ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಟೆಲ್‌ಗಳ ಮೆನುವಿನಿಂದ ನಾಪತ್ತೆಯಾದ ಈರುಳ್ಳಿ ದೋಸೆ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23 : ಈರುಳ್ಳಿ ಬೆಲೆ ಏರಿಕೆಯಿಂದಾಗಿ ಹೋಟೆಲ್, ಡಾಬಾ, ರೆಸ್ಟೋರೆಂಟ್‌ಗಳಲ್ಲಿ ಬಳಕೆ ಕಡಿಮೆಯಾಗಿದೆ. ಬೆಂಗಳೂರಿನ ಹಲವು ಹೋಟೆಲ್‌ಗಳ ಮೆನುವಿನಿಂದ ಈರುಳ್ಳಿ ದೋಸೆ ನಾಪತ್ತೆಯಾಗಿದೆ.

ಕರ್ನಾಟಕದಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ 120ಕ್ಕೆ ತಲುಪಿದೆ. ಕರ್ನಾಟಕದ ವಿವಿಧ ಜಿಲ್ಲೆ, ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಬೆಲೆ 100 ರೂ. ಗಡಿಯನ್ನು ದಾಟಿದೆ. ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಈರುಳ್ಳಿ ಬೆಲೆ ಏರಿಕೆಯಾಗ್ತಿದ್ದಂತೆ ಸೃಷ್ಟಿಯಾಯ್ತು ಬಗೆಬಗೆಯ ಮಿಮ್ಸ್, ಜೋಕ್ಸ್ಈರುಳ್ಳಿ ಬೆಲೆ ಏರಿಕೆಯಾಗ್ತಿದ್ದಂತೆ ಸೃಷ್ಟಿಯಾಯ್ತು ಬಗೆಬಗೆಯ ಮಿಮ್ಸ್, ಜೋಕ್ಸ್

ಈರುಳ್ಳಿ ಬೆಲೆ ಏರಿಕೆಯಿಂದಾಗಿ ಬಳಕೆ ಕಡಿಮೆಯಾಗಿದೆ. ಪ್ರಮುಖವಾಗಿ ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆಗೆ ಬೇಡಿಕೆ ಕಡಿಮೆಯಾಗಿದೆ. ಕೆಲವು ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆ ದೊರೆಯುತ್ತಿದೆ. ಆದರೆ, ಒಂದು ದೋಸೆ ಬೆಲೆ 100 ರಿಂದ 150 ರೂ. ತನಕ ಇದೆ.

ಕರ್ನಾಟಕದಲ್ಲಿ ಕೆ.ಜಿ ಈರುಳ್ಳಿ ಬೆಲೆ ಬರೋಬ್ಬರಿ 120 ರೂ., ಮತ್ತಷ್ಟು ಏರಿಕೆ ಸಾಧ್ಯತೆ ಕರ್ನಾಟಕದಲ್ಲಿ ಕೆ.ಜಿ ಈರುಳ್ಳಿ ಬೆಲೆ ಬರೋಬ್ಬರಿ 120 ರೂ., ಮತ್ತಷ್ಟು ಏರಿಕೆ ಸಾಧ್ಯತೆ

After Onion Price Hike Onion Dosa Disappear From Hotel Menu

ಸಾಮಾನ್ಯ ದಿನಗಳಲ್ಲಿ 50 ರಿಂದ 60 ರೂ.ಗಳಿಗೆ ಈರುಳ್ಳಿ ದೋಸೆ ಸಿಗುತ್ತಿತ್ತು. ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ 75 ರಿಂದ 80 ರೂ. ಇತ್ತು. ಆದರೆ, ಈ ಹಲವು ಹೋಟೆಲ್‌ಗಳ ಮೆನುವಿನಲ್ಲಿ ಈರುಳ್ಳಿ ದೋಸೆ ಕಾಣೆಯಾಗಿದೆ.

