ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲೇ ಮುಂದಿನ ಏರ್‌ ಶೋ ನಡೆಸಲು ರಕ್ಷಣಾ ಇಲಾಖೆ ನಿರ್ಧಾರ

|
Google Oneindia Kannada News

ಬೆಂಗಳೂರು, ಏಪ್ರಿಲ್ 30:ಬೆಂಗಳೂರಲ್ಲೇ ಮುಂದಿನ ಏರ್‌ಶೋ ನಡೆಸಲು ರಕ್ಷಣಾ ಇಲಾಖೆ ನಿರ್ಧರಿಸಿದೆ.

ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಳ್ಳುವ ಹಾಗೂ ದೇಶ-ವಿದೇಶಗಳ ಗಮನಸೆಳೆಯುವ ಏರ್‌ಶೋ 2021ರಲ್ಲಿ ನಡೆಯಲಿದ್ದು ಬೆಂಗಳೂರಿನಲ್ಲೇ ನಡೆಸಲು ರಕ್ಷಣಾ ಇಲಾಖೆ ಸನ್ನದ್ಧವಾಗಿದೆ.

ಇದು ಬೆಂಗಳೂರಲ್ಲಿ ನಡೆಯುತ್ತಿರುವ ಕೊನೆಯ ಏರ್‌ ಶೋ? ಇದು ಬೆಂಗಳೂರಲ್ಲಿ ನಡೆಯುತ್ತಿರುವ ಕೊನೆಯ ಏರ್‌ ಶೋ?

ಕಳೆದ ವರ್ಷ ಲಕ್ನೋಗೆ ಏರ್‌ಶೋ ಸ್ಥಳಾಂತರಿಸುವ ಪ್ರಯತ್ನ ನಡೆದಿತ್ತು. ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಅಂತಿಮ ತೀರ್ಮಾನದ ಮೇಲೆ ಕೊರೊನಾ ಪರಿಣಾಮ ಬೀರುವ ಸಾಧ್ಯತೆ ಇದೆ.

Aero India 2021 Will Be In Bengaluru From Feb 3-7

ಕೊರೊನಾ ಕಾರಣದಿಂದ ಒಲಿಂಪಿಕ್ಸ್ ವಿಶ್ವ ಕಪ್ ಪಂದ್ಯಗಳನ್ನೇ ಮುಂದೂಡಲಾಗಿದೆ. ಹೀಗಾಗಿ ಕೊರೊನಾ ಪರಿಸ್ಥಿತಿ ನೋಡಿಕೊಂಡು ಮತ್ತೊಮ್ಮೆ ದಿನಾಂಕಗಳನ್ನು ಪರಿಶೀಲಿಸಲಾಗುತ್ತದೆ.

ಫೆ.3ರಿಂದ 7ರವರೆಗೆ ಯಲಹಂಕ ವಾಯನೆಲೆಯಲ್ಲಿ 13ನೇ ಆವೃತ್ತಿಯ ಏರ್‌ ಶೋ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಅಧೀನದಲ್ಲಿರುವ ರಕ್ಷಣಾ ಉತ್ಪಾದನಾ ಇಲಾಖೆ ಬುಧವಾರ ಏರೋ ಇಂಡಿಯಾ ವೆಬ್‌ಸೈಟ್‌ನಲ್ಲಿ ಒಂದು ಸಾಲಿನ ಪ್ರಕಟಣೆ ಹೊರಡಿಸಿದೆ.

ಉತ್ತರ ಪ್ರದೇಶದ ಲಕ್ನೋಗೆ ಏರ್ ಶೋ ಸ್ಥಳಾಂತರ ಮಾಡುವಂತೆ ಯೋಗಿ ಆದಿತ್ಯನಾಥ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಭಕ್ಷಿತಾ ತಲಾಬ್ ವಾಯುನೆಲೆಯಲ್ಲಿ ಏರ್ ಶೋ ನಡೆಸುವಂತೆ ಮನವಿಯಲ್ಲಿ ಅವರು ತಿಳಿಸಿದ್ದರು.

English summary
The Department of Defence Production on Wednesday evening announced that the 13th edition of Aero India, the biennial aviation exhibition and air show, will be held at the Air Force Station, Yelahanka, from February 3 to 7. However, no other details were divulged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X