ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ

|
Google Oneindia Kannada News

ಬೆಂಗಳೂರು, ಜೂನ್ 01 : ಹಲವು ವಿದ್ಯಾರ್ಥಿ ಸಂಘಟನೆಗಳ ಬೇಡಿಕೆಗಳಿಗೆ ಮಣಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಈ ತಿಂಗಳು ಆರಂಭವಾಗಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.

ಮರುಮೌಲ್ಯಮಾಪನ ಫಲಿತಾಂಶವನ್ನು ತಡವಾಗಿ ಬಿಡುಗಡೆ ಮಾಡಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ವಿವಿ ಈ ತೀರ್ಮಾನ ಕೈಗೊಂಡಿದೆ. [ವಿಟಿಯು ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ]

ಮರುಮೌಲ್ಯಮಾಪನ ಫಲಿತಾಂಶ ತಡವಾದದ್ದರಿಂದ ಕೆಲವು ವಿದ್ಯಾರ್ಥಿಗಳು ಮುಂದಿನ ಮರು ಮೌಲ್ಯಮಾಪನ ಶುಲ್ಕದ ಜತೆಗೆ ಪರೀಕ್ಷಾ ಶುಲ್ಕಗಳನ್ನು ಪಾವತಿಸಬೇಕಾಗುತ್ತಿತ್ತು.

ಬೆಂಗಳೂರಿನಲ್ಲಿ ಈ ಬಗ್ಗೆ ಗುರುವಾರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕರಿಸಿದ್ದಪ್ಪ, "ಇದೇ ಜೂನ್ 5ರಂದು ಆರಂಭವಾಗಬೇಕಿದ್ದ ಅಂತಿಮ ಬಿಇ ವರ್ಷದ ಪರೀಕ್ಷೆಗಳು ಇದೇ 12ರಂದು ನಡೆಯಲಿದೆ. ಇತರ ಕೆಳ ಹಂತದ ಸೆಮಿಸ್ಟರ್ ಪರೀಕ್ಷೆಗಳು ಜೂನ್ 23ರಂದು ಆರಂಭವಾಗಲಿದೆ.

ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ಜುಲೈ 31ರಂದು ಮುಗಿಯಲಿದೆ. ಇನ್ನು ಜೂನ್ 3 ರಂದು ವಿವರವಾದ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು" ಎಂದು ತಿಳಿಸಿದರು.

English summary
Two days after several Visvesvaraya Technological University students staged a protest demanding that the university postpone the ‘even’ semester exams until the re-evaluation results of the ‘odd’ semester exams were announced, the university has accepted their demand and decided to postpone the examinations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X