ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆ.ಸಿ ನಗರ ಪೊಲೀಸ್ ಠಾಣೆಯಲ್ಲಿ ಆಫ್ರಿಕಾ ಪ್ರಜೆ ಲಾಕಪ್ ಡೆತ್ ಪ್ರಕರಣ ಸಿಐಡಿಗೆ

|
Google Oneindia Kannada News

ಬೆಂಗಳೂರು, ಆ. 02: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ವಿದೇಶಿ ಪ್ರಜೆ ಜೆ.ಸಿ. ನಗರ ಪೊಲೀಸರ ಕಸ್ಡಡಿಯಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಆಫ್ರಿಕನ್ ಪ್ರಜೆಗಳು ಪ್ರತಿಭಟನೆ ನಡೆಸಿದರು. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಬೆನ್ನಲ್ಲೇ ಶಾಂತಿಯುತ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದೆ. ಮುಷ್ಕರ ನಿರತ ಆಫ್ರಿಕನ್ ಪ್ರಜೆಗಳ ಮೇಲೆ ಲಾಠಿ ಬೀಸಿ ಚದುರಿಸಿದ್ದಾರೆ. ಜೆ.ಸಿ.ನಗರ ಪೊಲೀಸ್ ಠಾಣೆಗೆ ನಾಲ್ಕು ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.

ವಿದೇಶಿ ಪ್ರಜೆ ಲಾಕಪ್ ಡೆತ್?: ಡ್ರಗ್ಸ್ ಜಾಲ ಪ್ರಕರಣದಲ್ಲಿ ಜೆ.ಸಿ. ನಗರ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ವಿದೇಶಿ ಪ್ರಜೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಪೊಲೀಸರ ಕಸ್ಟಡಿಯಲ್ಲಿದ್ದ ಈ ವ್ಯಕ್ತಿ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿ ವೀಸಾದಡಿ 2015 ರಲ್ಲಿ ಬೆಂಗಳೂರಿಗೆ ಬಂದಿದ್ದ ಜಾನ್ ಅಲಿಯಸ್ ಜೋಯಲ್ ಶಿದಾನಿ ಮಲು ಮೃತಪಟ್ಟವ. ಈ ಕುರಿತು ಜೆ.ಸಿ ನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹೃದಯಾಘಾತದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರ ಹಿಂಸೆಯಿಂದಲೇ ಆತ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

Bengaluru: African Citizen Lockup Death: case transferred to CID for Investigation

ಕಾಂಗೋ ಮೂಲದ ಜೋಯಿಲ್ ಎಂಬಾತ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು, ಪೊಲೀಸರ ವಶದಲ್ಲಿದ್ದ ಜಾನ್‌ಗೆ ಬೆಳಗ್ಗೆ ಹೃದಯಾಘಾತ ಕಾಣಿಸಿಕೊಂಡಿದೆ. ಸಮೀಪದ ಚಿರಾಯು ಆಸ್ಪತ್ರೆಗೆ ದಾಖಲಿಸಿದ್ದು, ಒಂದು ಗಂಟೆ ಚಿಕಿತ್ಸೆ ಬಳಿಕ ಆತ ಮೃತಪಟ್ಟಿದ್ದಾನೆ. ಈ ಕುರಿತು ಕೇಸು ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.

ಆ.1 ರಂದು ಭಾನುವಾರ ಬೆಳಗ್ಗೆ ಬಂಜಾರ ಲೇಔಟ್ ಸಮೀಪದಲ್ಲಿ ಡ್ರಗ್ ಪೆಡ್ಲರ್ ಡ್ರಗ್ ಮಾರಾಟ ಮಾಡುತ್ತಿರುವ ಬಗ್ಗೆ ಜೆಸಿನಗರ ಪಿಎಸ್ಐ ರಘುಪತಿ ಅವರಿಗೆ ಮಾಹಿತಿ ಬಂದಿತ್ತು. ಆ ಪ್ರದೇಶದಲ್ಲಿ ಹೊಯ್ಸಳ ವಾಹನ ಓಡಾಡಿದ್ದರಿಂದ ಜೋನ್ ಜಾಗ ಬದಲಿಸಿ ಬಾಬುಸಾಬ್ ಪಾಳ್ಯದತ್ತ ತೆರಳಿದ್ದ. ಇದೇ ವೇಳೆ ಎಂಡಿಎಂಎ ಡ್ರಗ್ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಆ. 2 ರಂದು ಬೆಳಗಿನ ಜಾವ ಜಾನ್ ಎಂಬಾತನನ್ನು ವಶಕ್ಕೆ ಪಡೆದು ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿದ್ದರು.

