ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರಿಗೆ ಸುರಕ್ಷತೆ ಇಲ್ಲ:ಜನವಾದಿ ಸಂಘಟನೆ

By Ashwath
|
Google Oneindia Kannada News

ಬೆಂಗಳೂರು, ಮೇ. 13: ನಗರದಲ್ಲಿ ನಡೆದ ಮುಂಬೈ ಮೂಲದ ಯುವತಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.

ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಿಂಚಿತ್ತಾದರು ಕಾಳಜಿ ಇದ್ದಿದ್ದೇ ಆದರೇ, ಮುಂಬೈ ಮೂಲದ ಹೆಣ್ಣು ಮಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಬೀದಿಯಲ್ಲಿ ಬಿಸಾಕಿ ಹೋದ ಆರೋಪಿಗಳನ್ನು ರಾಜ್ಯ ಸರ್ಕಾರ ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಜನವಾದಿ ಸಂಘಟನೆಯ ಅಧ್ಯಕ್ಷೆ ಕೆ.ಎಸ್‌ ಶಾರದ ಆಗ್ರಹಿಸಿದ್ದಾರೆ.[ಬ್ಯೂಟಿ ಪಾರ್ಲರ್ ಯುವತಿ ಗ್ಯಾಂಗ್ ರೇಪ್]

AIDWA condemned Bangalore gang rape
ದೂರದ ಪ್ರದೇಶದಿಂದ ಉದ್ಯೋಗವನ್ನರಿಸಿಕೊಂಡು ಬರುವ ಮಹಿಳೆಯರ ಜೊತೆಗೆ ನಗರದಲ್ಲಿ ವಾಸವಾಗಿರುವ ಮಹಿಳೆಯರಿಗೆ ಸುರಕ್ಷತೆಯ ತಾಣವಾಗಬೇಕಿದ್ದ ಬೆಂಗಳೂರಿನಲ್ಲಿ ಅಭದ್ರತೆ ಕಾಡುತ್ತಿದೆ.

ರಾಜ್ಯ ಸರ್ಕಾರ ದೌರ್ಜನ್ಯಗಳನ್ನು ನಿಯಂತ್ರಿಸುವಲ್ಲಿ ಮುಂದಾಗದೆ ನಿರ್ಲಕ್ಷ್ಯ ವಹಿಸುತ್ತಿದೆ. ಸರ್ಕಾರ ಮಂತ್ರಿಗಳು ಭರವಸೆಯ ಮಹಾಪೂರವನ್ನೇ ಹರಿಸುತ್ತಾ, ತಾವು ಬಹಳ ಮಹಿಳಾಪರ ಎಂಬಂತೆ ಬಿಂಬಿಸುತ್ತಿದ್ದಾರೆ . ತಾವು ನೀಡಿರುವ ಭರವಸೆಗಳು ಕಾರ್ಯಗತಗೊಳಿಸದೆ, ಅಪರಾಧ ಎಸಗುವವರಿಗೆ ಮತ್ತಷ್ಟು ಕುಮ್ಮಕ್ಕು ಸಿಕ್ಕಿ ರಾಜಾರೋಷವಾಗಿ ಅಪರಾಧ ಎಸಗುತ್ತಿದ್ದಾರೆ ಎಂದು ಜನವಾದಿ ಸಂಘಟನೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.[ಅತ್ಯಾಚಾರ ಪ್ರಕರಣದಲ್ಲಿ ಆಶಿಕಿ ಗಾಯಕ ಬಂಧನ]

ಅತ್ಯಾಚಾರಕ್ಕೊಳಗಾದ ಯುವತಿಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು, ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಸೂಕ್ತ ಗಮನ ಹರಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.

English summary
The All India Democratic Women's Association (AIDWA) condemned Bangalore gang rape. In his press release Association said, this is absolutely unacceptable Congress government did not concern over city women's life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X