ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ವಿಮಾನದಲ್ಲಿ ಹಾರಿರಿ ಬೆಂಗಳೂರಿನಿಂದ ಸ್ಯಾನ್ ಫ್ರಾನಿಸ್ಕೋಗೆ

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 26: ಬೆಂಗಳೂರಿನಿಂದ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಸಿಹಿಸುದ್ದಿ. ನೀವು 17 ರಿಂದ 18 ಗಂಟೆಯೊಳಗೆ ಒಂದೇ ವಿಮಾನದಲ್ಲಿ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ತಲುಪಬಹುದು. ಈ ವ್ಯವಸ್ಥೆಯನ್ನು ಭಾರತೀಯ ವಿಮಾನಯಾನ ಸಂಸ್ಥೆ ಕಲ್ಪಿಸಿಕೊಡಲಿದ್ದು, ಈ ವಿಮಾನ 2016ರ ಫೆಬ್ರವರಿ ತಿಂಗಳಲ್ಲಿ ಪ್ರಯಾಣಕ್ಕೆ ಮುಕ್ತವಾಗಿ ಲಭಿಸಲಿದೆ.

ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಕ್ರಮಿಸಲು ಅನುಕೂಲವಾಗಲೆಂದು 'ಮ್ಯಾರಥಾನ್' ಎಂಬ ಬಹಳ ಉದ್ದದ ಮತ್ತು ಅತಿವೇಗದ ವಿಮಾನ ತಯಾರಿಕೆಗೆ ಭಾರತೀಯ ವಿಮಾನಯಾನ ಸಂಸ್ಥೆಯು ಒಪ್ಪಿಗೆ ನೀಡಿದೆ. ಈ ವಿಮಾನವು ಬೆಂಗಳೂರಿನಿಂದ ಹೊರಡಲಿದ್ದು, 17ರಿಂದ 18 ಗಂಟೆ ಒಳಗೆ 8,700 ಮೈಲಿ ದೂರವಿರುವ ಸ್ಯಾನ್ ಫ್ರಾನ್ಸಿಸ್ಕೋ ತಲುಪುತ್ತದೆ.[ವಾಯುಸೇನೆ-ಎಚ್ ಎಎಲ್ ಸಂವಹನಕ್ಕೆ ಹೊಸ ಪೋರ್ಟಲ್]

Air India proposes world longest non-stop flight between Bengaluru and San Francisco

ಪ್ರಪಂಚದ ಅತ್ಯಂತ ಉದ್ದದ ಹಾಗೂ ಅತಿವೇಗದ ವಿಮಾನ ಎಂಬ ಹೆಗ್ಗಳಿಕೆಗೆ ಕ್ವಾಂಟಸ್ ವಿಮಾನ ಪಾತ್ರವಾಗಿತ್ತು. ಇದು ಯುಎಸ್ ಎ ಯ ದಲ್ಲಾಸ್ ನಿಂದ ಆಸ್ಟ್ರೇಲಿಯಾದ ಸಿಡ್ನಿ ನಡುವೆ ಹಾರಾಡುತ್ತಿದೆ. ಈ ಎರಡು ನಗರದ ಅಂತರ 8,578 ಮೈಲಿ (13,730 ಕಿ.ಮೀ)

ಕ್ವಾಂಟಸ್ ವಿಮಾನ ಹಾರಾಟ ಆರಂಭಿಸಿದ ಒಂದೇ ವರ್ಷದಲ್ಲಿ ಎಮಿರೆಟ್ಸ್ ವಿಮಾನವು ತನ್ನ ಹಾರಾಟ ಆರಂಭಿಸಿ ಇದರ ದಾಖಲೆ ಮುರಿದು ಹಾಕಿದ್ದು, ದುಬೈಯಿಂದ ಫ್ಲೋರಿಡಾದ ಪಣಾಮ ನಗರಕ್ಕೆ ಹಾರಾಡಲು ಶುರುವಿಟ್ಟಿತು. ಈ ನಗರಗಳ ನಡುವಿನ ಅಂತರ 8,588 ಮೈಲಿ (13,760 ಕಿ.ಮೀ). ಇದೀಗ ಮ್ಯಾರಥಾನ್ ಇವೆರಡು ವಿಮಾನಗಳಿಗಿಂತ ಹೆಚ್ಚಿನ ದೂರ ಹಾರಾಡಲು ಹೊರಟಿದೆ.

English summary
Air India proposes world's longest non-stop flight an 18 hour, 8,700mile 'Marathon' between Bengaluru and San Francisco.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X