 ಬೆಳಗಾವಿಯಲ್ಲಿ ಮಳೆಯಿಂದ ನೆಲಕಚ್ಚಿದ 200 ಎಕರೆ ಈರುಳ್ಳಿ ಬೆಳೆ ಬೆಳಗಾವಿಯಲ್ಲಿ ಮಳೆಯಿಂದ ನೆಲಕಚ್ಚಿದ 200 ಎಕರೆ ಈರುಳ್ಳಿ ಬೆಳೆ

ಬೆಂಗಳೂರಿನ ಜಯನಗರ 3ನೇ ಬ್ಲಾಕ್ ಸುತ್ತಮತ್ತಲಿನ ಪ್ರಮುಖ ಹೋಟೆಲ್‌ಗಳಲ್ಲಿ ಒಂದು ಈರುಳ್ಳಿ ದೋಸೆ ಬೆಲೆ 100 ರೂ. ಆಗಿದೆ. ಕೆಲವು ಹೋಟೆಲ್‌ಗಳಲ್ಲಿ ಗುರುವಾರ 150 ರೂ. ದರವಿತ್ತು.

ಕೇವಲ ಸಸ್ಯಹಾರಿ ಹೋಟೆಲ್‌ಗಳಲ್ಲಿ ಮಾತ್ರವಲ್ಲ ಮಾಂಸಾಹಾರ, ಮೊಟ್ಟೆಯ ವಿಧವಿಧದ ಖಾದ್ಯಗಳಿಗೆ ಈರುಳ್ಳಿ ಅಗ್ಯತಗ್ಯವಾಗಿದೆ. ಎಗ್ ರೈಸ್ ತಿನ್ನುವಾಗ ಮೇಲೆ ಸ್ವಲ್ಪ ಈರುಳ್ಳಿ ಹಾಕಿಕೊಡಪ್ಪ ಎಂದು ಈಗ ಬೇಡಿಕೆ ಇಡುವಂತಿಲ್ಲ.

ಸ್ವಿಗ್ಗಿ, ಝೊಮೆಟೋ ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳಲ್ಲಿ ಈರುಳ್ಳಿ ದೋಸೆ ಇದೆ. ಆದರೆ, 100 ರೂ. ಗಿಂತ ಕಡಿಮೆ ಬೆಲೆಗೆ ಈರುಳ್ಳಿ ದೋಸೆ ಸಿಗುವುದಿಲ್ಲ. ಈರುಳ್ಳಿ ಬೆಲೆ ಯಾವಾಗ ಇಳಿಕೆಯಾಗಲಿದೆ? ಎನ್ನುವುದು ಪ್ರಸ್ತುತ ಪ್ರಶ್ನೆಯಾಗಿದೆ.

2019ರ ನವೆಂಬರ್ ಡಿಸೆಂಬರ್ ಅವಧಿಯಲ್ಲಿ ಈರುಳ್ಳಿ ಬೆಲೆ 150 ರಿಂದ 180 ರೂ. ತಲುಪಿತ್ತು. ಬಳಿಕ ಈರುಳ್ಳಿ ಪೂರೈಕೆ ಹೆಚ್ಚಾಗಿ ಬೆಲೆ ಕಡಿಮೆಯಾಗಿತ್ತು. ಈಗ ಪುನಃ ಬೆಲೆ ಏರಿಕೆಯಾಗಿದ್ದು, ಈರುಳ್ಳಿ ಬಳಕೆಗೆ ಕಡಿಮೆಯಾಗಿದೆ.

Recommended Video

Robbery in Filmy Style | ಇಂಥಾ ಕಳ್ಳರನ್ನ ಎಲ್ಲು ನೋಡಿಲ್ಲಾ!! | Oneindia Kannada

ಕರ್ನಾಟಕದಲ್ಲಿ ಕೆಜಿ ಈರುಳ್ಳಿ ಬೆಲೆ 120ಕ್ಕೆ ಏರಿಕೆಯಾಗಿದೆ. ಸಣ್ಣ ಈರುಳ್ಳಿ ಬೆಲೆ ಸಹ ಏರಿಕೆಯಾಗಿದ್ದು, ಜನರು ಖರೀದಿಗೆ ಆಲೋಚನೆ ನಡೆಸುವಂತಾಗಿದೆ. ಈರುಳ್ಳಿ ಇಲ್ಲದಿದ್ದರೆ ಖಾದ್ಯಗಳು ರುಚಿಸುವುದಿಲ್ಲ, ಆದರೆ, ಹೆಚ್ಚು ದರ ಕೊಟ್ಟು ಖರೀದಿ ಮಾಡುವಂತಿಲ್ಲ ಎಂಬ ಸಂಕಷ್ಟದಲ್ಲಿ ಜನರು ಸಿಲುಕಿದ್ದಾರೆ.

English summary
Onion price touched 120 per Kg at Karnataka. Several hotels in Bengaluru stopped making Onion dosa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X