ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಹಂಕದಲ್ಲಿ ಮತ್ತೆ ಬೆಂಕಿಯ ರುದ್ರ ನರ್ತನ

|
Google Oneindia Kannada News

ಬೆಂಗಳೂರು, ಫೆಬ್ರವರಿ 24 : ಯಲಹಂಕದಲ್ಲಿ ಭಾನುವಾರ ಮತ್ತೊಂದು ಅಗ್ನಿ ಅವಘಡ ನಡೆದಿದೆ. ಶನಿವಾರ ಏರ್ ಶೋ ಕಾರು ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಹೊತ್ತಿಕೊಂಡು 277 ಕಾರುಗಳು ಬೆಂಕಿಗೆ ಆಹುತಿಯಾಗಿತ್ತು.

ಭಾನುವಾರ ಯಲಹಂಕ ವಾಯುನೆಲೆ ಹಿಂಭಾಗದ ಆರ್ ಟಿ ಓ ಕಚೇರಿ ಬಳಿ ಇರುವ ಜಾರಕಬಂಡೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 40 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಂಕಿ ಹಬ್ಬಿದ್ದು, ಬೆಂಕಿ ನಂದಿಸಲು ಹರಸಾಹಸ ಪಡಲಾಗುತ್ತಿದೆ.

ಏರೋ ಇಂಡಿಯಾ ಬೆಂಕಿ ಅನಾಹುತ: ಕಾರು ಮಾಲೀಕರಿಗೆ ಸಹಾಯವಾಣಿಏರೋ ಇಂಡಿಯಾ ಬೆಂಕಿ ಅನಾಹುತ: ಕಾರು ಮಾಲೀಕರಿಗೆ ಸಹಾಯವಾಣಿ

Again fire accident at Yelahanka

ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಅಂದಾಜಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಹುಲ್ಲು ಒಣಗಿದ್ದರಿಂದ ಬೆಂಕಿ ಬೇಗನೇ ಹಬ್ಬಿದೆ. ಅರಣ್ಯ ಪ್ರದೇಶದೊಳಗೆ ಹೋಗಲು ಸಾಧ್ಯವಿಲ್ಲದಂತೆ ಬೆಂಕಿ ಹೊತ್ತಿ ಉರಿಯುತ್ತಿದೆ.

ಏರ್‌ ಶೋ ಅಗ್ನಿ ಅವಘಡ: ಕಾರು ಕಳೆದುಕೊಂಡವರಿಗಾಗಿ ಸಹಾಯ ಕೇಂದ್ರಏರ್‌ ಶೋ ಅಗ್ನಿ ಅವಘಡ: ಕಾರು ಕಳೆದುಕೊಂಡವರಿಗಾಗಿ ಸಹಾಯ ಕೇಂದ್ರ

ಬೆಂಕಿ ಕಾಣಿಸಿಕೊಂಡ ಮಾಹಿತಿ ಸಿಕ್ಕ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶೇ 40ರಷ್ಟು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಅಗ್ನಿ ಶಾಮಕದ ದಳದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಚಿತ್ರಗಳಲ್ಲಿ: ಏರೋ ಇಂಡಿಯಾ ಅಗ್ನಿ ಅವಘಡದಲ್ಲಿ ಸುಟ್ಟ ಕಾರುಗಳುಚಿತ್ರಗಳಲ್ಲಿ: ಏರೋ ಇಂಡಿಯಾ ಅಗ್ನಿ ಅವಘಡದಲ್ಲಿ ಸುಟ್ಟ ಕಾರುಗಳು

ಶನಿವಾರ ಯಲಹಂಕ ವಾಯುನೆಯಲ್ಲಿ ನಡೆಯುತ್ತಿರುವ ಏರ್ ಶೋನ ಪಾರ್ಕಿಂಗ್ ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 277 ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು.

English summary
A major fire broke out in the parking lot near Aero India show in Yelahanka on February 23, 2014. On Sunday also another fire accident reported near air show premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X