India
 • search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ: ಕುಮಾರಸ್ವಾಮಿ ವಿಶ್ವಾಸ

|
Google Oneindia Kannada News

ಬೆಂಗಳೂರು, ಜುಲೈ 3: "ಮುಂದಿನ ವಿಧಾಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನ್ನಡಿಗರಿಂದ, ಕನ್ನಡಿಗರಿಗಾಗಿ, ಕನ್ನಡಿಗರದ್ದೇ ಆದ ಸರಕಾರ ಅಧಿಕಾರಕ್ಕೆ ಬರಬೇಕು" ಎಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಜನತಾಮಿತ್ರ ಅಭಿಯಾನದ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕುಮಾರಸ್ವಾಮಿ, "ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಮುಖ್ಯಮಂತ್ರಿ ಆಗಿಯೇ ಆಗುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಕ್ಕೆ 1 ತಿಂಗಳ ಟಾರ್ಗೆಟ್: ಸರ್ಕಾರಿ ಶಾಲೆಗಳ ದೃಶ್ಯ ವೈಭವ ತೆರೆದಿಟ್ಟ ಕುಮಾರಣ್ಣ! ಸರ್ಕಾರಕ್ಕೆ 1 ತಿಂಗಳ ಟಾರ್ಗೆಟ್: ಸರ್ಕಾರಿ ಶಾಲೆಗಳ ದೃಶ್ಯ ವೈಭವ ತೆರೆದಿಟ್ಟ ಕುಮಾರಣ್ಣ!

"ಮುಂದಿನ ಚುನಾವಣೆಯಲ್ಲಿ ಒಮ್ಮೆ ಅಧಿಕಾರ ಕೊಟ್ಟು ನೋಡಿ. ಪ್ರಾಮಾಣಿಕ ಆಡಳಿತ ನೀಡುತ್ತೇನೆ. ಜನರ ನಿರೀಕ್ಷೆಗಳನ್ನು ಈಡೇರಿಸಿ, ಸ್ವಚ್ಛ, ಸುಂದರ ಬೆಂಗಳೂರು ನಗರವನ್ನು ನಿರ್ಮಾಣ ಮಾಡುತ್ತೇನೆ. ದಾಸರಹಳ್ಳಿ ಕ್ಷೇತ್ರದಲ್ಲಿ ಮಾತ್ರವಲ್ಲ ಬೆಂಗಳೂರಿನ ಎಲ್ಲಾ 28 ಕ್ಷೇತ್ರಗಳಲ್ಲೂ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ" ಮನವಿ ಮಾಡಿದರು.

"ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣೆ ಹತ್ತಿರ ಬಂದಾಗ ನಿದ್ದೆಯಿಂದ ಎದ್ದು ಕೂತಿವೆ. ವಿಧಾನಸೌಧ ಮತ್ತು ಬಿಬಿಎಂಪಿಯಲ್ಲಿ ಆಡಳಿತ ನಡೆಸಿವೆ. ಬಿಜೆಪಿ ಪಕ್ಷದವರು ಹಿಂದುತ್ವ ಎಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಾವು ಹಿಂದೂಗಳೇ, ಹಿಂದುತ್ವವನ್ನು ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ. ದೇವಸ್ಥಾನಗಳನ್ನು ಕಟ್ಟಲು ನಮ್ಮ ಪಕ್ಷದ ದಾಸರಹಳ್ಳಿ ಶಾಸಕರು ಕೊಟ್ಟಷ್ಟು ಹಣಕಾಸು ನೆರವನ್ನು ಬಿಜೆಪಿ ಶಾಸಕರು ಕೊಟ್ಟಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.

ಡಿಸೆಂಬರ್‌ನಲ್ಲೇ ವಿಧಾನಸಭೆ ಚುನಾವಣೆ; ಎಚ್‌ಡಿಕೆ ಸುಳಿವುಡಿಸೆಂಬರ್‌ನಲ್ಲೇ ವಿಧಾನಸಭೆ ಚುನಾವಣೆ; ಎಚ್‌ಡಿಕೆ ಸುಳಿವು

ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯದ ಭರವಸೆ

ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯದ ಭರವಸೆ

"ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಕಳಿಸುತ್ತಿಲ್ಲ. ಸರಕಾರ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಪಾಠ ಮಾಡಲು ಶಿಕ್ಷಕರು ಇಲ್ಲ. ಬಡವರಿಗೆ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಶಕ್ತಿ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಯುಕೆಜಿ ಯಿಂದ ಪಿಯುಸಿಯವರೆಗೂ ಉಚಿತ ಶಿಕ್ಷಣ ಕೊಡಲಾಗುವುದು" ಎಂದು ಭರವಸೆ ನೀಡಿದರು.

"ನಗರದಲ್ಲಿ ಬಡವರು, ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಗಗನ ಕುಸುಮವಾಗಿದೆ. ಇದಕ್ಕೆ ಪರಿಹಾರವಾಗಿ ಪ್ರತಿ ವಾರ್ಡ್ ನಲ್ಲಿಯೂ ಗಲ್ಲಿ ಕ್ಲಿನಿಕ್ ತೆರೆಯಲಾಗುವುದು" ಎಂದು ಹೇಳಿದರು.

