ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಭಟನೆ ಬಳಿಕ ಎಚ್ಚೆತ್ತ ಮೆಟ್ರೋ ನಿಗಮ: ಕಾರ್ಮಿಕರ ವೇತನ ಪಾವತಿ

|
Google Oneindia Kannada News

ಬೆಂಗಳೂರು, ಮೇ 4: ನಮ್ಮ ಮೆಟ್ರೋ ಕಾರ್ಮಿಕರಿಗೆ ವೇತನ ನೀಡದೆ ಸತಾಯಿಸುತ್ತಿದ್ದ ನಿಗಮ ವಿರುದ್ಧ ನಡೆದ ಪ್ರತಿಭಟನೆ ಬಳಿಕ ಎಚ್ಚೆತ್ತುಕೊಂಡಿದ್ದು, ಏಪ್ರಿಲ್ ತಿಂಗಳ ವೇತನವನ್ನು ಕಾರ್ಮಿಕರಿಗೆ ಪಾವತಿ ಮಾಡಿದ್ದಾರೆ.

Recommended Video

Effects of Corona on Namma Metro | BMRCL | Metro effect | Oneindia kannada

ಬಿಹಾರಿ ಕಾರ್ಮಿಕರನ್ನು ಎರಡು ಪಾಳಿಯಲ್ಲಿ ಊರುಗಳಿಗೆ ಕಳುಹಿಸಲಾಗಿದೆ. ನಮ್ಮ ಮೆಟ್ರೋ ಕೆಲಸಗಾರರು ವೇತನಕ್ಕಾಗಿ ಬೊಮ್ಮನಹಳ್ಳಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ನಿಗಮದ ವ್ಯವಸ್ಥಾಪಕ ಅಜಯ್ ಸೇಠ್ ಎಲ್ಲಾ ಕಾರ್ಮಿಕರಿಗೆ ಮಾರ್ಚ್ ಮತ್ತು ಏಪ್ರಿಲ್ ವೇತನ ಪಾವತಿಸಲಾಗಿದೆ. ಕಾರ್ಮಿಕರೊಂದಿಗೆ ಸಮಾಲೋಚಿಸಿ, ಎಲ್ಲರನ್ನೂ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಒಂದು ತಿಂಗಳ ಬಳಿಕ ನಮ್ಮ ಮೆಟ್ರೋ ಕಾಮಗಾರಿ ಪುನರಾರಂಭಒಂದು ತಿಂಗಳ ಬಳಿಕ ನಮ್ಮ ಮೆಟ್ರೋ ಕಾಮಗಾರಿ ಪುನರಾರಂಭ

ಬಿಹಾರಿ ಕಾರ್ಮಿಕರನ್ನು ಮಾತ್ರ ಊರಿಗೆ ಕಳುಹಿಸಲಾಗಿದೆ. ನಮ್ಮನ್ನೂ ಊರಿಗೆ ಕಳುಹಿಸಬೇಕು ಎಂದು ಉತ್ತರಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳದ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನೂ ಊರಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದಿದ್ದಗಿ ತಿಳಿಸಿದ್ದಾರೆ.

After Namma Metro Workers Protest BMRCL Paid Wages

ಮೇ 3ರವರೆಗೆ ಲಾಕ್‌ಡೌನ್ ಘೋಷಿಸಿದ್ದರಿಂದ ಅಲ್ಲಿಯವರೆಗೆ ಸಂಚಾರ ಸ್ಥಗಿತಗೊಳಿಸಿರುವುದಾಗಿ ಬಿಎಂಆರ್‌ಸಿಎಲ್ ಈ ಮೊದಲು ತಿಳಿಸಿತ್ತು. ರೈಲುಗಳನ್ನು ಸುಸ್ಥಿತಿಯಲ್ಲಿ ಮತ್ತು ಪವರ್ ಮೋಡ್‌ನಲ್ಲಿ ಇರಿಸಲು ಪರೀಕ್ಷಾರ್ಥ ರೈಲು ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಓಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ರೈಲು ಸಂಚಾರ ಅವಧಿಯನ್ನು ಮುಂದಿನ ಎರಡು ವಾರಗಳಿಗೆ ವಿಸ್ತರಣೆ ಮಾಡಲಾಗಿದೆ.

English summary
Hundreds of irate metro workers at the BMRCL’s cement casting yard in Bommanahalli demanded immediate release of their pending salaries on Sunday,After Namma Metro Workers Protest BMRCL Paid Their Wages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X