ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ-2021ರಲ್ಲಿ ಭಾರತ ರಕ್ಷಣಾ ಪಾಲುದಾರನೇ ಅಮೆರಿಕಾ

|
Google Oneindia Kannada News

ಬೆಂಗಳೂರು, ಜನವರಿ.29: ಕರ್ನಾಟಕದಲ್ಲಿ ಈ ಬಾರಿ ನಡೆಯಲಿರುವ 2021ನೇ ಏರೋ ಇಂಡಿಯಾ ಪ್ರದರ್ಶನವು ಭಾರತ ಮತ್ತು ಅಮೆರಿಕಾದ ನಡುವಿನ ಕಾರ್ಯತಂತ್ರ ಹಾಗೂ ಎರಡು ರಾಷ್ಟ್ರಗಳ ನಡುವಿನ ಸಹಭಾಗಿತ್ವದ ಸಂಕೇತವಾಗಿರಲಿದೆ.

Recommended Video

ಏರೋ ಇಂಡಿಯಾ 2021 ಯಲಹಂಕದಲ್ಲಿ ನಡೆಯಲಿದೆ | Oneindia Kannada

ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕದಲ್ಲಿ ಏರೋ ಇಂಡಿಯಾ 2021ರ ಪ್ರದರ್ಶನವನ್ನು ಫೆಬ್ರವರಿ. 3 ರಿಂದ 5 ರವರೆಗೆ ನಿಗದಿಗೊಳಿಸಲಾಗಿದೆ. ಈ ಬಾರಿಯ ಏರೋ ಇಂಡಿಯಾದಲ್ಲಿ ಡಾನ್ ಹೆಫ್ಲನ್ - ಅಮೆರಿಕದ ಚಾರ್ಜೆ ಡೆ ಅಫೇರ್ಸ್ ಅವರ ನೇತೃತ್ವದಲ್ಲಿ ಅಮೆರಿಕನ್ ಅಧಿಕಾರಿಗಳು, ರಕ್ಷಣಾ ಉದ್ಯಮದ ಪ್ರತಿನಿಧಿಗಳು ಒಳಗೊಂಡ ಉನ್ನತ ಮಟ್ಟದ ನಿಯೋಗವು ಭಾಗವಹಿಸಲಿದೆ.

ಏರೋ ಇಂಡಿಯಾ 2021: ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧತೆಏರೋ ಇಂಡಿಯಾ 2021: ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧತೆ

ಏರೋ ಇಂಡಿಯಾ 2021ರಲ್ಲಿ ಅಮೆರಿಕದ ಭಾಗವಹಿಸುವಿಕೆಯಿಂದ ಆ ದೇಶದ ಉದ್ಯಮಗಳು ಹಾಗೂ ರಕ್ಷಣಾ ಸೇವೆಗಳಿಗೆ ಭಾರತದೊಂದಿಗೆ ಹೆಚ್ಚಿನ 'ಮಿಲಿಟರಿಯಿಂದ-ಮಿಲಿಟರಿಗೆ' ರಕ್ಷಣಾ ಸಂಬಂಧ ಹೊಂದಲು ಸಾಧ್ಯವಾಗುತ್ತದೆ. ಭಾರತ ಮತ್ತು ಅಮೆರಿಕಾದ ಎರಡೂ ಸೇನೆಗಳು ಇಂಡೋ ಪೆಸಿಫಿಕ್ ನಲ್ಲಿ ನಿಯಮಾಧಾರವಾದ ಅಂತರಾಷ್ಟ್ರೀಯ ವ್ಯವಸ್ಥೆ ಮುಂದುವರೆಸಲಿವೆ.