ಅನುದಾನ ನೀಡಲು ತಾರತಮ್ಮ ಮಾಡುತ್ತಿದ್ದಾರೆ

ಅನುದಾನ ನೀಡಲು ತಾರತಮ್ಮ ಮಾಡುತ್ತಿದ್ದಾರೆ

"ನಾನು ಮುಖ್ಯಮಂತ್ರಿ ಆಗಿದ್ದಾಗ ದಾಸರಹಳ್ಳಿ ಕ್ಷೇತ್ರಕ್ಕೆ 720 ಕೋಟಿ ಅನುದಾನ ನೀಡಿದ್ದೆ. ನಾನು ಅಧಿಕಾರದಿಂದ ಕೆಳಗಿಳಿದ ನಂತರ ನಾನು ನೀಡಿದ್ದ ಅನುದಾನವನ್ನು ತಡೆದಿದ್ದರು. ಹೈಕೋರ್ಟ್ ಛೀಮಾರಿ ಹಾಕಿದ ನಂತರ ಸ್ವಲ್ಪ ಅನುದಾನ ಬಂತು. ಸ್ವತಃ ನಾನೇ ಶಾಸಕ ಮಂಜುನಾಥ್ ಅವರನ್ನು ಕರೆದುಕೊಂಡು ಹೋಗಿ ಅಂದಿನ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೆ. ಆದರೂ ಹಣ ಬಿಡುಗಡೆ ಆಗಿಲ್ಲ. ಈಗಲೂ ಅನುದಾನ ಬಿಡುಗಡೆ ಸರಿಯಾಗಿ ಆಗುತ್ತಿಲ್ಲ. ಈ ಸರಕಾರ ಶಾಸಕರಿಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ಎಸಗುತ್ತಿದೆ" ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ಸಾಧನೆಗಳ ಬಗ್ಗೆ ವಿಡಿಯೋ ಪ್ರಚಾರ

ಜೆಡಿಎಸ್‌ ಸಾಧನೆಗಳ ಬಗ್ಗೆ ವಿಡಿಯೋ ಪ್ರಚಾರ

ಕಾರ್ಯಕ್ರಮ ವೇಳೆ ಬೆಂಗಳೂರು ನಗರಕ್ಕೆ ಎಚ್. ಡಿ. ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಕೊಡುಗೆಗಳ ದೃಶ್ಯಾವಳಿಯನ್ನು ಎಲ್‌ಇಡಿ ಪರದೆಯಲ್ಲಿ ಭಿತ್ತರಿಸಲಾಯಿತು. ಜನತಾ ಮಿತ್ರ ವಾಹನದಲ್ಲಿ ಮುಂದಿನ ಸರ್ಕಾರ ಹೇಗಿರಬೇಕು, ಜನರ ನಿರೀಕ್ಷೆಗಳೇನು? ಎನ್ನುವ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕೆಲವರು ಸಲಹಾ ಪೆಟ್ಟಿಗೆಯಲ್ಲಿ ಅಭಿಪ್ರಾಯ ಬರೆದು ಹಾಕಿದರೆ, ಯುವಕರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸಲಹೆ ನೀಡಿದರು. ಇನ್ನೂ ಕೆಲವರು ವಾಹನದಲ್ಲಿದ್ದ ಟ್ಯಾಬ್ ನಲ್ಲಿ ಸಲಹೆ ಬರೆದು ಸೇವ್ ಮಾಡಿದರು.

ಜುಲೈ 17ರವೆರೆಗೆ ನಗರದ ವಿವಿಧೆಡೆ ಕಾರ್ಯಕ್ರಮ

ಜುಲೈ 17ರವೆರೆಗೆ ನಗರದ ವಿವಿಧೆಡೆ ಕಾರ್ಯಕ್ರಮ

2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಈಗಲೇ ಸಿದ್ಧತೆ ಆರಂಭಿಸಿದೆ, ತಾವು ಸಿಎಂ ಆಗಿದ್ದಾಗ ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು, ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳ ಬಗ್ಗೆ ಮಾಹಿತಿ ನೀಡಿ ಮತದಾರರನ್ನು ಸೆಳೆಯಲು ಬಿಜೆಪಿ ಕಸರತ್ತು ನಡೆಸುತ್ತಿದೆ.

ತಮ್ಮ ಸಾಧನೆಗಳನ್ನು ಜನರಿಗೆ ತಿಳಿಸಲು ಜೆಡಿಎಸ್ ಜನತಾ ಮಿತ್ರ ಎನ್ನುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಜುಲೈ 17ರವೆರೆಗೆ ಬೆಂಗಳೂರಿನ ಹಲವೆಡೆ ಕಾರ್ಯಕ್ರಮ ನಡೆಯಲಿದೆ.

   ಕನ್ನಯ್ಯನ ಹತ್ಯೆ ಹಿಂದೆ ದೊಡ್ಡ ಕೈವಾಡ ಇದೆ!! | OneIndia Kannada
   English summary
   Former chief minister H. D. Kumaraswamy participated in the first program of Janatamitra Abhiyan in Dasarahalli assembly constituency. He said, the JD(S) form government in 2023 assembly election.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X