ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್: ಪೊಲೀಸರಿಂದ ತಪ್ಪಿಸಿಕೊಳ್ಳಲು ಏನ್ ಕಥೆ ಕಟ್ತಾರೆ ಗುರು..

|
Google Oneindia Kannada News

ಬೆಂಗಳೂರು, ಮೇ 10: ಹತ್ತುದಿನ ಹೇರಲಾಗಿದ್ದ ಜನತಾ ಕರ್ಫ್ಯೂಗೆ ಸಾರ್ವಜನಿಕರು ಅಷ್ಟಾಗಿ ಸ್ಪಂದಿಸಲಿಲ್ಲ. ಎಷ್ಟೇ ಕಠಿಣ ಕ್ರಮ ಎಂದರೂ, ಪೊಲೀಸರು ಲಾಠಿ ಹಿಡಿದುಕೊಂಡು ಬೀದಿಗೆ ಇಳಿದರೂ, ಸಾರ್ವಜನಿಕರಿಗೆ ಸೀರಿಯಸ್ನೆಸ್ ಅರ್ಥವಾದಂತಿಲ್ಲ.

ಜನತಾ ಕರ್ಪ್ಯೂವಿನ ವೇಳೆ ಬೆಳಗ್ಗೆ ಹತ್ತು ಗಂಟೆಯ ನಂತರ ಸಾರ್ವಜನಿಕರು ಅಡ್ಡಾಡಿದರೆ, ಪೊಲೀಸರು ಅಡ್ಡ ಹಾಕುತ್ತಿರುವುದು ರಾಜಧಾನಿಯ ಬಹುತೇಕ ವೃತ್ತಗಳಲ್ಲಿ ಸಾಮಾನ್ಯವಾಗಿತ್ತು.

ದೇಶದ ಶೇ 98ರಷ್ಟು ಜನತೆ ಮೇಲೆ ಲಾಕ್‌ಡೌನ್ ಹೇರಿಕೆದೇಶದ ಶೇ 98ರಷ್ಟು ಜನತೆ ಮೇಲೆ ಲಾಕ್‌ಡೌನ್ ಹೇರಿಕೆ

ಆ ವೇಳೆ, ವಾಹನ ಸವಾರರು ನೀಡುವ ಒಂದೊಂದು ಕಾರಣಗಳನ್ನು ನೋಡಿದರೆ, ನಗಬೇಕೋ, ಅಳಬೇಕೋ ಗೊತ್ತಾಗುವುದಿಲ್ಲ. ಕೆಲವೊಂದು ಸ್ಯಾಂಪಲ್ ಗಳು ಹೀಗಿವೆ:

After Janata Curfew Hours, People Are Giving Variety Of Reasons To Avoid Police Action

ರಾಗಿಹಿಟ್ಟು ಮಾಡಿಸಿಕೊಂಡು ಬರಲು ಮಿಲ್ ಗೆ ಹೋಗಿದ್ದೆ ಸರ್..

ನನಗೆ ಪಾಸಿಟೀವ್ ಇದೆ, ಟೆಸ್ಟ್ ಮಾಡಿಸಿಕೊಂಡು ಬರೋಕೆ, ನಾನು ಮತ್ತು ನನ್ ಫ್ರೆಂಡ್ ಹೋಗುತ್ತಾ ಇದ್ದೇವೆ ಸರ್..

ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಕ್ಕೆ ಹೋಗುತ್ತಿದ್ದೇನೆ. ಎಲ್ಲಿ ಅಪಾಯಿಟ್ಮೆಂಟ್ ತೋರಿಸು ಎಂದು ಪೊಲೀಸರು ಕೇಳಿದರೆ, ಮೊಬೈಲ್ ಮನೇಲಿ ಇದೆ ಸಾರ್..

ನನ್ ಗರ್ಲ್ ಫ್ರೆಂಡ್ ಬರ್ತಡೇ ಸರ್.. ಇವತ್ತು.. ಬುಕ್ಕೆ ಕೊಟ್ಟು ಬರೋಕೆ ಹೋಗುತ್ತಾ ಇದ್ದೇನೆ ಸರ್..

ನನ್ ಮದುವೆ ಸಾರ್ ಇವತ್ತು.. ಮದುವೆ ಮುಗಿಸಿಕೊಂಡು ಮನೆಗೆ ವಾಪಸ್ ಹೋಗುತ್ತಾ ಇದ್ದೇವೆ ಸರ್..

ಬ್ಲೋ ನಿಲ್ಲುತ್ತಾ ಇಲ್ಲ ಸರ್.. ಪಂಚರ್ ಹಾಕಿಸಿಕೊಂಡು ಬರ್ತಾ ಇದ್ದೀನಿ ಸರ್..

ತಂದೆಗೆ ಪಾಸಿಟಿವ್ ಬಂದಿದೆ, ನೀವೂ ಬೇಕಾದರೆ ನನ್ನ ಜೊತೆಗೆ ಬನ್ನಿ. ಇಲ್ಲಾಂದ್ರೆ, ಯಾಕೆ ಗಾಡಿ ತಡಿತೀರಾ?

Recommended Video

ಪುಕ್ಸಟ್ಟೆ ಸವಲತ್ತು ಬಿಟ್ಟು ಜನಕ್ಕೋಸ್ಕರ ಕೆಲಸ ಮಾಡೋದು ಯಾವಾಗ?? | Oneindia Kannada

ಇಲ್ಲೇ ಸೋದರಮಾವನ ಬಿಟ್ಟು ಬರೋಕೆ ಚಾಮರಾಜಪೇಟೆಗೆ ಹೋಗಿದ್ದೆ ಸರ್..

English summary
After Janata Curfew Hours, People Are Giving Variety Of Reasons To Avoid Police Action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X