ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

13ನೇ ಆವತ್ತಿ ಏರೋ ಇಂಡಿಯಾ ಪ್ರದರ್ಶನದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್

|
Google Oneindia Kannada News

ಬೆಂಗಳೂರು, ಫೆಬ್ರವರಿ.03: ಭಾರತ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ಈ ವಲಯಗಳಲ್ಲಿ ಸಹಯೋಗಕ್ಕಾಗಿ ಏರೋ ಇಂಡಿಯಾ ಪ್ರದರ್ಶನವು ಒಂದು ಉತ್ತಮ ವೇದಿಕೆ ಆಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Recommended Video

#AeroIndia2021: 13ನೇ ಆವೃತ್ತಿಯ ಏರ್ ಶೋಗೆ ಚಾಲನೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ | Oneindia Kannada

ಬೆಂಗಳೂರು ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿಗೆ ಚಾಲನೆ ದೊರೆತಿದೆ. ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.

ಏರೋ ಇಂಡಿಯಾ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ಏರೋ ಇಂಡಿಯಾ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಚಾಲನೆ

ಕೇಂದ್ರ ಸರ್ಕಾರವು ಏರೋ ಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಸಾಕಷ್ಟು ಸುಧಾರಣೆ ತಂದಿದೆ. ಆತ್ಮನಿರ್ಭರ್ ಭಾರತದ ಅನ್ವೇಷಣೆಗಾಗಿ ಭವಿಷ್ಯದಲ್ಲಿ ಈ ವಲಯಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ ಎಂದು ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

Aero India 2021 Begins; PM Narendra Modi Says India Offers Unlimited Potential In Defence, Aerospace


ಭಾರತ-ಅಮೆರಿಕಾ ಸಹಭಾಗಿತ್ವ:

ಬಾನಂಗಳದಲ್ಲಿ ರಾಷ್ಟ್ರ ಧ್ವಜ, ಭಾರತೀಯ ವಾಯುಪಡೆ ಧ್ವಜ ಹಾಗೂ ಏರೋ ಇಂಡಿಯಾ 2021ರ ಬಾವುಟವನ್ನು ಹೊತ್ತ ಎಂಐ-17 ಹೆಲಿಕಾಪ್ಟರ್ ಗಳು ಹಾರಾಡುವ ಮೂಲಕ ಐತಿಹಾಸಿಕ ವೈಮಾನಿಕ ಪ್ರದರ್ಶನಕ್ಕೆ ನಾಂದಿ ಹಾಡಿದವು. ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕದಲ್ಲಿ ಏರೋ ಇಂಡಿಯಾ 2021ರ ಪ್ರದರ್ಶನವನ್ನು ಫೆಬ್ರವರಿ. 3 ರಿಂದ 5 ರವರೆಗೆ ನಿಗದಿಗೊಳಿಸಲಾಗಿದೆ. ಈ ಬಾರಿ ಏರೋ ಇಂಡಿಯಾ ಪ್ರದರ್ಶನವು ಭಾರತ ಮತ್ತು ಅಮೆರಿಕಾದ ನಡುವಿನ ಕಾರ್ಯತಂತ್ರ ಹಾಗೂ ಎರಡು ರಾಷ್ಟ್ರಗಳ ನಡುವಿನ ಸಹಭಾಗಿತ್ವದ ಸಂಕೇತ ಎನ್ನಲಾಗಿದೆ.

ಏರೋ ಇಂಡಿಯಾ ಪ್ರದರ್ಶನ ಆಕರ್ಷಣೆ:

ಏರೋ ಇಂಡಿಯಾ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ವಾಯುಪಡೆಯ ಸೂರ್ಯಕಿರಣ ಹಾಗೂ ಸಾರಂಗ್ ತಂಡಗಳ ಜಂಟಿ ಪ್ರದರ್ಶನ ನೀಡಲಿವೆ. ಇದರ ಜೊತೆಗೆ ಅಮೆರಿಕಾದ ಬಿ-1ಬಿ ಲ್ಯಾನ್ಸರ್ ಹೆವಿ ಬಾಂಬರ್ ನೀಡಲಿರುವ 'ಫ್ಲೈ ಬೈ' ಪ್ರದರ್ಶನವು ಪ್ರಮುಖ ಆಕರ್ಷಣೆ ಆಗಿದೆ.

English summary
Ahead Of The Inauguration Of Aero India, Prime Minister Narendra Modi Said That The Event Will Add Impetus To The Cuntry's Quest To become Self-Reliant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X