್ ವಿಮಾನದಲ್ಲಿ ನೂರಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು.

ವಿಮಾನ ರನ್ ವೇ ಹೊರಟಿದ್ದಾಗ ಎಡ ಭಾಗದ ತುರ್ತು ದ್ವಾರದ ಬಳಿ ಸುನೀಲ್ ಕುಮಾರ್ ಎಮರ್ಜೆನ್ಸಿ ಡೋರ್ ತೆರೆದಿದ್ದ. ಈ ವೇಳೆ ಏಕಾಏಕಿ ಬಾಗಿಲಿನ ಜೊತೆಗೆ ತುರ್ತಾಗಿ ಪ್ರಯಾಣಿಕರು ಇಳಿಸಲು ಬಳಸುವ ಸ್ಲೈಡ್ ಕೂಡ ತೆರೆದುಕೊಂಡಿತು.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹ್ಯಾಂಡ್ ಲಗೇಜ್ ಇರುವವರಿಗೆ ಎಕ್ಸ್‌ಪ್ರೆಸ್‌ ಲೇನ್ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹ್ಯಾಂಡ್ ಲಗೇಜ್ ಇರುವವರಿಗೆ ಎಕ್ಸ್‌ಪ್ರೆಸ್‌ ಲೇನ್

ಘಟನೆಯಿಂದ ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಆತಂಕ ಗೊಂಡಿದ್ದರು. ತಕ್ಷಣ ವಿಮಾನದಿಂದ ಆತನನ್ನು ಕೆಳಗಿಳಿಸಿ ವಶಕ್ಕೆ ಪಡೆಯಲಾಗಿತ್ತು. ಮೊದಲೇ ತಿಳಿಸಿದ್ದರೂ ಕೂಡ ಆತ ಬಾಗಿಲು ತೆರೆದಿದ್ದ.

English summary
A Air passenger opened an emergency window in aircraft for fresh air at Kempegowda international airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X