ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ 2021: ಉಚಿತವಾಗಿ ವೀಕ್ಷಿಸಲು ನೋಂದಣಿ ಹೇಗೆ?

|
Google Oneindia Kannada News

ಬೆಂಗಳೂರು,ಜನವರಿ 29: 13ನೇ ಆವೃತ್ತಿಯ ಏರೋ ಇಂಡಿಯಾ 2021 ಶೋವನ್ನು ನೀವು ಉಚಿತವಾಗಿ ವೀಕ್ಷಿಸಬಹುದಾಗಿದೆ. ಫೆಬ್ರವರಿ 3 ರಿಂದ 5ರವರೆಗೆ ಏರೋ ಶೋ ನಡೆಯಲಿದೆ.

ಮನವಿ ಮೇರೆಗೆ ಈ ಹಿಂದೆ ಇದ್ದ 1 ಸಾವಿರ ರೂ ವೀಕ್ಷಣಾ ಶುಲ್ಕವನ್ನು ರಕ್ಷಣಾ ಸಚಿವಾಲಯ ತೆಗೆದುಹಾಕಿದೆ. ಹಾಗಾದರೆ ನೀವು ಉಚಿತವಾಗಿ ಏರೋ ಇಂಡಿಯಾ ಶೋ ವೀಕ್ಷಿಸಲು ಹೇಗೆ, ಎಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಜನರು ಪೋರ್ಟಲ್‌ನಿಂದ ಹೆಸರು ನೋಂದಾಯಿಸಿದ ಬಳಿಕ ಆನ್‌ಲೈನ್‌ನಲ್ಲಿ ವಿವಿಧ ವರ್ಚ್ಯುವಲ್ ಪ್ರದರ್ಶನಗಳು, ಉದ್ಘಾಟನೆ ಮತ್ತು ಪ್ರದರ್ಶನದ ಇತರೆ ಅಂಶಗಳನ್ನು ವೀಕ್ಷಿಸಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Aero India 2021: Here Is How To Register And Watch The Show For Free In Kannada

ಪ್ರದರ್ಶಕರು, ಕಂಪನಿಗಳು ಕೂಡ ದೂರದಿಂದಲೇ ವೀಕ್ಷಿಸಬಹುದು, ಆದರೂ ಕೂಡ ಪ್ರದರ್ಶಕರು ಸಂಘಟಕರಿಗೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಎಂಎಸ್‌ಎಂಇಗಳಿಗೆ 20 ಸಾವಿರ ರೂ. ಮತ್ತು ಇತರರಿಗೆ 40 ಸಾವಿರ ರೂ. ಶುಲ್ಕವಿರುತ್ತದೆ.

ಭಾಗವಹಿಸುವವರಿಗೆ ಸಾಕಷ್ಟು ಆಯ್ಕೆಗಳಿವೆ, ಕಂಪನಿಗಳು ಬ್ಯಾನರ್ ಗಳು ವರ್ಚುವಲ್ ಪಾಪ್‌ಅಪ್‌ಗಳು ಮತ್ತು ವಿಡಿಯೋಗಳು, ಸಂಸ್ಥೆಗಳು ನೀಡುವ ಉತ್ಪನ್ನಗಳು ಮತ್ತು ಸೇವೆಗಳು, ಕರಪತ್ರ, ಚಿತ್ರಗಳು ಇತ್ಯಾದಿಗಳ ಮೂಲಕ ಸಾಮರ್ಥ್ಯಗಳನ್ನು ಪ್ರದರ್ಶಿಸಬಹುದಾಗಿದೆ.

ಪ್ರದರ್ಶಕರು ವಿಡಿಯೋ ಚಾಟ್, ಎಸ್‌ಎಂಎಸ್ ಮೂಲಕ ಅಥವಾ ಇ-ಮೇಲ್ ಮೂಲಕ ಸಂದರ್ಶಕರೊಂದಿಗೆ ಸಂವಹನ ನಡೆಸಬಹುದಾಗಿದೆ.

28ರವರೆಗೆ 171 ಪ್ರದರ್ಶಕರಾಗಿದ್ದಾರೆ. ಜನವರಿ 22ಕ್ಕೆ 146 ಪ್ರದರ್ಶಕರಿದ್ದರು.ಸ್ಥಳದಲ್ಲಿ 15 ಸಾವಿರ ವೀಕ್ಷಕರಿಗೆ ಮಾತ್ರ ಅವಕಾಶವಿದೆ.
ಲಾಗ್‌ಇನ್ ಆಗಿ ಶೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ https://aeroindia.gov.in

English summary
With several requests, the Ministry of Defence (MoD) has done away with the Rs 1,000 fee the public needed to pay to virtually watch the 13th edition of Aero India that is scheduled between February 3 and 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X