ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 2021ನೇ ಏರೋ-ಇಂಡಿಯಾಗೆ ಹೇಗಿದೆ ಸಿದ್ಧತೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್.08: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ 2021ನೇ ಸಾಲಿನ ಏರೋ ಇಂಡಿಯಾ ಆಯೋಜನೆ ಮಾಡುವುದು ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಎಲ್ಲ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಏರೋ ಇಂಡಿಯಾ- 2021 ವಾಯು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ವಿದೇಶಿ ರಾಯಭಾರಿಗಳನ್ನೊಳಗೊಂಡ ವಿಶೇಷ ಸಭೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡಾ ಭಾಗವಹಿಸಿದ್ದರು.

ಏರೋ ಇಂಡಿಯಾ ವೆಬ್‌ಸೈಟ್‌ಗೆ ಸಚಿವ ರಾಜನಾಥ್‌ಸಿಂಗ್ ಚಾಲನೆಏರೋ ಇಂಡಿಯಾ ವೆಬ್‌ಸೈಟ್‌ಗೆ ಸಚಿವ ರಾಜನಾಥ್‌ಸಿಂಗ್ ಚಾಲನೆ

ದೇಶದ ಪ್ರಮುಖ ವಾಯು ಪ್ರದರ್ಶನವನ್ನು ಆಯೋಜಿಸುವ ಉದ್ದೇಶದಿಂದ ಸಾಂಕ್ರಾಮಿಕ ಪಿಡುಗು ರಹಿತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರವು ಶಿಸ್ತುಬದ್ಧ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಈಗಾಗಲೇ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಶೇ.90ರಷ್ಟು ಸ್ಥಾನಗಳನ್ನು ಬುಕ್ ಮಾಡಲಾಗಿದ್ದು, ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ನಾಲ್ಕು ದಿನ ನಡೆಯಲಿರುವ ಏರೋ ಇಂಡಿಯಾ

ನಾಲ್ಕು ದಿನ ನಡೆಯಲಿರುವ ಏರೋ ಇಂಡಿಯಾ

ಬೆಂಗಳೂರಿನ ಹೊರಭಾಗದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಏರೇ ಇಂಡಿಯಾ ವಾಯು ಪ್ರದರ್ಶನ ನಡೆಯಲಿದೆ. ಫಬ್ರವರಿ 4 ರಿಂದ ಫಬ್ರವರಿ 7ನೇ ತಾರೀಖಿನವರೆಗೂ ನಾಲ್ಕು ದಿನಗಳ ಕಾಲ ಈ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ. ಕಳೆದ 12 ಆವೃತ್ತಿಗಳ ವಾಯು ಪ್ರದರ್ಶನವನ್ನು ಆಯೋಜಿಸಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಏರೋ ಇಂಡಿಯಾಗೆ ಶೇ. 90ರಷ್ಟು ಬುಕ್ಕಿಂಗ್ ಪೂರ್ಣ

ಏರೋ ಇಂಡಿಯಾಗೆ ಶೇ. 90ರಷ್ಟು ಬುಕ್ಕಿಂಗ್ ಪೂರ್ಣ

ಏರೋ ಇಂಡಿಯಾ 2021 ವಾಯ ಪ್ರದರ್ಶನಕ್ಕೆ ಸ್ಥಳ ಕಾಯ್ದಿರಿಸುವುದಕ್ಕಾಗಿ ವೆಬ್‌ಸೈಟ್‌ಗೆ ಚಾಲನೆ ದೊರೆತಿದೆ. ವೆಬ್​ಸೈಟ್​ನಲ್ಲಿ ರಕ್ಷಣಾ ಸಚಿವಾಲಯದ ಇತ್ತೀಚಿನ ನೀತಿ, ನಿಯಮಗಳು, ಹೊಸ ಯೋಜನೆಗಳ ವಿವರಗಳು ಲಭ್ಯ ಇವೆ. ವಾಣಿಜ್ಯ ಮತ್ತು ಇತರೆ ಉದ್ದೇಶದ ವಿಸಿಟರ್ಸ್​ ಪ್ರದರ್ಶನ ಟಿಕೆಟ್​ಗಳನ್ನು ಆನ್​ಲೈನ್ ಮೂಲಕವೇ ಖರೀದಿಸಬಹುದಾಗಿದೆ. ನೂತನ ವೆಬ್ ಸೈಟ್ ವೊಂದನ್ನು ಆರಂಭಿಸುತ್ತಿದ್ದಂತೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. 90ರಷ್ಟು ಸ್ಥಳಗಳು ಈಗಾಗಲೇ ಬುಕ್ಕಿಂಗ್ ಮಾಡುವುದಕ್ಕೆ ಜನರು ಮುಗಿ ಬೀಳುತ್ತಿದ್ದಾರೆ ಎಂದು ಸಿಎಂಓ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಏರೋ ಇಂಡಿಯಾ 2021: ಆಯೋಜನೆಗೆ ಪೂರ್ವಭಾವಿ ಸಭೆಏರೋ ಇಂಡಿಯಾ 2021: ಆಯೋಜನೆಗೆ ಪೂರ್ವಭಾವಿ ಸಭೆ

