ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Pink slip- ಐಬಿಎಂ ಹಾದಿಯಲ್ಲಿ ಈಗ ಇನ್ಫೋಸಿಸ್

By Srinath
|
Google Oneindia Kannada News

after-ibm-india-layoffs-Infosys-on-job-cuts-in-bangalore
ಬೆಂಗಳೂರು, ಫೆ.14: ಬೆಂಗಳೂರಿಗೆ ವಿಶೇಷ ಸ್ಥಾನಮಾನ ದಕ್ಕಿಸಿಕೊಟ್ಟಿರುವ ಇನ್ಫೋಸಿಸ್ ಸಹ ಈಗ ಐಬಿಎಂ ಹಾದಿಯಲ್ಲಿ ನಡೆದಿದೆ. ಐಬಿಎಂ ಸಾಫ್ಟ್ ವೇರ್ ಕಂಪನಿಯು ಬೆಂಗಳೂರು ಸೇರಿದಂತೆ ದೇಶಾದ್ಯಂತ ಸುಮಾರು 2 ಸಾವಿರ ಮಂದಿಯನ್ನು 2 ದಿನಗಳ ಹಿಂದೆ ದಿಢೀರನೆ ಕೆಲಸದಿಂದ ತೆಗೆದುಹಾಕಿದೆ. ಪ್ರತಿಷ್ಠಿತ ಕಂಪನಿಗಳ ಈ ಕ್ರಮದಿಂದ ಸಿಲಿಕಾನ್ ಕಣಿವೆಯ ಪ್ರತಿಷ್ಠೆಗೆ ಧಕ್ಕೆಯೊದಗಿದೆ ಎಂದು ನಗರದ ಟೆಕ್ಕಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಯೋಗಿಗಳನ್ನು ಕಾಡತೊಡಗಿವೆ ಲೇ ಆಫ್ ಗಳು:
Infosys, Intel, Dell ಮತ್ತು Cognizant ಸಹ ಸರದಿಯಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಾಲುಗಟ್ಟಿ ನಿಂತಿವೆ. ಈ ಮಧ್ಯೆ, ಕಂಪನಿಯನ್ನು ತೊರೆದ ಟೆಕ್ಕಿಗಳು ಮಾಧ್ಯಮಗಳ ಜತೆ ಮಾತನಾಡುವಂತಿಲ್ಲ ಎಂದು ಐಬಿಎಂ ಷರತ್ತು ಹೇರಿದೆ. ಹಾಗಾಗಿ ವಸ್ತುಸ್ಥಿತಿ ಏನು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗುತ್ತಿಲ್ಲ. ಏಪ್ರಿಲ್ ವೇಳೆಗೆ ಕನಿಷ್ಠ 2,500 ಮಂದಿ ಟೆಕ್ಕಿಗಳು ಬೆಂಗಳೂರಿನಲ್ಲಿ ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಷರತ್ತನ್ನು ಉಲ್ಲಂಘಿಸಿ, ಮಾಧ್ಯಮಗಳ ಜತೆ ಮಾತನಾಡಿದರೆ ಇಡೀ ಐಟಿ ಉದ್ಯಮವೇ ತಮ್ಮನ್ನು ಕಪ್ಪುಪಟ್ಟಿಗೆ ಸೇರಿಸುವ ಅಪಾಯವಿದೆ ಎಂದು ಪಿಂಕ್ ಸ್ಲಿಪ್ ತೆಗೆದುಕೊಂಡ ಉದ್ಯೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಜತೆಗೆ ಮೇ ನಂತರ ಪರಿಸ್ಥಿತಿ ಸುಧಾರಿಸಿ, ಐಟಿ ಕ್ಷೇತ್ರದಲ್ಲಿ ಮತ್ತೆ ಒಳ್ಳೆಯ ಅವಕಾಶಗಳು ದಕ್ಕಬಹುದು ಎಂಬ ಆಶಾಭಾವವೂ ಈ ಟೆಕ್ಕಿಗಳಲ್ಲಿ ಮನೆ ಮಾಡಿದೆ.

Nasscom ನಿಯಮದ ಪ್ರಕಾರ ಹೀಗೆ ಕಂಪನಿಗಳ ನೀತಿಗೆ ವಿರುದ್ಧವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರೆ ಅಂತಹವರು ಸೀದಾ ಕಪ್ಪುಪಟ್ಟಿಗೆ ಸೇರ್ಪಡೆಯಾಗುತ್ತಾರೆ.

ಈ ಮಧ್ಯೆ, 2011ರಲ್ಲಿ ಸ್ಥಾಪನೆಗೊಂಡ ಇನ್ಫಿ ಮುಖ್ಯಸ್ಥ ಎಸ್ ಡಿ ಶಿಬುಲಾಲ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ products, platforms and solutions (PPS) unit ಘಟಕದಿಂದಲೂ ಉದ್ಯೋಗಿಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. 2020ರ ವೇಳೆಗೆ ಇನ್ಫಿಗೆ ಮೂರನೆ ಒಂದು ಭಾಗದಷ್ಟು ಆದಾಯ ತರುವಂತಹ ಮಹತ್ವದ ಯೋಜನೆ ಇದಾಗಿತ್ತು. ಇದೀಗ ಈ PPS ಘಟಕವನ್ನು ಲಾಭದಾಯಕಗೊಳಿಸುವ ಪ್ರಯತ್ನದಲ್ಲಿ ಕಂಪನಿಯು ಉದ್ಯೋಗಿಗಳ ಸಂಖ್ಯೆಯನ್ನು ತಗ್ಗಿಸುವ ಮಹತ್ಕಾರ್ಯಕ್ಕೆ ಕೈಹಾಕಿದೆ!

English summary
After IBM India layoffs Infosys on job cuts in Bangalore. Now there is also the possibility of large-scale sackings from Infosys, Intel, Dell and Cognizant. It was reported that around 2000 techies lost jobs in IBM Bangalore citing poor fourth-quarter results reported last month, marked by a 26% slump in hardware revenue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X