ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಎಐಎಂಐಎಂ ಸಿದ್ಧತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಎಐಎಂಐಎಂ ಸಿದ್ಧತೆ ನಡೆಸಿದೆ.

ಕಾನೂನು ಅಡ್ಡಿಗಳಿರುವ ಈ ಸಮಯದಲ್ಲಿಯೂ ಅಸಾದುದ್ದೀನ್ ಓವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್ (ಎಐಐಎಂಐಎಂ) ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಳಮಟ್ಟದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಹೈದ್ರಾಬಾದ್ ಹೆಸರು ಬದಲಾವಣೆ, ಯೋಗಿಗೆ ಓವೈಸಿ ಎಚ್ಚರಿಕೆಹೈದ್ರಾಬಾದ್ ಹೆಸರು ಬದಲಾವಣೆ, ಯೋಗಿಗೆ ಓವೈಸಿ ಎಚ್ಚರಿಕೆ

ಎಐಎಂಐಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಲತೀಫ್ ಖಾನ್ ಪಠಾಣ್, "ನಾವು ಈ ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದೆವು, ಆದರೆ ಸಿದ್ದರಾಮಯ್ಯ ಸರ್ಕಾರವು ವಿವಿಧ ತಂತ್ರಗಳನ್ನು ಬಳಸಿ ನಮ್ಮನ್ನು ತಡೆದಿದೆ. ಅದರ ಹೊರತಾಗಿಯೂ, ಈ ಹಿಂದೆ ನಮ್ಮೊಂದಿಗಿದ್ದ ಎಸ್‌ಡಿಪಿಐ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದರು. ಆದರೆ ಈ ಬಾರಿ ನಾವು ಮೊದಲೇ ತಯಾರಿ ನಡೆಸುತ್ತಿದ್ದೇವೆ. " ಎಂದಿದ್ದಾರೆ.

AIMIM Eyes On Bengaluru, To Contest BBMP Polls

ದೇಶಾದ್ಯಂತ ತನ್ನ ನೆಲೆಯನ್ನು ವಿಸ್ತರಿಸುತ್ತಿರುವ ಪಕ್ಷವು ಚುನಾವಣೆಅಭ್ಯರ್ಥಿಗಳ ಪರವಾಗಿ ಸ್ಕೌಟಿಂಗ್ ಮಾಡುತ್ತಿದೆ ಎನ್ನಲಾಗಿದೆ. ಇದು ಎಲ್ಲಾ 198 ಬಿಬಿಎಂಪಿ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ ಕೆಲವು ವಾರ್ಡ್‌ಗಳಲ್ಲಿ ಬಲವಾದ ನೆಲೆಯನ್ನು ಹೊಂದಿರುವ ಕಾರ್ಯಕರ್ತರನ್ನು ಹುಡುಕುತ್ತಿದೆ ಎಂದು ತಿಳಿದುಬಂದಿದೆ.

"ಪಕ್ಷವು ಎಲ್ಲಾ ಸ್ಥಾನಗಳಿಗೆ ಸ್ಪರ್ಧಿಸುವುದಿಲ್ಲ. ನಾವು ಪ್ರಾಯೋಗಿಕ ವಿಧಾನವನ್ನು ಹೊಂದಿದ್ದೇವೆ ಮತ್ತು ನಾವು ಚುನಾವಣೆಗೆ ಸ್ಪರ್ಧಿಸಿದೊಡನೆ ಆಡಳಿತ ಪಕ್ಷವಾಗಲು ಸಾಧ್ಯವಿಲ್ಲ ಎಂದು ತಿಳಿದಿದೆ. ನಾವು ಅರ್ಹರಿಗೆ ಮಾತ್ರ ಆದ್ಯತೆ ನೀಡುತ್ತೇವೆ ಮತ್ತು ಹೆಸರಿಲ್ಲದ ಯಾರನ್ನೂ ಕಣಕ್ಕಿಳಿಸುವುದಿಲ್ಲ. ಈ ಬಾರಿ ಪ್ರಣಾಳಿಕೆಯನ್ನು ಹೊರತರುವ ಕುರಿತು ನಾವು ಚರ್ಚೆ ನಡೆಸುತ್ತಿದ್ದೇವೆ.

ಬೆಳಗಾವಿ ಪಾಲಿಕೆ ಚುನಾವಣೆ ಕಣಕ್ಕಿಳಿಯಲಿದೆ ಎಐಎಂಐಎಂ ಪಕ್ಷಬೆಳಗಾವಿ ಪಾಲಿಕೆ ಚುನಾವಣೆ ಕಣಕ್ಕಿಳಿಯಲಿದೆ ಎಐಎಂಐಎಂ ಪಕ್ಷ

" ಪಕ್ಷವು ಈಗಾಗಲೇ ಉತ್ತರ ಕರ್ನಾಟಕದಲ್ಲಿ ನೆಲೆಯೂರಲು ಸಿದ್ದವಾಗಿದ್ದು ಇದೀಗ ದಕ್ಷಿಣ ಕರ್ನಾಟಕದಲ್ಲಿಯೂ ಸ್ಥಾನ ಗಟ್ಟಿಯಾಗಿಸಿಕೊಳ್ಳಲು ಪಕ್ಷವು ಕಾರ್ಯತತ್ಪರವಾಗಿದೆ.

Recommended Video

Virat Kohli ಈ ದಶಕದ ಶ್ರೇಷ್ಠ ಕ್ರಿಕೆಟಿಗ | Oneindia Kannada

ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ತಾವು ವಾರ್ಡ್ ವಾರು ಸಮಿತಿಗಳನ್ನು ರಚಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಜನರಿಗೆ ಒಳ್ಳೆಯ ಕೆಲಸ ಮಾಡಿದ ಕಾರ್ಯಕರ್ತರನ್ನು ನಾವು ಬಯಸುತ್ತೇವೆ ಎಂದರು.

English summary
Even as BBMP elections are caught in a legal tangle, the All India Majlis-e-Ittehad-ul-Muslimeen (AIMIM), headed by Asaduddin Owaisi, is making ground-level preparations for the local body elections. The party, which is expanding its base across the country, is said to be scouting for candidates for the polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X