ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಡಿಕೆಶಿ ಬಂಧನ: ದ್ವೇಷ ಮರೆತು ಮತ್ತೆ ಒಂದಾದ ಜೆಡಿಎಸ್ ಕಾಂಗ್ರೆಸ್'

|
Google Oneindia Kannada News

Recommended Video

ಮತ್ತೆ ಒಂದಾದ ಸಿದ್ದು, ದೇವೇಗೌಡ..! ಎಲ್ಲರಲ್ಲೂ ಅಚ್ಚರಿ..? |DK Shivakumar | Oneindia Kannada

ಬೆಂಗಳೂರು, ಸೆಪ್ಟೆಂಬರ್ 5: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಂಧನ ಬಂಧನವಾಗುತ್ತಿದ್ದಂತೆ ದ್ವೇಷ ಮರೆತು ಮತ್ತೆ ಕಾಂಗ್ರೆಸ್ ಜೆಡಿಎಸ್ ಒಂದಾಗಿದ್ದಾರೆ ಎಂದು ಸಂಸದ ವಿ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಬಂಧನಕ್ಕೂ ಮೊದಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ನಡುವೆ ಜಗಳ ಆರಂಭವಾಗಿತ್ತು.

ಇಬ್ಬರ ನಡುವೆ ಬೆಂಕಿ ಹೊತ್ತಿ ಉರಿಯುತ್ತಿತ್ತು. ಡಿಕೆಶಿ ಬಂಧನದ ನಂತರ ಅವರು ಅದನ್ನೆಲ್ಲ ಮರೆತು ಬಿಟ್ಟರು. ಡಿಕೆಶಿ ಬಂಧನದ ವಿಷಯದಲ್ಲಿ ಅವರೆಲ್ಲ ಮತ್ತೆ ಒಂದಾಗಿದ್ದಾರೆ ಎಂದು ಹೇಳಿದರು.

ಡಿಕೆ ಶಿವಕುಮಾರ್ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸದ ವಿ ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

Deve gowda, Siddaramaiah

ನಮಗೆ ಅವರ ಬಗ್ಗೆ ಯಾವುದೇ ದ್ವೇಷ ಇಲ್ಲ, ವೈರತ್ವ ಇಲ್ಲ. ಅವರ ಬಂಧನದಿಂದ ರಾಜಕಾರಣ ಮಾಡಬೇಕಾದ ಅಗತ್ಯವೂ ನಮಗಿಲ್ಲ ಎಂದರು.

ಇಡಿ ಇಲಾಖೆಯವರು ಡಿ ಕೆ ಶಿವಕುಮಾರ್​​ ಅವರನ್ನು ಬಂಧಿಸಿದ್ದಾರೆಯೇ ಹೊರತು ಬಿಜೆಪಿಗೂ ಅದಕ್ಕೂ ಸಂಬಂಧವಿಲ್ಲ. ಐಟಿ ಹಾಗೂ ಇಡಿ ತನಿಖೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಅವರ ಬಂಧನದಲ್ಲಿ ಯಾರ ಕೈವಾಡವೂ ಇಲ್ಲ.

ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಕಾನೂನು ಎಲ್ಲರಿಗೂ ಒಂದೆ. ಆದರೆ ಕಾಂಗ್ರೆಸ್ ನವರು ಈ ಪ್ರಕರಣವನ್ನು ರಾಜಕೀಯ ಮಾಡುತ್ತಿದ್ದಾರೆ ಎಂದರು.

ಐಟಿ ದಾಳಿ ನಡೆದಿರೋದು 2017ರಲ್ಲಿ. ಐಟಿ, ಸಿಬಿಐ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ‌ಬಂದ ಮೇಲೆ ರಚನೆಯಾಗಿಲ್ಲ. ಹಿಂದಿನಿಂದಲ್ಲೂ ನಡೆದುಕೊಂಡ ಬಂದ ಸಂಸ್ಥೆ.

ಕಾಂಗ್ರೆಸ್​​ ದೇಶದ್ರೋಹಿ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ ದಲ್ಲಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು ಆದರೆ ಸಾರ್ವಜನಿಕ ಅಸ್ತಿ ಪಾಸ್ತಿ ಹಾಳು ಮಾಡುವುದು ಅಪರಾದ.

ಒಂದು ಸಾರಿ ಬಂಧನ ಆದಮೇಲೆ ಕಾನೂನಾತ್ಮಕ ಕೆಲಸ ಮಾಡುತ್ತಾರೆ. ಎಫ್.ಐ.ಆರ್ ಮಾಡಿ ತಪ್ಪು ಮಾಡಿರೋದು ಗೊತ್ತಾದ ಮೇಲೆ ಅವರ ಕೆಲಸ ಅವರು ಮಾಡಿದಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

ಡಿಕೆ ಶಿವಕುಮಾರ್ ಭೇಟಿ ಮಾಡಿದ ಕಾಂಗ್ರೆಸ್ ಹಿರಿಯ ನಾಯಕರುಡಿಕೆ ಶಿವಕುಮಾರ್ ಭೇಟಿ ಮಾಡಿದ ಕಾಂಗ್ರೆಸ್ ಹಿರಿಯ ನಾಯಕರು

ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ. ಹತ್ತಾರು ರಾಷ್ಟ್ರೀಯ ಹಾಗೂ ರಾಜ್ಯದ ಪ್ರಮುಖರುಗಳ ಮೇಲೆ ದಾಳಿಗಳು ನಡೆದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​​​ ಕುಮಾರ್​ ಕಟೀಲ್​​​​ ಹೇಳಿದರು.

ಯಾರಿಗೆ ಸಂವಿಧಾನ ಕಾನೂನು, ನ್ಯಾಯಾಂಗದ ಮೇಲೆ ನಂಬಿಕೆಯಿಲ್ಲವೋ ಅವರು ಸಹಕಾರ ನೀಡುತ್ತಾರೆ.

ಬೀದಿಗಿಳಿದು ಪ್ರತಿಭಟನೆ ಮಾಡುವವರಿಗೆ ನ್ಯಾಯಾಗದ ಮೇಲೆ, ಕಾನೂನು, ಸಂವಿಧಾನದ ಮೇಲೆ ನಂಬಿಕೆಯಿಲ್ಲ, ಹಾಗಾಗಿ ಅಂತವರು ನ್ಯಾಯಾಂಗದ ವಿರುದ್ದ ಇದ್ದಾರೆ ಅಂತ ತಿಳಿದುಕೊಳ್ಳಬೇಕಾಗುತ್ತದೆ ಎಂದರು.

English summary
MP V Srinivas prasad has said that Former minister DK Sivakumar's arrest unleashed by hatred Congress JDS Reunited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X