ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈದರಾಬಾದ್ ಘಟನೆ ನಂತರ ಮಹಿಳೆಯರ ಸುರಕ್ಷತೆಗೆ ನಮ್ಮ ಮೆಟ್ರೋ ಕ್ರಮ

|
Google Oneindia Kannada News

ಬೆಂಗಳೂರು, ಡಿಸೆಂಬರ್ 07: ಹೈದರಾಬಾದಿನಲ್ಲಿ ಅತ್ಯಾಚಾರ, ಕೊಲೆ ಪ್ರಕರಣದ ನಂತರ ಬೆಂಗಳೂರಿನ ಪ್ರಮುಖ ಸಾರಿಗೆ ಸಂಸ್ಥೆ ಬಿಎಂಆರ್ ಸಿಎಲ್ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುವವರು ಪೆಪ್ಪರ್ ಸ್ಪ್ರೇ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿತ್ತು.

ಇದಲ್ಲದೆ, ಇನ್ನಷ್ಟು ಕ್ರಮಗಳನ್ನು ಕೈಗೊಂಡಿದ್ದು, ತಡರಾತ್ರಿ ಮೆಟ್ರೋದಲ್ಲಿ ಪ್ರಯಾಣಿಕರ ಸಂಚಾರ ವಿರಳವಾಗಿರುತ್ತದೆ. ಹೀಗಾಗಿ ರಾತ್ರಿ 10ರ ಬಳಿಕ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ರಾತ್ರಿ ವೇಳೆ ಮಹಿಳಾ ಪ್ರಯಾಣಿಕರ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಲ ಪ್ರಯಾಣಿಕರಿಂದ ದೂರು ದಾಖಲಾಗಿರುವ ಹಿನ್ನಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.

After Hyderabad incident: BMRCL to strengthen security for Women passengers

ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ ನಡೆದ ಬಳಿಕ ಮಹಿಳಾ ಸುರಕ್ಷತೆ ಬಗ್ಗೆ ದೇಶಾದ್ಯಂತ ಚರ್ಚೆ ಆರಂಭವಾಗಿದೆ. ಹೀಗಾಗಿ, ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಡಿಸೆಂಬರ್ 3 ರಿಂದಲೇ ಆರಂಭವಾಗಿರುವ ಪ್ರಾಯೋಗಿಕ ಸೇವೆ ಆರಂಭವಾಗಿದೆ. ಪ್ರತಿನಿತ್ಯ ಮೆಟ್ರೋದಲ್ಲಿ ಸರಾಸರಿ 1 ಲಕ್ಷ ಮಹಿಳಾ ಪ್ರಯಾಣಿಕರ ಸಂಚಾರ ಮಾಡುತ್ತಾರೆ. ವಾರಾಂತ್ಯ, ವಿಶೇಷ ದಿನಗಳಲ್ಲಿ ದಿನಕ್ಕೆ 4 -6 ಲಕ್ಷ ತನಕ ಪ್ರಯಾಣಿಕರನ್ನು ಮೆಟ್ರೋದಲ್ಲಿ ಕಾಣಬಹುದು, ಪ್ರಯಾಣಿಕರ ಪೈಕಿ ಶೇ 31ರಷ್ಟು ಮಹಿಳಾ ಪ್ರಯಾಣಿಕರು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಥ್ ಹೇಳಿದ್ದಾರೆ.

English summary
After Hyderabad incident: BMRCL Namma Metro said it will strengthen security mesures for Women passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X