• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರೋ ಇಂಡಿಯಾ: ಭಾರತ-ಅಮೆರಿಕ ನಡುವೆ ರಕ್ಷಣಾ ಬಾಂಧವ್ಯ ವೃದ್ಧಿಗೆ ವೇದಿಕೆ

|

ಬೆಂಗಳೂರು ಫೆಬ್ರವರಿ 18: ಏರೋ ಇಂಡಿಯಾ 2019 ರಲ್ಲಿ ಅಮೆರಿಕವು ಮಹತ್ವದ ಪಾತ್ರವಹಿಸಿದೆ ಇದು ಅಮೆರಿಕಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅಮೆರಿಕದ ದೂತಾವಾಸ ಕೇಂದ್ರವು ಹೇಳಿದೆ.

ಉಭಯ ದೇಶಗಳ ನಡುವೆ ವ್ಯೂಹಾತ್ಮಕ ಸಹಭಾಗಿತ್ವ ಮತ್ತು ರಕ್ಷಣಾ ವಲಯದಲ್ಲಿನ ಸಹಕಾರ ಮತ್ತಷ್ಟು ಗಟ್ಟಿಗೊಳ್ಳುವ ಆಶಯವನ್ನು ಅಮೇರಿಕಾ ಹೊಂದಿದ್ದು ಅಮೇರಿಕಾದ ಉನ್ನತ ಮಟ್ಟದ ನಿಯೋಗ, ಪರಿಣಾಮಕಾರಿಯಾದ ಸೇನಾ ವೇದಿಕೆಗಳು ಮತ್ತು ಸಿಬ್ಬಂದಿ ಮತ್ತು ಅಮೇರಿಕಾದ ಉದ್ದಿಮೆಗಳು ಇಲ್ಲಿ ಭಾಗವಹಿಸಿರುವುದು ಭಾರತ ಮತ್ತು ಅಮೇರಿಕಾದ ನಡುವಣ ರಕ್ಷಣಾ ಬಾಂಧವ್ಯ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಎಂದು ಅಮೆರಿಕದ ರಾಯಭಾರಿ ಹೇಳಿದ್ದಾರೆ.

ಏರೋ ಇಂಡಿಯಾ 2019: ಎಚ್‌ಎಎಲ್ ಈಗಲೂ ಮುಂಚೂಣಿಯಲ್ಲಿ

"ಏರೋ ಇಂಡಿಯಾದ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಅತಿದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಅಮೇರಿಕಾವನ್ನು ಬೆಂಬಲಿಸಲು ನಾನು ಇಲ್ಲಿಗೆ ಬಂದಿರುವುದು ಖುಷಿ ತಂದಿದೆ. ಭಾರತವು ರಕ್ಷಣಾ ವಲಯದ ಮಹತ್ವದ ಪಾಲುದಾರ ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಉಭಯದೇಶಗಳೂ ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಿಕೊಳ್ಳಲು ಬದ್ಧವಾಗಿವೆ. ಎರಡೂ ದೇಶಗಳ ಸಂಬಂಧ ಗಟ್ಟಿಗೊಳ್ಳುವಲ್ಲಿ ರಕ್ಷಣಾವಲಯದ ಕೊಳ್ಳುವಿಕೆಯು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಇದು ಎರಡೂ ದೇಶಗಳ ನಡವಣ ಸಮತೂಕದ ವಾಣಿಜ್ಯ ಸಂಬಂಧಕ್ಕೆ ಕೊಡುಗೆ ನೀಡುತ್ತದೆ ಎಂದು ಅಮೆರಿಕದ ಅಭಿಪ್ರಾಯ ಪಟ್ಟಿದೆ.

ಅಮೇರಿಕಾದ ನಿಯೋಗದಲ್ಲಿ ಕೆನ್ನೆತ್‌ ಐ. ಜಸ್ಟರ್, ಭಾರತದಲ್ಲಿನ ಅಮೆರಿಕದ ರಾಯಭಾರಿ, ಅಲನ್‌ ಶೇಫರ್, ಡೆಪ್ಯುಟಿ ಅಂಡ್‌ ಸೆಕೆರಟರಿ ಆಫ್‌ ಡಿಫೆನ್ಸ್‌ ಫಾ ಆಕ್ವಿಸಿಶನ್‌ ಅಂಡ್‌ ಸಸ್ಟೈನ್ಮೆಂಟ್‌, ಲೆಫ್ಟಿನೆಂಟ್‌ ಜನರಲ್‌ ಚಾರ್ಲ್ಸ ಹೂಪರ್, ಡೈರೆಕ್ಟ್‌ ಆಫ್‌ ದಿ ಡಿಫೆನ್ಸ್‌ ಸೆಕ್ಯುರಿಟಿ ಕೋ ಆಪರೇಷನ್‌ ಏಜೆನ್ಸಿ, ಡಾ. ಜೋಸೆಫ್‌ ಫೆಲ್ಟರ್, ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿ ಆಫ್‌ ಡಿಫೆನ್ಸ್, ಮೇಜ್‌ ಜನರಲ್‌ ರಾಬಿನ್‌ ಫೋನ್ಟ್ಸ್‌, ಬ್ರಿಗೇಡಿಯ್‌ ಜನರಲ್‌ ಸೀ ಎಂ. ಫರ್ರೆಲ್, ಡೈರೆಕ್ಟರ್, ಏಫೋರ್ಸ್‌ ಸೆಕ್ಯುರಿಟಿ ಅಸಿಸ್ಟೆನ್ಸ್‌ ಅಂಡ್‌ ಕೋಆಪರೇಷನ್‌ ಡೈರೆಕ್ಟೊರೇಟ್, ಏರ್ಫೋಸ್ ಲೈಫ್‌ ಸೈಕಲ್‌ ಮ್ಯಾನೇಜ್ಮೆಂಟ್‌ ಸೆಂಟರ್, ಡಾ. ವಾಲ್ಟರ್ ಎಫ್. ಜೋನ್ಸ್‌ ನೇವಿ ಇಂಟರ್ನ್ಯಾಷನಲ್‌ ಪ್ರೋಗ್ರಾಮ್ಸ್‌ ಆಫೀಸ್‌ ಎಕ್ಸಿಕ್ಯುಟಿವ್ ಡೈರೆಕ್ಟರ್, ರಾಬರ್ಟ್‌ ಬರ್ಜಸ್‌, ಯು.ಎಸ್, ಕಾನ್ಸಲ್‌ ಜನರಲ್‌ ಇನ್‌ ಚೆನ್ನೈ ಇದ್ದಾರೆ.

