• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೇಜಸ್ವಿ ಸೂರ್ಯ ಅಭ್ಯರ್ಥಿ ಆದ ಮೇಲೆ ಪಾನಿಪೂರಿ ಕುಮಾರ್ ಫೇಮಸ್

|

ಬೆಂಗಳೂರು, ಮಾರ್ಚ್ 27: ಸೋಮವಾರ ರಾತ್ರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಅವರ ಹೆಸರನ್ನು ಘೋಷಿಸಲಾಯಿತು. ಅದೇ ಸಮಯಕ್ಕೆ ಈ ತಳ್ಳುಗಾಡಿಯ ಪಾನಿಪೂರಿ ಮಾರಾಟಗಾರ ಎಚ್.ಆರ್. ಕುಮಾರ್ ಕೂಡ ಪ್ರಸಿದ್ಧಿಗೆ ಬಂದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಂದ ಹಾಗೆ ಈ ಕುಮಾರ್ ತಳ್ಳುಗಾಡಿಯಲ್ಲಿ ಪಾನಿಪೂರಿ ಮಾರಾಟ ಮಾಡುವುದು ಬೆಂಗಳೂರಿನಲ್ಲಿನ ಗಿರಿನಗರದಲ್ಲಿರುವ ತೇಜಸ್ವಿ ಸೂರ್ಯ ಅವರ ಮನೆಗೆ ಬಹಳ ಹತ್ತಿರದಲ್ಲಿ. ಕಳೆದ ಮೂವತ್ತು ವರ್ಷಗಳಿಂದ ಇದೇ ವ್ಯಾಪಾರ ಮಾಡಿಕೊಂಡಿರುವ ಕುಮಾರ್ ಅವರಿಗೆ ದಿಢೀರನೇ ಖ್ಯಾತಿ ಹುಡುಕಿಕೊಂಡು ಬಂದಿದೆ.

ಗಿರಿನಗರ್ ಸರ್ಕಲ್ ನಲ್ಲಿರುವ ಪಾನಿಪೂರಿ ನೀವು ಖಂಡಿತಾ ಒಂದು ಸಲ ಪ್ರಯತ್ನ ಪಡಬೇಕು. ನೀವು ಈ ಕಡೆಯಿಂದ ಹೋಗುವುದಾದರೆ ಈ ಸರ್ಕಲ್ ನಲ್ಲಿ ನಿಂತು, ಕನಿಷ್ಠ ಎರಡು ಪ್ಲೇಟ್ ಪಾನಿಪೂರಿ ತಿನ್ನಿ ಎಂದು ತೆಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಅದು ಏನು ಗೊತ್ತಾ? ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ಕೆಲವೇ ಗಂಟೆಗಳ ಮುಂಚೆ.

ತಮ್ಮ ಸ್ನೇಹಿತರ ಜತೆಗೂಡಿ ಪಾನಿಪೂರಿ ತಿನ್ನುತ್ತಿರುವ ಫೋಟೋ ಕೂಡ ಅಪ್ ಲೋಡ್ ಮಾಡಿದ್ದರು. ಅದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇಡೀ ದಿನ ಕುಮಾರ್ ಅವರ ಬಳಿ ಬಂದು, ಪಾನಿ ಪೂರಿ ತಿಂದು ಹೋದ ಗ್ರಾಹಕರು, ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಪ್ ಲೋಡ್ ಮಾಡುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಆಸ್ತಿ ವಿವರ

ಅವರಿಗೆ ಒಳ್ಳೆ ಆಲೋಚನೆ, ಯೋಜನೆ ಇದೆ. ನಮ್ಮ ಬದುಕು ಬದಲಾಗುತ್ತದೆ. ಚಿಕ್ಕ ವಯಸ್ಸಿನಿಂದ ಸೂರ್ಯ ಅವರು ಇಲ್ಲಿಗೆ ಬರುತ್ತಿದ್ದಾರೆ. ವಾರಾಂತ್ಯಗಳಲ್ಲಿ ಸ್ನೇಹಿತರ ಜತೆ ಬರುತ್ತಿದ್ದರು. ಅದೇ ರೀತಿ ಮೊನ್ನೆ ಕೂಡ ಸ್ನೇಹಿತರ ಜತೆ ಬಂದಿದ್ದರು. ಆದರೆ ಅವರು ಯಾವತ್ತೂ ರಾಜಕಾರಣ ಮಾತನಾಡಿದವರಲ್ಲ. ಅವರು ಅಭ್ಯರ್ಥಿ ಅನ್ನೋದು ನನಗೆ ಗೊತ್ತಾಗಿದ್ದೇ ತಡವಾಗಿ. ಟ್ವಿಟ್ಟರ್ ನಲ್ಲಿ ಹಾಕಿದ ಫೋಟೋ ನನ್ನದೇನಾ ಎಂದು ಬಹಳ ಜನ ಕೇಳಿದ ಮೇಲೆ ಎನ್ನುತ್ತಾರೆ ಕುಮಾರ್.

English summary
After Tejaswi Surya Become Bangalore south candidate of BJP, Girinagar pushchat Kumar also famous now. Here is the reason behind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X