ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಕೆವಿಕೆ ಆವರಣದಲ್ಲಿ ನ.11ರಿಂದ 14ರ ವರೆಗೆ ಕೃಷಿ ಮೇಳ

|
Google Oneindia Kannada News

ಬೆಂಗಳೂರು, ಅ.19: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) ಆವರಣದಲ್ಲಿ ನ.11ರಿಂದ 14ರ ವರೆಗೆ 2021ನೇ ಸಾಲಿನ ಕೃಷಿ ಮೇಳ ನಡೆಯಲಿದೆ.

ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಸಹಿತ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಾಲ್ಕು ದಿನಗಳ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಕೋವಿಡ್ ನಿಯಮಗಳ ಅನುಸಾರ ಮೇಳವನ್ನು ಆಯೋಜಿಸಲಾಗಿದೆ. ರೈತರು ಮತ್ತು ಸಾರ್ವಜನಿಕರು ನೇರವಾಗಿ ಪಾಲ್ಗೊಳ್ಳಬಹುದು ಮತ್ತು ಆನ್‌ಲೈನ್‌ ಮೂಲಕವೂ ವೀಕ್ಷಿಸಬಹುದು ಎಂದು ಜಿಕೆವಿಕೆ ವಿಸ್ತರಣಾ ನಿರ್ದೇಶಕ ಎನ್. ದೇವಕುಮಾರ್ ಹೇಳಿದ್ದಾರೆ.

10 ತಳಿ, 28 ಯಂತ್ರೋಪಕರಣ ಬಿಡುಗಡೆ

ಕೃಷಿ ವಿಶ್ವವಿದ್ಯಾಲಯ ಪ್ರತಿ ವರ್ಷವೂ ಸಹ ರಾಗಿ, ಭತ್ತ, ಗೋಧಿ, ಮೆಕ್ಕೆಜೋಳ ಸಹಿತ ಹಲವು ಬೆಳೆಗಳ ನೂತನ ತಳಿಗಳನ್ನು ಅಭಿವೃದ್ಧಿ ಪಡಿಸಿ ಅದರಲ್ಲಿ ಉತ್ತಮ ವಾಗಿರುವುದನ್ನು ರೈತರಿಗೆ ಪರಿಚಯಿಸುತ್ತದೆ. ಅಲ್ಲದೆ, ಈ ನೂತನ ತಳಿಗಳನ್ನು ಜಿಕೆವಿಕೆ ಆವರಣದಲ್ಲಿ ಪ್ರತ್ಯಕ್ಷಿಕೆಯಲ್ಲಿ ಬೆಳೆದು ಅದನ್ನು ಪ್ರದರ್ಶನ ಮಾಡುತ್ತದೆ.

Agriculture Fair at GKVK from 11th to 14th November 2021

ಅದೇ ರೀತಿ ಈ ವರ್ಷವೂ ಸಹ 10 ನೂತನ ತಳಿಗಳನ್ನು ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲಿದೆ. ಅದಲ್ಲದೆ, ರೈತರ ನಿತ್ಯ ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾದಂತಹ 28 ಬಗೆಯ ಯಂತ್ರೋಪಕರಣಗಳನ್ನೂ ಸಹ ಕೃಷಿ ಮೇಳದಲ್ಲಿ ರೈತರಿಗೆ ಪರಿಚಯಿಸಲಾಗುತ್ತದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವಂತಹ ಜಿಲ್ಲೆಗಳಿಂದ ಪ್ರಗತಿಪರ ರೈತರು ಮತ್ತು ರೈತ ಮಹಿಳೆಯರನ್ನು ಗುರುತಿಸಿ ಅತ್ಯುತ್ತಮ ರೈತ ಪ್ರಶಸ್ತಿ ನೀಡಲಾಗುತ್ತದೆ.

ಅಲ್ಲದೆ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಉದ್ದಿಮೆಗಳಷ್ಟೇ ಆಲ್ಲದೆ, ಖಾಸಗಿ ಕ್ಷೇತ್ರದಲ್ಲಿಯೂ ಸಹ ಕೃಷಿ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಗಳ ಕುರಿತು ರೈತರಿಗೆ ಪರಿಚಯಿಸಲು ವಿವಿಧ ಮಳಿಗೆಗಳನ್ನು ಹಾಕಲಾಗುತ್ತದೆ. ಅಲ್ಲಿ ಕಂಪೆನಿಗಳು ತಮ್ಮ ಯಂತ್ರೋಪಕರಣಗಳನ್ನು ಪರಿಚಯ ಮಾಡುತ್ತವೆ. ಈ ಬಾರಿ ಈ ರೀತಿ 250 ವಿಶೇಷ ಮಳಿಗೆಗಳು ಇರಲಿವೆ. ರೈತರು ಯಾವುದೇ ಕೃಷಿ ಸಂಬಂಧಿತ ಯಾವುದೇ ಸಮಸ್ಯೆಗಳ ಕುರಿತು ಸ್ಥಳದಲ್ಲಿಯೇ ತತ್ಞರಿಂದ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಎಷ್ಟು ಜನ ಭಾಗಿ?:

ಕೋವಿಡ್‌ಗಿಂತ ಪೂರ್ವದಲ್ಲಿ ನಡೆಯುತ್ತಿದ್ದ ಕೃಷಿ ಮೇಳದಲ್ಲಿ ಸರಾಸರಿ 5 ಲಕ್ಷಕ್ಕೂ ಅಧಿಕ ರೈತರು ಮತ್ತ ಸಾರ್ವಜನಿಕರು ಭಾಗವಹಿಸುತ್ತಿದ್ದರು. ಆದರೆ, ಈ ಬಾರಿ ಎಷ್ಟು ಜನ ರೈತರು ಬರುತ್ತಾರೆ ಎಂಬುದನ್ನು ಕೃಷಿ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿಲ್ಲ.

ಬಳ್ಳಾರಿ ರಸ್ತೆಯ ಜಿಕೆವಿಕೆ ಮುಖ್ಯದ್ವಾರದಿಂದ ಕೃಷಿ ಮೇಳದ ಆವರಣದವರೆಗೆ ಉಚಿತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರವೇಶವೂ ಸಹ ಉಚಿತವಾಗಿದ್ದು, ಯಾವುದೇ ಪ್ರದರ್ಶನಗಳಿಗೂ ಟಿಕೆಟ್ ವಿಧಿಸಿಲ್ಲ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Recommended Video

ವಿದೇಶದಿಂದ ಸಿಕ್ಕ ಗಿಫ್ಟ್ ಗಳನ್ನೇ ಮಾರಿಕೊಳ್ಳೋ ದುಸ್ಥಿತಿ ಬಂತು ಪಾಕಿಸ್ತಾನಕ್ಕೆ | Oneindia Kannada

English summary
The four day agriculture fair from11 to 14 november 2021 is being organized at GKVK by Karnataka government in collaboration with various departments including agriculture, horticulture and animal husbandry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X