ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಏರೋ ಇಂಡಿಯಾಗೆ ತೆರೆ,ಹರಿದು ಬಂತು ಬಂಡವಾಳ

|
Google Oneindia Kannada News

ಬೆಂಗಳೂರು,ಫೆಬ್ರವರಿ 05:ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಇಂದು ತೆರೆ ಬೀಳಲಿದೆ.ಉಕ್ಕಿನ ಹಕ್ಕಿಗಳ ಆರ್ಭಟ ನಿಲ್ಲಲಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೊನೆಯ ದಿನವಾದ ಇಂದು ಮಧ್ಯಾಹ್ನ ಯಲಹಂಕ ವಾಯುನೆಲೆಗೆ ಭೇಟಿ ನೀಡಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ವಿದೇಶಿ ಗಣ್ಯರನ್ನು ಭೇಟಿ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳಿಗೆ ಲಘು ಯುದ್ಧ ವಿಮಾನಗಳನ್ನು ಪೂರೈಸಲು ಭಾರತ ಸಿದ್ಧ:ರಾಜನಾಥ್ ಸಿಂಗ್ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳಿಗೆ ಲಘು ಯುದ್ಧ ವಿಮಾನಗಳನ್ನು ಪೂರೈಸಲು ಭಾರತ ಸಿದ್ಧ:ರಾಜನಾಥ್ ಸಿಂಗ್

ಕಳೆದೆರೆಡು ದಿನಗಳಿಂದ ನಡೆದ ವೈಮಾನಿಕ ಪ್ರದರ್ಶನದಲ್ಲಿ ದೇಶಿ ನಿರ್ಮಿತ ತೇಜಸ್,ಭಾರತೀಯ ವಾಯುಪಡೆಯ ಬತ್ತಳಿಕೆಯಲ್ಲಿರುವ ಸುಖೋಯ್,ರಫೇಲ್ ಯುದ್ಧ ವಿಮಾನಗಳು ಬಾನಿನಲ್ಲಿ ಕಸರತ್ತು ನಡೆಸಿತ್ತು.

Aero India Show 2021: Defence Pavilion Organised On The Last Day

ಈ ಬಾರಿಯ ಏರೋ ಶೋನಲ್ಲಿ ಅಮೆರಿಕದ ಬಿಇಒ ಬಾಂಬರ್ ವಿಮಾನ ಹೊರತುಪಡಿಸಿದರೆ ವಿದೇಶಿ ವಿಮಾನಗಳಾವುವೂ ಆಗಮಿಸದೆ ಇರುವುದು ಕೆಲವರಲ್ಲಿ ನಿರಾಸೆ ಮೂಡಿಸಿತ್ತು.

ವಿದೇಶದಿಂದ ಬಂದಿರುವ ಬೋಯಿಂಗ್,ಏರ್‌ಬಸ್,ಲುಫ್ತಾಂಜಾ,ಲಾಕ್ಹಿನ್‌ಹೆಡ್ ಸೇರಿದಂತೆ ಹಲವು ಕಂಪನಿಗಳು ಭಾರತೀಯ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದು, ಸಾವಿರಾರು ಕೋಟಿ ರೂಗಳ ಬಂಡವಾಳ ಹರಿದುಬಂದಿದೆ.

ಈಗಾಗಲೇ ಎಚ್‌ಎಎಲ್‌ನಲ್ಲಿ ಎಲ್‌ಸಿಎ ತೇಜಸ್ ತಯಾರಿಕೆಗೆ 48 ಸಾವಿರ ಕೋಟಿ ರೂ. ಒಪ್ಪಂದವಾಗಿದ್ದು,ಇದೇ ರೀತಿ ಹಲವು ದೇಶೀಯ ಕಂಪನಿಗಳಿಗೆ ವಿದೇಶಿ ಕಂಪನಿಗಳು ಹೂಡಿಕೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada

English summary
On the last day of the Aero India show in Bengaluru, Defense Corridor has been organised. Here, the Defence Minister, Rajnath Singh arrived to take stock of the weapons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X