ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Aero India 2023 Dates: ಬೆಂಗಳೂರಲ್ಲಿ 2023ನೇ ಸಾಲಿನ ಏರ್‌ಶೋಗೆ ದಿನಾಂಕ ನಿಗದಿ

|
Google Oneindia Kannada News

ಬೆಂಗಳೂರು, ನವೆಂಬರ್ 28; ಉದ್ಯಾನ ನಗರಿ ಬೆಂಗಳೂರು ಮತ್ತೆ ಲೋಕಹ ಹಕ್ಕಿಗಳ ಕಲರವಕ್ಕೆ ಸಾಕ್ಷಿಯಾಗಲಿದೆ. ಏರೋ ಇಂಡಿಯಾ 2023ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.

ಕೇಂದ್ರ ರಕ್ಷಣಾ ಸಚಿವಾಲಯ ಏರೋ ಇಂಡಿಯಾ 2023ಕ್ಕೆ ದಿನಾಂಕ ನಿಗದಿ ಮಾಡಿದೆ. ನಗರದ ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ.

ಏರೋ ಇಂಡಿಯಾಗೆ ತೆರೆ,ಹರಿದು ಬಂತು ಬಂಡವಾಳ ಏರೋ ಇಂಡಿಯಾಗೆ ತೆರೆ,ಹರಿದು ಬಂತು ಬಂಡವಾಳ

2023ರ ಫೆಬ್ರವರಿ 13 ರಿಂದ 17ರ ತನಕ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ. ಇದು ಬೆಂಗಳೂರು ನಗರದಲ್ಲಿ ನಡೆಯುತ್ತಿರುವ 14ನೇ ಅವೃತ್ತಿಯ ಏರ್‌ ಶೋ ಆಗಿದೆ.

ಏರೋ ಇಂಡಿಯಾ: ಲಘು ಯುದ್ಧ ವಿಮಾನ ತೇಜಸ್ ಜತೆ ಅಮೆರಿಕ ಹೆವಿ ಬಾಂಬರ್ B-1B ಹಾರಾಟ ಏರೋ ಇಂಡಿಯಾ: ಲಘು ಯುದ್ಧ ವಿಮಾನ ತೇಜಸ್ ಜತೆ ಅಮೆರಿಕ ಹೆವಿ ಬಾಂಬರ್ B-1B ಹಾರಾಟ

AeroIndia 2023 At Bengaluru From February 13 To 17

ಕೇಂದ್ರ ರಕ್ಷಣಾ ಸಚಿವಾಲಯ ಪ್ರತಿ ಎರಡು ವರ್ಷಗಳಿಗೊಮ್ಮೆ ಏರ್ ಶೋ ಆಯೋಜನೆ ಮಾಡುತ್ತದೆ. ಬೆಂಗಳೂರು ನಗರ ಈ ಏರ್ ಶೋ ಆತಿಥ್ಯವನ್ನು ವಹಿಸುತ್ತದೆ. ಈ ಹಿಂದೆ ಏರ್ ಶೋ ಗೋವಾಕ್ಕೆ ಸ್ಥಳಾಂತರವಾಗಲಿದೆ ಎಂಬ ಸುದ್ದಿಗಳು ಸಹ ಕೇಳಿ ಬಂದಿದ್ದವು.

ಏರೋ ಇಂಡಿಯಾ: ಮನೆಯಿಂದಲೇ ಲೈವ್ ಆಗಿ ಕಣ್ತುಂಬಿಕೊಳ್ಳಲು ಅವಕಾಶ ಏರೋ ಇಂಡಿಯಾ: ಮನೆಯಿಂದಲೇ ಲೈವ್ ಆಗಿ ಕಣ್ತುಂಬಿಕೊಳ್ಳಲು ಅವಕಾಶ

ಲಕ್ಷಾಂತರ ಜನರು ಭಾಗಿ; ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಸಾವಿರಾರು ಕೋಟಿ ರೂ. ಒಪ್ಪಂದಗಳಿಗೆ ಸಾಕ್ಷಿಯಾಗುತ್ತದೆ. ಅಲ್ಲದೇ ಏರ್ ಶೋ ನಡೆಯುವಾಗ ಲೋಕದ ಹಕ್ಕಿಗಳ ಹಾರಾಟವನ್ನು ವೀಕ್ಷಣೆ ಮಾಡಲು ಲಕ್ಷಾಂತರ ಜನರು ಆಗಮಿಸುತ್ತಾರೆ.

ಬೆಂಗಳೂರಿನ ಯಲಹಂಕದಲ್ಲಿ 13ನೇ ಆವೃತ್ತಿಯ ಏರೋ ಇಂಡಿಯಾ ಪ್ರದರ್ಶನ 2021ರಲ್ಲಿ ನಡೆದಿತ್ತು. 14ನೇ ಆವೃತ್ತಿಯ ಪ್ರದರ್ಶನಕ್ಕೆ ಈಗ ದಿನಾಂಕ ಘೋಷಣೆಯಾಗಿದೆ.

ರಕ್ಷಣಾ ಸಚಿವಾಲಯದ ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಜೇಷನ್ ವತಿಯಿಂದ ಏರೋ ಇಂಡಿಯಾ ಪ್ರದರ್ಶನದ ವೇಳೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಆಗಸದಲ್ಲಿ ಹಲವಾರು ವಿಮಾನಗಳ ಸಾಹಸ ಪ್ರದರ್ಶನ ನೋಡುವುದು ಕಣ್ಣಿಗೆ ಹಬ್ಬವಾಗಿದೆ.