ನಿಯೋಗದ ಮುಂದಾಳತ್ವ ವಹಿಸಿದ್ದಕ್ಕೆ ಡಾನ್ ಹೆಪ್ಲಿನ್ ಸಂತಸ

ನಿಯೋಗದ ಮುಂದಾಳತ್ವ ವಹಿಸಿದ್ದಕ್ಕೆ ಡಾನ್ ಹೆಪ್ಲಿನ್ ಸಂತಸ

"ಏರೋ ಇಂಡಿಯಾ 2021 ನಮ್ಮ ದೇಶಗಳ ನಡುವಿನ ಅತ್ಯಂತ ಅಪ್ತ ದ್ವಿಪಕ್ಷೀಯ ರಕ್ಷಣಾ ಸಂಬಂಧದ ಮುಂದುವರಿಕೆಯ ಪ್ರತೀಕವಾಗಿದ್ದು ಮುಕ್ತ ಹಾಗೂ ಸ್ವತಂತ್ರ ಇಂಡೊ ಪೆಸಿಫಿಕ್ ಪ್ರದೇಶದ ಬಗ್ಗೆ ಇರುವ ದೂರದೃಷ್ಟಿಯ ಭಾಗವಾಗಿದೆ. ನಮ್ಮ ಪ್ರಮುಖ ರಕ್ಷಣಾ ಸಹಭಾಗಿಯಾಗಿರುವ ಭಾರತದೊಂದಿಗಿನ ಅಮೆರಿಕಾದ ಸಂಬಂಧ ಇದೇ ರೀತಿ ಉತ್ತಮವಾಗಿ ಮುಂದುವರಿಯಬೇಕಿದೆ. ಈ ಹಿನ್ನೆಲೆ ಅಮೆರಿಕಾ ನಿಯೋಗದ ಮುಂದಾಳತ್ವ ವಹಿಸಿಕೊಂಡಿರುವುದು ಬಹಳ ಸಂತೋಷವಾಗುತ್ತಿದೆ," ಎಂದು ಹೆಫ್ಲಿನ್ ಹೇಳಿದ್ದಾರೆ.

ಅಮೆರಿಕಾ ಸರ್ಕಾರಿ ನಿಯೋಗದ ವಿವರ ಹೀಗಿದೆ

ಅಮೆರಿಕಾ ಸರ್ಕಾರಿ ನಿಯೋಗದ ವಿವರ ಹೀಗಿದೆ

- ಡಾನ್ ಹೆಫ್ಲಿನ್ ಛಾರ್ಜೆ ಡಿ ಆಫೇರ್ಸ್, ಏ ಐ

- ಮಿಸ್. ಕೆಲ್ಲಿ ಎಲ್, ಸೇಯ್ಬಾಲ್ಟ್ ಏರ್ ಫೋರ್ಸ್, ಉಪ ಅಧೀನಾಧಿಕಾರಿಗಳು, ಅಂತರಾಷ್ಟ್ರೀಯ ವ್ಯವಹಾರ

- ಲೆಫ್ಟಿನೆಂಟ್ ಜನರಲ್ ಡೇವಿಡ್ ಏ ಕ್ರಮ್, 11ನೆ ವಾಯುಸೇನಾ ಕಮಾಂಡರ್

- ಮೇಜರ್ ಜನರಲ್ ಮಾರ್ಕ್ ಈ ವೆದರಿಂಗ್ಟನ್, 8ನೇ ವಾಯುಸೇನಾ ಕಮಾಂಡರ್

- ಬ್ರಿಗೇಡಿಯರ್ ಜನರಲ್ ಬ್ರಯನ್ ಬ್ರಕ್ಬಾರ್, ನಿರ್ದೇಶಕರು - ವಾಯುಸೇನಾ ರಕ್ಷಣಾ ಸಹಕಾರ ಮತ್ತು ಸಹಯೋಗ ನಿರ್ದೇಶನಾಲಯ