Bengaluru: African Citizen Lockup Death: case transferred to CID for Investigation

ಸೋಮವಾರ ಬೆಳಗಿನ ಜಾವ ಐದು ಗಂಟೆ ಸುಮಾರಿನಲ್ಲಿ ಜಾನ್ ತನಗೆ ಎದೆ ನೋವು ಎಂದು ಹೇಳಿಕೊಂಡಿದ್ದು, ಪಿಎಸ್ಐ ರಘುಪತಿ ಅವರಿಗೆ ಈ ಮಾಹಿತಿ ನೀಡಲಾಗಿದೆ. ಸಮೀಪದ ಚಿರಾಯು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದು ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಜಾನ್ ಸಾವನ್ನಪ್ಪಿರವುದು ದೃಢಪಟ್ಟಿದೆ. 2015 ರಲ್ಲಿ ವಿದೇಶಿ ವಿದ್ಯಾರ್ಥಿ ವೀಸಾ ಮೇಲೆ ಬಂದಿದ್ದ ಜಾನ್ 2017 ರಲ್ಲಿ ವಾಪಸು ಮರಳಬೇಕಿತ್ತು. ಆದರೆ ಇಲ್ಲಿಯೇ ಮಾದಕ ವ್ಯಸನ ಜಾಲದಲ್ಲಿ ಸಿಕ್ಕಿಬಿದ್ದಿದ್ದ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಶಿಫಾರಸು ಹಿನ್ನೆಲೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂತು ತನಿಖೆ ನಡೆಸುತ್ತಿದ್ದೇವೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಆಫ್ರಿಕಾ ಪ್ರಜೆಗಳ ಪ್ರತಿಭಟನೆ: ಪೊಲೀಸರ ವಶದಲ್ಲಿ ಜಾನ್ ಮೃತಪಟ್ಟ ಬೆನ್ನಲ್ಲೇ ಆಫ್ರಿಕಾ ಮೂಲದ ಪ್ರಜೆಗಳು ಪ್ರತಿಭಟನೆ ನಡೆಸಿದರು. ನೂರಾರು ಆಫ್ರಿಕನ್ ಪ್ರಜೆಗಳು ಜಮಾಯಿಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಆಫ್ರಿಕನ್ ಪ್ರಜೆಗಳು ಹಲ್ಲೆಗೆ ಯತ್ನಿಸಿದ್ದು, ಶಾಂತಿಯುತ ಹೋರಟ ಹಿಂಸಾ ರೂಪಕ್ಕೆ ತಿರುಗಿತು. ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು ಎಂಬ ಆರೋಪದ ಬೆನ್ನಲ್ಲೇ ಪೊಲೀಸರು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸದರು. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಆಫ್ರಿಕನ್ ಪ್ರಜೆಗಳೂ ಪರಾರಿಯಾಗಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿತ ವಿದೇಶಿ ಪ್ರಜೆಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Bengaluru: African Citizen Lockup Death: case transferred to CID for Investigation

ಪ್ರತಿಭಟನಾ ನಿರತರಿಗೆ ಜಾಗ ಖಾಲಿ ಮಾಡುವಂತೆ ತಿಳಿಸಿದ್ದೇವೆ. ಆದರೆ, ಎಷ್ಟೊತ್ತಾದರೂ ಹೋಗಲಿಲ್ಲ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದು, ಇದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗುವುದು ಉತ್ತರ ವಿಭಾಗದ ಡಿಸಿಪಿ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ್ದಾರೆ.

Recommended Video

ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ BSY ಪ್ಲಾನ್ ಏನು? | Oneindia Kannada

ಸಿಐಡಿ ತನಿಖೆಗೆ ಆಫ್ರಿಕನ್ ಪ್ರಜೆ ಲಾಕಪ್ ಡೆತ್: ಆಫ್ರಿಕನ್ ಪ್ರಜೆ ಲಾಕಪ್ ಡೆತ್ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ಆದೇಶಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗದರ್ಶಿ ಸೂತ್ರದ ಪ್ರಕಾರ ಉನ್ನತ ಮಟ್ಟದ ತನಿಖೆ ನಡೆಯಲಿದೆ.

English summary
African based drug peddler suspect death in police custody: case transferred to CID for Investigation. African citizens protest against lockup Death know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X