ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ಏರೋ ಇಂಡಿಯಾ ಲಕ್ನೋಗೆ ಶಿಫ್ಟ್ ?

By Mahesh
|
Google Oneindia Kannada News

Recommended Video

ಏರೋ ಇಂಡಿಯಾ 2019 ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ | Oneindia Kannada

ಬೆಂಗಳೂರು, ಆಗಸ್ಟ್ 03: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದ್ದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಇನ್ಮುಂದೆ ಬೆಂಗಳೂರಿನಿಂದ ಲಕ್ನೋಕ್ಕೆ ಶಿಫ್ಟ್ ಆಗುವ ಸಾಧ್ಯತೆ ಹೆಚ್ಚಿದೆ. ಈ ಮುಂಚೆ ಗೋವಾಕ್ಕೆ ವರ್ಗಾವಣೆಯಾಗಲಿದೆ ಎಂಬ ಸುದ್ದಿಯೂ ಹಬ್ಬಿತ್ತು.

1996ರಿಂದ ಆರಂಭಗೊಂಡು ಕಳೆದ 22 ವರ್ಷಗಳಲ್ಲಿ 11 ಬಾರಿ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವು ಎಲ್ಲರ ಗಮನ ಸೆಳೆದು, ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಲೋಹದ ಹಕ್ಕಿಗಳ ಆತ್ಯಾಕರ್ಷಕ ಜಾತ್ರೆ ಬೇರೆ ತಾಣದಲ್ಲಿ ಆಯೋಜನೆ ಮಾಡುವ ಬಗ್ಗೆ ಕಳೆದ ಏರೋ ಇಂಡಿಯಾ ಶೋನಲ್ಲೇ ಸೂಚನೆ ಸಿಕ್ಕಿತ್ತು.

ಏರೋ ಇಂಡಿಯಾ ದೆಸೆಯಿಂದ ಮಾಂಸಪ್ರಿಯರಿಗೆ ಉಪವಾಸ! ಏರೋ ಇಂಡಿಯಾ ದೆಸೆಯಿಂದ ಮಾಂಸಪ್ರಿಯರಿಗೆ ಉಪವಾಸ!

ಕೇಂದ್ರ ಸರ್ಕಾರ ಮತ್ತು ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, 12ನೇ ಆವೃತ್ತಿಯ ಏರೋ ಇಂಡಿಯಾ 2019, ಬೆಂಗಳೂರಿನ ಯಲಹಂಕದ ಬದಲಿಗೆ ಲಕ್ನೋದ ಬಕ್ಷಿಕಾ ತಲಾಬ್ ವಾಯುನೆಲೆಯಲ್ಲಿ ನಡೆಸುವ ಸಾಧ್ಯತೆ ಹೆಚ್ಚಿದೆ.

Aero India show likely to shift from Bengaluru

2 ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಈ ವೈಮಾನಿಕ ಪ್ರದರ್ಶನದಲ್ಲಿ ದೇಶ, ವಿದೇಶಗಳಿಂದ ಭಾರಿ ಗಾತ್ರದ ವಿಮಾನಗಳು ಆಗಮಿಸುತ್ತವೆ. ಐದು ದಿನಗಳ ಕಾಲ ಉಕ್ಕಿನ ಹಕ್ಕಿಗಳ ಕಲರವ ಕೇಳಿಸುತ್ತದೆ.

ದೇಶಿಯ ಸೂರ್ಯಕಿರಣ್ ಯುದ್ಧ ವಿಮಾನಗಳು, ತೇಜಸ್, ಸಾರಂಗ್, ಸ್ವೀಡನ್ ನ ಸ್ಕ್ಯಾಂಡಿನೇವಿಯನ್, ಇಂಗ್ಲೆಂಡಿನ ಯಾಕೋವ್ಲೇವ್ ಹಾಗೂ ಫ್ರಾನ್ಸ್ ನ ರಫೇಲ್ ಯುದ್ಧವಿಮಾನಗಳು ಪ್ರತಿ ಬಾರಿಯ ಪ್ರಮುಖ ಆಕರ್ಷಣೆಯಾಗಿರುತ್ತವೆ.

ಹಾರುತ ದೂರ ದೂರ... ಏರೋ ಇಂಡಿಯಾದ ನೆನಪುಗಳು! ಹಾರುತ ದೂರ ದೂರ... ಏರೋ ಇಂಡಿಯಾದ ನೆನಪುಗಳು!

ದೇಶಿಯ ಸೂರ್ಯಕಿರಣ್ ಯುದ್ಧ ವಿಮಾನಗಳು, ತೇಜಸ್, ಸಾರಂಗ್, ಸ್ವೀಡನ್ ನ ಸ್ಕ್ಯಾಂಡಿನೇವಿಯನ್, ಇಂಗ್ಲೆಂಡಿನ ಯಾಕೋವ್ಲೇವ್ ಹಾಗೂ ಫ್ರಾನ್ಸ್ ನ ರಫೇಲ್ ಯುದ್ಧವಿಮಾನಗಳು ಪ್ರಮುಖ ಆಕರ್ಷಣೆ

ಉಕ್ಕಿನ ಹಕ್ಕಿಗಳ ಹಾರಾಟದಲ್ಲಿ 270 ದೇಶೀಯ, 279 ವಿದೇಶಿ ಸೇರಿ 549 ಕಂಪೆನಿಗಳು ಭಾಗವಹಿಸುತ್ತಿವೆ. 70ಕ್ಕೂ ಹೆಚ್ಚು ವಿಮಾನಗಳು ಮೈನವಿರೇಳಿಸುವ ಪ್ರದರ್ಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
12th edition of the Aero India 2019 is likely to shift to a new venue — Bakshi Ka Talab Air Force Station in Lucknow from Yelahanka Air Force station in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X