ಏರೋ ಇಂಡಿಯಾ ಪ್ರದರ್ಶನಕ್ಕೆ ಸಜ್ಜಾದ ಏರ್‌ಬಸ್, ವಿಶೇಷತೆ ಏನು?

ಅಮೆರಿಕ ೨೮ ಕಂಪನಿಗಳು ಏರೋ ಇಂಡಿಯಾದಲ್ಲಿ ಭಾಗಿಯಾಗಲಿವೆ. ಅವುಗಳಲ್ಲಿ ೧೯ ಯುಎಸ್‌ಎ ಪಾರ್ಟನ್‌ಶಿಪ್‌ ಪಿವಿಲಿಯನ್‌ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಸತತ ೫ನೇ ಬಾರಿ ಕಾಲ್‌ಮನ್‌ ವರ್ಲ್ಡ್‌ವೈಡ್‌ ಯುಎಸ್‌ಎ ಪಿವಿಲಿಯನ್‌ ಅನ್ನು ಆಯೋಜಿಸಿದೆ. ಏರೋ ಇಂಡಿಯಾದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಪಿವಿಲಿಯನ್‌ ಎಕ್ಸಿಬಿಟರ್‌ಗಳಿದ್ದಾರೆ.

ಅಮೇರಿಕಾದ ವಾಣಿಜ್ಯ ವ್ಯವಹಾರಗಳ ಇಲಾಖೆ ಮತ್ತು ಸ್ಟೇಟ್‌ ಡಿಪಾರ್ಟಮೆಂಟ್‌ ಅಧಿಕಾರಿಗಳ ಜತೆ ಸುಮಾರು 100ಕ್ಕೂ ಹೆಚ್ಚುಮಂದಿ ರಕ್ಷಣಾ ಇಲಾಖೆಯ ಸಿಬ್ಬಂದಿ ಏರೋ ಇಂಡಿಯಾ 2019 ಭಾಗವಹಿಸುವ ನಿಯೋಗಕ್ಕೆ ನೆರವು ನೀಡಿದ್ದಾರೆ. ಹವಾಯಿಯ ಪರ್ಲ್‌ಹಾರ್ಬರ್‌- ಹಿಕಮ್‌ ನಲ್ಲಿನ ಜಂಟಿ ನೌಕಾನೆಲೆ 535 ಏರ್‌ಲಿಫ್ಟ್‌ ಸ್ಕ್ವಾಡ್ರನ್‌ಗೆ ಸಿ-17 ಗ್ಲೋಬ್‌ ಮಾಸ್ಟರ್‌ ಈಈಈ ಸೇರ್ಪಡೆಯಾಗಿದೆ. ಜಪಾನಿನ ಮಿಸವಾ 35ನೇ ಫೈಟರ್‌ ವಿಂಗ್‌ ಗೆ ಎಫ್‌-16 ಫೈಟಿಂಗ್ ಫಾಲ್ಕನ್‌ಗಳನ್ನು ಸೇರ್ಪಡೆ ಮಾಡಲಾಗಿದೆ.

ಏರೋ ಇಂಡಿಯಾ ಪ್ರದರ್ಶನಕ್ಕಾಗಿ ಬಂದಿಳಿದ ರಫೇಲ್ ವಿಮಾನಗಳು

ಏರೋ ಇಂಡಿಯಾದ ಉದ್ಘಾಟನಾ ಸಮಾರಂಭದಲ್ಲಿ (ಫೆ. 20) ಗುವಾಮ್‌ನ ಆಂಡರ್ಸನ್‌ ವಾಯುನೆಲೆಯ 23ನೇ ಎಕ್ಸಪೆಡಿಷನರಿ ಬಾಂಬ್‌ಸ್ಕ್ವಾಡ್ರನ್ ನ ಬಿ 52 ಸ್ಟ್ರಾಟೊಫೋರ್ಟೆಸ್‌ ಬಾಂಬರ್‌ಗಳು ಹಾರಾಟ ನಡೆಸಲಿವೆ.

English summary
America says Aero India 2019 is platform for development of India -Ameria defense relationship. America ambassador says that America participating big way in this Aero-India event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X