ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೇಸ್ಟ್ ರೂಪದಲ್ಲಿದ್ದ ಚಿನ್ನ ಸಾಗಣೆ; ಏರ್ ಇಂಡಿಯಾ ಇಬ್ಬರು ಸಿಬ್ಬಂದಿ ಬಂಧನ

|
Google Oneindia Kannada News

ಬೆಂಗಳೂರು, ಮಾರ್ಚ್ 12: ಅಕ್ರಮ ಚಿನ್ನ ಸಾಗಣೆಗೆ ಸಹಾಯ ಮಾಡಿದ ಆರೋಪದಲ್ಲಿ ಇಬ್ಬರು ಏರ್ ಇಂಡಿಯಾ ಸಿಬ್ಬಂದಿಯನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಇಬ್ಬರು ಪ್ರಯಾಣಿಕರಿಂದ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ತೆಗೆದುಕೊಳ್ಳುತ್ತಿದ್ದ ಸಂದರ್ಭ 22 ವರ್ಷದ ಮಹಿಳಾ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ಇಬ್ಬರು ಸದಸ್ಯರಿಗೆ ಈ ಚಿನ್ನವನ್ನು ಹಸ್ತಾಂತರಿಸಲಿದ್ದರು.

ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; 48 ಲಕ್ಷ ವಾಚ್ ಒಡೆದ ಅಧಿಕಾರಿಗಳು! ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; 48 ಲಕ್ಷ ವಾಚ್ ಒಡೆದ ಅಧಿಕಾರಿಗಳು!

ದುಬೈನಿಂದ ಬಂದ ಎಮಿರೇಟ್ಸ್ ವಿಮಾನ ಇಕೆ 564 ಬುಧವಾರ ಬೆಳಿಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದು, ಇಬ್ಬರು ಪ್ರಯಾಣಿಕರು ಒಂದು ಕೆ.ಜಿ. ಚಿನ್ನದ ಪೇಸ್ಟ್ ಅನ್ನು ತಮ್ಮೊಂದಿಗೆ ತಂದಿದ್ದರು. ಟರ್ಮಿನಲ್ ಒಳಗೆ ಮಹಿಳಾ ಸಿಬ್ಬಂದಿಗೆ ಅದನ್ನು ಒಪ್ಪಿಸಿದ್ದರು ಎಂದು ತಿಳಿದುಬಂದಿದೆ. ಈ ಮೂವರನ್ನು ವಿಮಾನ ನಿಲ್ದಾಣದ ಗುಪ್ತಚರ ಘಟಕ ತಂಡಕ್ಕೆ ಹಸ್ತಾಂತರಿಸಲಾಗಿದೆ.

Air India Staffers Held For Helping Gold Smuggling At KIA

Recommended Video

ಗವಿ ಗಂಗಾಧರೇಶ್ವರನ ದರ್ಶನ ಪಡೆದ ಡಿಕೆಶಿ..! | Oneindia Kannada

ಏರ್ ಇಂಡಿಯಾ ಹಳೆಯ ಸಿಬ್ಬಂದಿ ಕೂಡ ಈ ಗ್ಯಾಂಗ್‌ನಲ್ಲಿರುವುದಾಗಿ ವಿಚಾರಣೆ ವೇಳೆ ಇವರು ಒಪ್ಪಿಕೊಂಡಿದ್ದು, ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ. ಎಲ್ಲರೂ ಕೋಯಿಕ್ಕೋಡ್‌ ಮೂಲದವರು ಎಂದು ತಿಳಿದುಬಂದಿದೆ.

English summary
Two air india employees at Kempegowda International airport held on charges for helping gold smuggling,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X