ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದ ನಿವೃತ ಕಾರ್ಮಿಕ ಅಧಿಕಾರಿ !

|
Google Oneindia Kannada News

ಬೆಂಗಳೂರು, ಡಿಸೆಂಬರ್ 02: ನಿವೃತ್ತಿಯಾದರೂ ಲಂಚದ ದಾಹ ಕಡಿಮೆಯಾಗಿರಲಿಲ್ಲ. ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಗಿ ಪಡೆಯಲು ಮೂರು ವರ್ಷದ ಹಿಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ ಮಾಡಲಿಕ್ಕೆ ಲಂಚ ಸ್ವೀಕರಿಸಿ ನಿವೃತ್ತ ಲೇಬರ್ ಇನ್‌ಸ್ಪೆಕ್ಟರ್ ಹಾಗೂ ಸಹಾಯಕ ಕಾರ್ಮಿಕ ಆಯುಕ್ತ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನಿವೃತ್ತಿಯಾದರೂ ಲಂಚ ಮೇಲಿನ ಆಸೆ ಇಳಿದಿರಲಿಲ್ಲ. ಇನ್ನೊಂದಡೆ ಮೂರು ವರ್ಷ ವಾದ್ರೂ ಪರವಾನಗಿ ನೀಡಿರಲಿಲ್ಲ ಎಂಬುದು ವಿಶೇಷ.

ಮಾಲೂರಿನ ನಿವಾಸಿಯೊಬ್ಬರು ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸಂಸ್ಥೆ ತಾತ್ಕಾಲಿಕ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಗಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅದೂ 2017 ಸಲ್ಲಿಸಿದ್ದ ಅರ್ಜಿ. ಬನ್ನೇರುಘಟ್ಟ ರಸ್ತೆಯಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರು ಪರವಾನಗಿ ನೀಡಬೇಕಿತ್ತು. ಪೂನಾದಲ್ಲಿರುವ ಖಾಸಗಿ ಸಂಸ್ಥೆ ಪರವಾನಗಿ ನೀಡುವಂತೆ ಕೇಳಿದಾಗ, ಎರಡು ಲಕ್ಷ ರೂಪಾಯಿ ಲಂಚ ನೀಡುವಂತೆ ಸಹಾಯಕ ಕಾರ್ಮಿಕ ಆಯುಕ್ತರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 1.80 ಲಕ್ಷ ರೂ. ನೀಡುವಂತೆ ಕೇಳಿದ್ದಾರೆ. ಲಂಚದ ವ್ಯವಹಾರವನ್ನು ನಿವೃತ್ತ ಕಾರ್ಮಿಕ ಇನ್‌ಸ್ಪೆಕ್ಟರ್ ಮೂಲಕ ನಡೆಸಲು ಸೂಚಿಸಿದ್ದಾರೆ.

ಅದರಂತೆ ಮಂಗಳವಾರ 1.80 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್‌ ಇಪ್ಪರಗಿ, ಹಾಗೂ ನಿವೃತ್ತ ಕಾರ್ಮಿಕ ಇನ್‌ಸ್ಪೆಕ್ಟರ್ ಶಿವಕುಮಾರ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅಷ್ಟೂ ಲಂಚದ ಹಣ ವಶಕ್ಕೆ ಪಡೆದಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿದ್ದಾರೆ. ಆರೋಪಿ ಅಧಿಕಾರಿಗಳನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

after retirement officer received bribe and trapped by ACB

ಪರವಾನಗಿ ನೀಡಲು ಮೂರು ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಲಾಗಿತ್ತು. ಲಂಚ ಕೊಡದ ಕಾರಣ ಇಷ್ಟು ವರ್ಷವಾದರೂ ಅರ್ಜಿ ಇತ್ಯರ್ಥ ಮಾಡಿರಲಿಲ್ಲ. ಸಹಾಯಕ ಕಾರ್ಮಿಕ ಆಯುಕ್ತರನ್ನು ಭೇಟಿ ಮಾಡಿದಾಗ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು ನಿವೃತ್ತ ಕಾರ್ಮಿಕ ಇನ್‌ಸ್ಪೆಕ್ಟರ್ ಮೂಲಕ ವ್ಯವಹಾರ ಕುದುರಿಸಿ ಸಿಕ್ಕಿಬಿದ್ದಿದ್ದಾರೆ. ನಿವೃತ್ತಿಯಾದರೂ ಕಚೇರಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಕುರಿತು ಮತ್ತಷ್ಟು ಅಕ್ರಮಗಳು ಎಸಿಬಿಗೆ ಲಭ್ಯವಾಗಿವೆ ಎಂದು ತಿಳಿದು ಬಂದಿದೆ.

English summary
Despite his retirement, the thirst for bribery was not low. A retired labour inspector and assistant labour commissioner has been caught by ACB police after accepting a bribe to settle a petition filed three years ago to obtain a license to hire workers. Despite his retirement, his desire for bribery did not diminish. On the thing was not licensed for three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X