• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಸಚಿವ ಜಾಫರ್ ಷರೀಫ್ ಅಗಲಿಕೆಗೆ ಗಣ್ಯರ ಕಂಬನಿ

|

ಬೆಂಗಳೂರು, ನವೆಂಬರ್ 25: ಕೇಂದ್ರದ ಮಾಜಿ ಸಚಿವ ಸಿಕೆ ಜಾಫರ್ ಷರೀಫ್ ನವೆಂಬರ್ 25ರಂದು ಭಾನುವಾರ ನಿಧನರಾಗಿದ್ದಾರೆ. ಗಣ್ಯರು ಕಂಪನಿ ಮಿಡಿದಿದ್ದಾರೆ.

ಜಾಫರ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಾಫರ್ ಷರೀಫ್ 1933ರ ನವೆಂಬರ್ 3 ರಂದು ಚಿತ್ರದುರ್ಗ ಚಳ್ಳಕೆರೆಯಲ್ಲಿ ಹುಟ್ಟಿದ್ದರು, 1991ರಿಂದ 1995ರವರೆಗೆ ಪಿವಿ ನರಸಿಂಹ ರಾವ್ ಸಂಪುಟದಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದರು.

ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನ

1972ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಬ್ರಾಡ್ ಗೇಜ್ ರೈಲನ್ನು ದೇಶಕ್ಕೆ ಪರಿಚಯಿಸಿದ ರಾಜಕಾರಣಿಯಾಗಿದ್ದರು. ಕಳೆದ ಒಂದು ವಾರದಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

ಜಾಫರ್ ಷರೀಫ್ ನಿಧನಕ್ಕೆ ಕುಮಾರಸ್ವಾಮಿ ಸಂತಾಪ

ಜಾಫರ್ ಷರೀಫ್ ನಿಧನಕ್ಕೆ ಕುಮಾರಸ್ವಾಮಿ ಸಂತಾಪ

ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ನಮ್ಮ ಕುಟುಂಬದೊಂದಿಗೆ ಜಾಫರ್ ಷರೀಫ್ ಅವರು ಆತ್ಮೀಯ ಸಂಬಂಧ ಹೊಂದಿದ್ದರು. ಕೇಂದ್ರ ಸಚಿವರಾಗಿ ಅವರು ನಾಡಿಗೆ, ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ರೈಲ್ವೆ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಅತ್ಯಂತ ಶ್ಲಾಘನೀಯ. ರೈಲ್ವೆ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದವರಲ್ಲಿ ಜಾಫರ್ ಶರೀಫರು ಅಗ್ರಗಣ್ಯರು. ರಾಷ್ಟ್ರಾದ್ಯಂತ ಮೀಟರ್ ಗೇಜ್ ಹಳಿಗಳನ್ನು ಬ್ರಾಡ್ಗೇಜ್ ಗೆ ಪರಿವರ್ತಿಸಿ ಶ್ರೇಯ ಇವರದ್ದು' ಎಂದು ಮುಖ್ಯಮಂತ್ರಿ ಗಳು ಸ್ಮರಿಸಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಆರ್‌ವಿ ದೇಶಪಾಂಡೆ ಸಂತಾಪ

ಆರ್‌ವಿ ದೇಶಪಾಂಡೆ ಸಂತಾಪ

ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಕೇಂದ್ರದ ಮಾಜಿ ರೈಲ್ವೆ ಸಚಿವರಾಗಿದ್ದ ಶ್ರೀ ಸಿ.ಕೆ.ಜಾಫರ್ ಷರೀಫ್ ಅವರು ನಿಧನರಾದ ಸುದ್ದಿ ತೀವ್ರ ದುಃಖದ ಸಮಾಚಾರವಾಗದೆ. ರೈಲ್ವೆ ಸಚಿವರಾಗಿ ಅವರು ಆ ಇಲಾಖೆಯಲ್ಲಿ ತಂದ ಸುಧಾರಣೆ ಮತ್ತು ಕರ್ನಾಟಕಕ್ಕೆ ನೀಡಿದ ಕೊಡುಗೆ ಅಭೂತಪೂರ್ವ ಮತ್ತು ಕ್ರಾಂತಿಕಾರಕವಾದವು. ಅವರನ್ನು ಕಳೆದುಕೊಂಡಿರುವ ನಾಡು ನೋವನ್ನು ಅನುಭವಿಸುತ್ತಿದೆ. ಅವರ ನಿಧನದಿಂದ ಉಂಟಾಗಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದಯಾಮಯನು ಅವರ ಕುಟುಂಬಕ್ಕೂ ಸಮಸ್ತರಿಗೂ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಆರ್‌ವಿ ದೇಶಪಾಂಡೆ ಸಂತಾಪ ಸೂಚಿಸಿದ್ದಾರೆ.

ಜಾಫರ್ ಷರೀಫ್ ನಿಧನಕ್ಕೆ ಪರಮೇಶ್ವರ ಕಂಬನಿ

ಜಾಫರ್ ಷರೀಫ್ ನಿಧನಕ್ಕೆ ಪರಮೇಶ್ವರ ಕಂಬನಿ

ಹಿರಿಯ ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರು ಇಂದು ದಿಢೀರ್‌ ನಿಧನ ಹೊಂದಿರುವ ಸುದ್ದಿ ತಿಳಿದು ತೀವ್ರ ದುಃಖವಾಗಿದೆಬೆಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಸಂತಾಪ ಸೂಚಿಸಿದ್ದಾರೆ. ಅಂಬರೀಶ್‌ ಅವರ ಸಾವಿನ ಸುದ್ದಿಯಿಂದ ಹೊರ ಬರುವ ಮುನ್ನವೇ ಮತ್ತೊಂದು ಆಘಾತವಾಗಿದೆ. ಜಾಫರ್‌ ಷರೀಫ್‌ ಅವರು ನಮ್ಮನ್ನು ಅಗಲಿದ ಸುದ್ದಿ ಕೇಳಿ ಆಘಾತವಾಗಿದೆ. ಕಾಂಗ್ರೆಸ್‌ನ ಹಿರಿಯ ಚೇತನ , ರಾಜಕೀಯದಲ್ಲಿ ಹೆಚ್ಚು ಅನುಭವವಿದ್ದ ಜಾಫರ್‌ ಅವರನ್ನು ನಮ್ಮನ್ನು ಅಗಲಿದ್ದು ದುಃಖ ತರಿಸಿದೆ.

ಭಾರತೀಯ ರೈಲ್ವೆಗೆ ಆಧುನಿಕ ಸ್ಪರ್ಶ ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು, ಕರ್ನಾಟಕಕ್ಕೆ ಹಲವು ಹೊಸ ರೈಲ್ವೆ ಯೋಜನೆಗಳನ್ನು ತಂದಿದ್ದರು. ಷರೀಫರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ದೇವರು ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.

ದಿನೇಶ್ ಗುಂಡೂರಾವ್ ಸಂತಾಪ

ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ನಿಧನರಾಗಿದ್ದು ತುಂಬಾ ಬೇಸರವಾಗಿದೆ, ದೇಶಕ್ಕೆ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ, ಹಾಗೂ ಎಲ್ಲಾ ಧರ್ಮದವರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After Rebel star Ambareesh sad demise, Broad gauge man fame, former union minister C.K. Jaffer Sharief has departed. Karnataka is in sea of mourning following sad demise of senior parliamentarians.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more