- ಜುಡಿತ್ ರವಿನ್, ಕೌನ್ಸಲ್ ಜನರಲ್, ಅಮೆರಿಕ ದೂತಾವಾಸ, ಚೆನ್ನೈ

- ಐಲೀನ್ ನಂದಿ, ವಾಣಿಜ್ಯ ವ್ಯವಹಾರ ಆಪ್ತ ಸಚಿವರು. ಅಮೆರಿಕ ವಾಣಿಜ್ಯ ಸೇವೆ,

- ರೇರ್ ಅಡ್ಮಿರಲ್ ಐಲೀನ್ ಲೌಬಾಷರ್, ಡಿಫೆನ್ಸ್ ಅಟಾಚೆ, ಅಮೆರಿಕಾ ದೂತಾವಾಸ, ನವದೆಹಲಿ

ಅಮೆರಿಕಾದ ರಕ್ಷಣಾ ಕಂಪನಿಗಳು ಏರೋ ಇಂಡಿಯಾದಲ್ಲಿ ಭಾಗಿ

ಅಮೆರಿಕಾದ ರಕ್ಷಣಾ ಕಂಪನಿಗಳು ಏರೋ ಇಂಡಿಯಾದಲ್ಲಿ ಭಾಗಿ

ಅಮೆರಿಕದ ಪ್ರಮುಖ ರಕ್ಷಣಾ ಕಂಪನಿಗಳನ್ನು ಮೊದಲುಗೊಂಡು ಏರೋ ಇಂಡಿಯಾ 2021 ನಲ್ಲಿ ಏರೋಸ್ಪೇಸ್ ಕ್ವಾಲಿಟಿ ರೀಸರ್ಚ್ ಅಂಡ್ ಡೆವಲಪ್ಮೆಂಟ್ ಎಲ್ಎಲ್ ಸಿ ಏರ್ ಬಾರ್ನ ಇಂಕ್, ಬೋಯಿಂಗ್, ಎಇ ಈ ಎಚ್ ಕಾರ್ಪೋರೇಷನ್, ಜಿ ಈ ಏವಿಯೇಷನ್, ಜನರಲ್ ಆಟೊಮಿಕ್ಸ್, ಹೈ ಟೆಕ್ ಇಂಪೋರ್ಟ್ ಎಕ್ಸ್ಪೋರ್ಟ್ ಕಾರ್ಪೋರೇಷನ್, ಎಲ್ ಥ್ರೀ ಹ್ಯಾರಿಸ್, ಲಾವೆರ್ಸಬ್ ಇಂಡಿಯಾ, ಲಾಕ್ ಹೀಡ್ ಮಾರ್ಟಿನ್, ರೇದಿಯಾನ್, ಹಾಗೂ ತ್ರಾಕಾ ಸಿಸ್ಟಂಸ್ ಭಾಗವಹಿಸುತ್ತಿವೆ.

 2021ನೇ ಏರೋ ಇಂಡಿಯಾದ ಪ್ರಮುಖ ಆಕರ್ಷಣೆ

2021ನೇ ಏರೋ ಇಂಡಿಯಾದ ಪ್ರಮುಖ ಆಕರ್ಷಣೆ

ಈ ಪ್ರದರ್ಶನದ ಅತಿ ಮುಖ್ಯ ಆಕರ್ಷಣೆ ಎಂದರೆ ಬಿ-1ಬಿ ಲ್ಯಾನ್ಸರ್ ಹೆವಿ ಬಾಂಬರ್ ನೀಡಲಿರುವ 'ಫ್ಲೈ ಬೈ' ಪ್ರದರ್ಶನ. 28ನೇ ಬಾಂಬ್ ವಿಂಗ್ ಗೆ ಸೇರಿದ ಎಲ್ಸ್ ವರ್ತ್ ವಾಯು ನೆಲೆ ಬೇಸ್, ದಕ್ಷಿಣ ಡಕೋಟಾದಲ್ಲಿರುವ ಲ್ಯಾನ್ಸರ್ ಹೆವಿ ಬಾಂಬರ್ ಆಗಿದ್ದು, ಅಮೆರಿಕದ ನೆಲೆಗಳಿಂದ ಉದ್ದೇಶಿತ ಮಿಶನ್ ಗಳನ್ನು ಹಾಗೂ ಫಾರ್ವರ್ಡ್ ಡಿಪ್ಲಾಯ್ ಆಗಿರುವ ಸ್ಥಳಗಳಿಂದ ಮಿಷನ್ ಗಳನ್ನು ಪೂರೈಸಿದೆ. ಅಮೆರಿಕದಲ್ಲೇ ಅತ್ಯಂತ ಹೆಚ್ಚು ಸಾಂಪ್ರದಾಯಿಕ ಪೇ ಲೋಡ್ ಹೊತ್ತು ನಿರ್ದೇಶಿತ ಮತ್ತು ಅನಿರ್ದೇಶಿತ ವೆಪನ್ ಗಳನ್ನು ಸಾಗಿಸುತ್ತದೆ. ಇದು ಅಮೆರಿಕದ ಲಾಂಗ್-ರೇಂಜ್ ಬಾಂಬರ್ ಫೋರ್ಸ್ ಗೆ ಇರುವ ಬೆನ್ನೆಲುಬು ಎಂದೇ ಹೇಳಲಾಗುತ್ತದೆ.