ಭಾರತ ಮತ್ತು ಇತರ ದೇಶಗಳ ಏರೋಸ್ಪೆಸ್ ಉದ್ಯಮದ ಹಲವಾರು ಮಾರಾಟಗಾರರು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ರಕ್ಷಣಾ ಇಲಾಖೆಯಲ್ಲಿ ಹೊಸ ಹೊಸ ಒಪ್ಪಂದಗಳು ನಡೆಯುತ್ತವೆ.

ಬೆಂಗಳೂರು ನಗರದಲ್ಲಿ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಏಷ್ಯಾದ ಅತ್ಯಂತ ದೊಡ್ಡ ವೈಮಾನಿಕ ಪ್ರದರ್ಶನ ಎಂಬ ಹೆಗ್ಗಳಿಕೆ ಪಡೆದಿದೆ. 2023ನೇ ಸಾಲಿನ ಪ್ರದರ್ಶನ ಫೆಬ್ರವರಿ 13ರ ಸೋಮವಾರದಿಂದ ಶುಕ್ರವಾರದ ತನಕ ನಡೆಯಲಿದೆ.

ವಿವಿಧ ಯುದ್ಧ ವಿಮಾನಗಳು ಭಾಗಿ; ಬೆಂಗಳೂರು ಏರ್‌ ಶೋನಲ್ಲಿ ಹೆಲಿಕಾಪ್ಟರ್, ಸುಖೋಯ್, ಮಿಗ್ 29, ಮಿರಾಜ್, ಹೆಚ್‌ಎಎಲ್ ನಿರ್ಮಿತ ದೇಶಿಯ ತೇಜಸ್ ಲಘು ಯುದ್ಧ ವಿಮಾನಗಳು ಸಾಹಸಮಯ ಪ್ರದರ್ಶನವನ್ನು ನೀಡಲಿವೆ.

2021ರಲ್ಲಿ ನಡೆದ ಏರ್ ಶೋ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿತ್ತು. ಏರ್ ಶೋ ವೀಕ್ಷಣೆ ಮಾಡಲು ಆನ್‌ಲೈನ್ ಮೂಲಕ ಸಹ ಅವಕಾಶವನ್ನು ಕಲ್ಪಿಸಲಾಗಿತ್ತು. ಪ್ರತಿಯೊಂದು ಹಂತದಲ್ಲಿಯೂ ತಪಾಸಣೆ ಮಾಡಲಾಗುತ್ತಿತ್ತು. ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು.

ಏರ್‌ಶೋಗೆ ಆಗಮಿಸುವ ಜನರು ಮೊದಲು ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಂಡು ನೆಗೆಟಿವ್ ಪ್ರಮಾಣ ಪತ್ರವನ್ನು ಅಪ್‌ಲೋಡ್ ಮಾಡಿದ ಬಳಿಕ ಪಾಸ್ ನೀಡಲಾಗಿತ್ತು. ಕೋವಿಡ್ ಕಠಿಣ ನಿಯಮಗಳ ಕಾರಣ ಕಳೆದ ಬಾರಿಯ ಏರ್‌ ಶೋಗೆ ಜನರ ಭಾವಹಿಸುವಿಕೆ ಸಹ ಕಡಿಮೆ ಇತ್ತು.

ಏರೋ ಇಂಡಿಯಾ 2023ರ ಬಗ್ಗೆ ಮಾಹಿತಿ ನೀಡಲು ಕೇಂದ್ರ ರಕ್ಷಣಾ ಸಚಿವಾಲಯ ವೆಬ್‌ಸೈಟ್‌ ಸಹ ಅನಾವರಣಗೊಳಿಸಿದೆ. ಜನರು https://aeroindia.gov.in/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮಾಹಿತಿ ಪಡೆಯಬಹುದು.

ಸಾಮಾನ್ಯವಾಗಿ ಕೇಂದ್ರ ರಕ್ಷಣಾ ಸಚಿವರು ಏರೋ ಇಂಡಿಯಾ ಪ್ರದರ್ಶನಕ್ಕೆ ಚಾಲನೆ ನೀಡುತ್ತಾರೆ. ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸಹ ಪಾಲ್ಗೊಳ್ಳುತ್ತಾರೆ.

ಬೆಂಗಳೂರು ನಗರದಲ್ಲಿರುವ ಹೆಚ್ಎಎಲ್ ಭಾರತೀಯ ವಾಯುಪಡೆಗೆ ಲಘು ಯುದ್ಧ ವಿಮಾನಗಳನ್ನು ಒದಗಿಸುತ್ತದೆ. ಅಲ್ಲದೇ ವಿಮಾನದ ಬಿಡಿಭಾಗಗಳನ್ನು ಉತ್ಪಾದನೆ ಮಾಡುತ್ತದೆ. ಬೆಂಗಳೂರಿನಲ್ಲಿಯೇ ಏರ್ ಶೋ ನಡೆಯುವುದರಿಂದ ಹೆಚ್‌ಎಎಲ್‌ಗೂ ಸಹಾಯಕವಾಗಲಿದೆ.

English summary
AeroIndia-2023 to be held in Bengaluru from February 13 to 17. Air show will be held at air force station, Yelahanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X