ರಾಜ್ಯ ಸರ್ಕಾರಕ್ಕೆ ಇದೊಂದು ದೊಡ್ಡ ಸವಾಲು

ರಾಜ್ಯ ಸರ್ಕಾರಕ್ಕೆ ಇದೊಂದು ದೊಡ್ಡ ಸವಾಲು

ಇಡೀ ಜಗತ್ತು ಕೊರೊನಾವೈರಸ್ ಎಂಬ ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ತತ್ತರಿಸಿ ಹೋಗುತ್ತಿದೆ. ಇಂಥ ಸಂದರ್ಭದಲ್ಲಿ ಏರೋ ಇಂಡಿಯಾ ವಾಯು ಪ್ರದರ್ಶನದ ಆತಿಥ್ಯ ವಹಿಸುವುದು ಕರ್ನಾಟಕ ಸರ್ಕಾರ ಮತ್ತು ರಕ್ಷಣಾ ಸಚಿವಾಲಯಕ್ಕೆ ನಿಜಕ್ಕೂ ಒಂದು ದೊಡ್ಡ ಸವಾಲಾಗಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ತಮ್ಮ ಸರ್ಕಾರವು ವಿವಿಧ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ. ಏರೋ ಇಂಡಿಯಾ -2021 ಗಾಗಿ "ಸಾಂಕ್ರಾಮಿಕ ಮುಕ್ತ ವಾತಾವರಣ"ವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಸ್ತುಬದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಕೊರೊನಾವೈರಸ್ ನಿಯಂತ್ರಿಸಲು ಮಾನದಂಡ

ಕೊರೊನಾವೈರಸ್ ನಿಯಂತ್ರಿಸಲು ಮಾನದಂಡ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರೋ ಇಂಡಿಯಾ 2021ರಲ್ಲಿ ಭಾಗವಹಿಸುವ ಅಂತರರಾಷ್ಟ್ರೀಯ ಪ್ರತಿನಿಧಿಗಳು, ಗಣ್ಯರು ಮತ್ತು ಸಾರ್ವಜನಿಕರ ಸುರಕ್ಷತೆಗೆ ಪ್ರಮಾಣಿಕ ಕಾರ್ಯವಿಧಾನ ಪ್ರಕ್ರಿಯೆ(SOP)ಯನ್ನು ರೂಪಿಸಲಾಗಿದೆ. ಮುಖಕ್ಕೆ ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ರೀನಿಂಗ್ ನಡೆಸುವುದು. ಸ್ಯಾನಿಟೈಸೇಷನ್ ಮಾಡುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

Recommended Video

Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02
ಭಾರತೀಯ ವಿಮಾನಯಾನದಲ್ಲಿ ಕರ್ನಾಟಕ ಕೊಡುಗೆ

ಭಾರತೀಯ ವಿಮಾನಯಾನದಲ್ಲಿ ಕರ್ನಾಟಕ ಕೊಡುಗೆ

ದೇಶದ ಏರೋ-ಸ್ಪೇಸ್ ಮತ್ತು ರಕ್ಷಣಾ ನಕ್ಷೆಯಲ್ಲಿ ಕರ್ನಾಟಕಕ್ಕೆ ಪ್ರಮುಖ ಸ್ಥಾನವಿದೆ. ಭಾರತದ ವಿಮಾನಯಾನ ಮತ್ತು ಬಾಹ್ಯಾಕಾಶ ನೌಕೆ ಉದ್ಯಮದಲ್ಲಿ ಸುಮಾರು 25% ರಷ್ಟು ಪೂರೈಸುವ ಸಾಮರ್ಥ್ಯವನ್ನು ರಾಜ್ಯ ಹೊಂದಿದೆ. ದೇಶದ ಏರೋಸ್ಪೇಸ್ ಸಂಬಂಧಿತ ರಫ್ತುಗಳಲ್ಲಿ ರಾಜ್ಯವು ಸುಮಾರು 65% ನಷ್ಟು ಕೊಡುಗೆ ನೀಡಿದೆ. ಜೊತೆಗೆ ರಕ್ಷಣಾ ಸೇವೆಗಳಿಗಾಗಿ ಹೆಲಿಕಾಪ್ಟರ್ ಮತ್ತು ವಿಮಾನ ತಯಾರಿಕೆ 67% ರಷ್ಟಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

English summary
Aero India 2021: Will Ensure Pandemic Free Environment For Holding Aero India Exhibition: CM Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X