ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋತ ಮೇಲೆ ಭತ್ಯೆ ಬೇಕೆಂದು ಸರ್ಕಾರಕ್ಕೆ ಮೊರೆ ಹೋದ ರಾಯರೆಡ್ಡಿ

By Nayana
|
Google Oneindia Kannada News

ಬೆಂಗಳೂರು, ಜು.27: ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಇತ್ತೀಚೆಗೆ ವಿಧಾನಸಭೆ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಿಂದ ಸೋಲನ್ನು ಅನುಭವಿಸಿದ್ದರು.

ಕೆಟ್ಟ ಮೇಲೆ ಬುದ್ಧಿಬಂತು ಎನ್ನುವಂತೆ ಸೋತ ಮೇಲೆ 5 ವರ್ಷಗಳ ಕಾಲ ಸರ್ಕಾರದಿಂದ ಪಡೆಯದೆ ಇರುವ ಶಾಸಕರ ಭತ್ಯೆಯನ್ನು ಈಗ ಬೇಕೆಂದು ಸರ್ಕಾರದ ಮೊರೆ ಹೋಗಿ ಅಚ್ಚರಿಯನ್ನು ಮೂಡಿಸಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಹಿನ್ನೆಲೆಯಲ್ಲಿ ಭ್ರಮನಿರಸಗೊಂಡಿರುವ ಅವರು ಸ್ವಯಂಪ್ರೇರಣೆಯಿಂದ ಪಾಲನೆ ಮಾಡಲು ಹೊರಟಿದ್ದ ಆದರ್ಶಕ್ಕೆ ತಿಲಾಂಜಲಿ ಇಡಲು ನಿರ್ಧರಿಸಿದ್ದು ಈ ವರ್ತನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಚಿವ ಬಸವರಾಜ ರಾಯರಡ್ಡಿಗೆ ಸೋಲುಣಿಸಿದ ಬಿಜೆಪಿಸಚಿವ ಬಸವರಾಜ ರಾಯರಡ್ಡಿಗೆ ಸೋಲುಣಿಸಿದ ಬಿಜೆಪಿ

ಸಚಿವರಾಗಿದ್ದಾಗ ಸರ್ಕಾರಿ ವಸತಿ ಪಡೆಯದೇ ಸ್ವಂತ ಮನೆಯಲ್ಲಿದ್ದ ಅವರು ಮಾಸಿಕ ಬಾಡಿಗೆ 1 ಲಕ್ಷ ರೂ. ಭತ್ಯೆ ಪಡೆದಿರಲಿಲ್ಲ. 23 ತಿಂಗಳುಗಳ ಕಾಲ ಮನೆ ಬಾಡಿಗೆ ಮೊತ್ತ, ಇತರೆ ಭತ್ಯೆ ಹಾಗೂ ವೇತನ ಮೊತ್ತ 50 ಲಕ್ಷವಾಗಲಿದ್ದು, ಶಾಸಕರ ಭತ್ಯೆ ಪ್ರತ್ಯೇಕಗಾವಿದೆ. ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಒಟ್ಟಿಗೆ ದೊಡ್ಡ ಮೊತ್ತವೇ ಕೈ ಸೇರಲಿದೆ.

After losing fray, Rayareddy sought remuneration for his service

ಆಡಳಿತ ಸುಧಾರಣೆ ಇಲಾಖೆಗೆ ರಾಯರೆಡ್ಡಿ ಬರೆದ ಪತ್ರವನ್ನು ಈಗಘಾಲೇ ಹಣಕಾಸು ಇಲಾಖೆಗೆ ರವಾನೆ ಮಾಡಲಾಗಿದೆ. ಆದರೆ ಶಾಸನ ಸಭೆಯ ನಡಾವಳಿಯೊಂದು ಬಾಕಿ ಭತ್ಯೆ ಪಡೆಯುವುದಕ್ಕೆ ಅಡ್ಡಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಹಣಕಾಸು ಇಲಾಖೆಯಿಂದ ಸ್ಪೀಕರ್ ಕಚೇರಿಗೆ ಕಳಹಿಸಿರುವ ಪತ್ರದಲ್ಲೂ ಇದನ್ನು ಉಲ್ಲೇಖಿಸಲಾಗಿದೆ.

English summary
Former minister Basavaraj Rayareddy has sought allowance and remuneration of his MLA tenure. Earlier he had rejected any allowance from the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X