ಘಟಂ ಕಚೇರಿ ಮೂಲಕ ಸಂಗೀತ ರಸದೌತಣ

ಘಟಂ ಕಚೇರಿ ಮೂಲಕ ಸಂಗೀತ ರಸದೌತಣ

ದ್ವಿ ಪಕ್ಷೀಯ ಸಂಬಂಧದ ಗುರುತಾಗಿ ಭಾರತದ ಮೊದಲ ಹೈಬ್ರಿಡ್ ರಕ್ಷಣಾ ಪ್ರದರ್ಶನಕ್ಕೆ ಇಂಬು ಕೊಡುವ ದೃಷ್ಟಿಯಲ್ಲಿ ಹವಾಯಿಯಲ್ಲಿನ ಅಮೆರಿಕ ವಾಯು ಪಡೆಯ ಸಂಗೀತ ತಂಡವು ಭಾರತೀಯ ತಾಳವಾದ್ಯವಾದ ಘಟಂ ಕಛೇರಿಯನ್ನು ಏರ್ಪಡಿಸಿದೆ. ಕಲಾವಿದರಾದ ಗಿರಿಧರ ಉಡುಪ ಅವರು ಈ ಸಂಗೀತ ಪ್ರದರ್ಶನವನ್ನು ನೀಡಲಿದ್ದಾರೆ. ಈ ಸಂಗೀತದ ರಸದೌತಣವನ್ನು ಅಮೆರಿಕ ದೂತಾವಾಸದ ಫೇಸ್ ಬುಕ್ ಮತ್ತು ಇನ್ಸ್ಟಾ ಗ್ರಾಂ ಪುಟಗಳಲ್ಲಿ ಮುಂಬರುವ ದಿನಗಳಲ್ಲಿ ಬಿತ್ತರಿಸಲಾಗುತ್ತದೆ.

ಕೊವಿಡ್-19 ಮಾರ್ಗಸೂಚಿ ಪಾಲಿಸುವಂತೆ ಸೂಚನೆ

ಕೊವಿಡ್-19 ಮಾರ್ಗಸೂಚಿ ಪಾಲಿಸುವಂತೆ ಸೂಚನೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿಯ ನಡುವೆ ಏರೋ ಇಂಡಿಯಾ 2021ರ ಕಾರ್ಯಕ್ರಮವನ್ನು ಫೆಬ್ರವರಿ. 3 ರಿಂದ 5 ರವರೆಗೆ ನಿಗದಿಗೊಳಿಸಲಾಗಿದೆ. ಪ್ರತಿವರ್ಷ ಐದು ದಿನಗಳ ಕಾಲ ನಡೆಯುತ್ತಿದ್ದ ಏರ್ ಇಂಡಿಯಾ ಶೋವನ್ನು ಈ ಬಾರಿ ಕೇವಲ ಮೂರು ದಿನಕ್ಕೆ ಇಳಿಕೆ ಮಾಡಲಾಗಿದೆ. ಆಮೆರಿಕ ಸರ್ಕಾರದ ನಿಯೋಗವು ಭಾರತ ಸರ್ಕಾರ ಹಾಗೂ ಅಮೆರಿಕ ರಕ್ಷಣಾ ಇಲಾಖೆಯ ಶಿಷ್ಟಾಚಾರಗಳನ್ನು ಹಾಗೂ ಕೋವಿಡ್ 19 ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಮಾಸ್ಕ್ ಧರಿಸುವುದು, ಪ್ರಯಾಣಕ್ಕೂ 72 ಘಂಟೆಗಳ ಮುನ್ನ ಕೊವಿಡ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಪಡೆದುಕೊಳ್ಳುವುದು, ರಸ್ ಹರಡದಂತೆ ಕಡ್ಡಾಯವಾಗಿ ಮಿಲಿಟರಿ ವಿಮಾನದಲ್ಲೇ ಪ್ರಯಾಣಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಸೇರಿಸಲಾಗಿದೆ.

English summary
Aero India 2021: America And India Is The Major Defense Partners Of This Time, Here Know About Reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X