ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲೈಟೆಕ್‌ ಜೊತೆಗೂಡಿ ಭಾರತದ ಡ್ರೋನ್‌ ಪೈಲೆಟ್‌ಗಳಿಗೆ ತರಬೇತಿ ನೀಡಲಿರುವ ಏರ್‌ಬಸ್‌

|
Google Oneindia Kannada News

ಬೆಂಗಳೂರು, ಫೆಬ್ರವರಿ 03: ಏರೋ ಇಂಡಿಯಾ 2021 ರಲ್ಲಿ ಏರ್‌ಬಸ್ ಭಾರತದ ಪ್ರಮುಖ ವಾಯುಯಾನ ತರಬೇತಿ ಅಕಾಡೆಮಿಯಾದ ಫ್ಲೈಟೆಕ್ ಏವಿಯೇಷನ್ ಅಕಾಡೆಮಿಯೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ರಿಮೋಟ್ ಪೈಲಟ್ ಏರ್‌ಕ್ರಾಫ್ಟ್ ಸಿಸ್ಟಮ್ (ಆರ್‌ಪಿಎಎಸ್) ತರಬೇತಿಯಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ಏರ್‌ಬಸ್ ಮುಂದಾಗಿದೆ.

ಏರ್‌ಬಸ್ ವಾಯುಯಾನ ತರಬೇತಿ, ಕೋರ್ಸ್‌ವೇರ್ ಅಭಿವೃದ್ಧಿ, ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳಲ್ಲಿ ಅನುಭವ ಹೊಂದಿದ್ದರೆ, ಫ್ಲೈಟೆಕ್ ಮಾನವರಹಿತ ವೈಮಾನಿಕ ವಾಹನಗಳ (ಯುಎವಿ) ತರಬೇತಿ ಸೇರಿದಂತೆ ವಾಯುಯಾನ ತರಬೇತಿ ಸೇವೆಗಳಲ್ಲಿ ಉತ್ತಮವಾಗಿದೆ.

ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಸೂರ್ಯ ಕಿರಣ್ ಮತ್ತು ಸಾರಂಗ್ ಪ್ರದರ್ಶನಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಸೂರ್ಯ ಕಿರಣ್ ಮತ್ತು ಸಾರಂಗ್ ಪ್ರದರ್ಶನ

''ವಾಣಿಜ್ಯ ಘಟಕಗಳು, ಸಶಸ್ತ್ರ ಪಡೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಸೇರಿದಂತೆ ಅನೇಕ ಕೈಗಾರಿಕೆಗಳು ಮತ್ತು ಕ್ಷೇತ್ರಗಳಲ್ಲಿ ಡ್ರೋನ್ ತಂತ್ರಜ್ಞಾನವನ್ನು ಸಾಮರ್ಥ್ಯ ಮತ್ತು ಅನ್ವಯಿಸುವಿಕೆಯನ್ನು ಶೀಘ್ರವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಸಹಭಾಗಿತ್ವದಲ್ಲಿ, ಫ್ಲೈಟೆಕ್ ಏವಿಯೇಷನ್ ಮತ್ತು ಏರ್‌ಬಸ್ ದೇಶದಲ್ಲಿ ಡ್ರೋನ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ನೆರವಾಗುತ್ತದೆ'' ಎಂದು ಫ್ಲೈಟೆಕ್ ಏವಿಯೇಷನ್ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುಖ್ಯ ಹಾರುವ ಬೋಧಕ ಕ್ಯಾಪ್ಟನ್ ಮಮತಾ ಹೇಳಿದರು.

Aero India 2021: Airbus with Flytech to provide RPAS training

ದೇಶದಲ್ಲಿ 40,000 ಡ್ರೋನ್‌ಗಳಿದ್ದು, ಅದು ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆ ಒಂದು ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಅದಕ್ಕೆ ಸುಮಾರು 500,000 ಡ್ರೋನ್ ಪೈಲಟ್‌ಗಳು ಅಗತ್ಯ ಬೀಳಲಿದೆ ಎಂದು ಸರ್ಕಾರ ಅಂದಾಜಿಸಿದೆ.

'ಏರೋ ಇಂಡಿಯಾ 2021' ರಲ್ಲಿ ಹಾರಾಟ ನಡೆಸಲು 'ಏರ್‌ಬಸ್‌' ಸಜ್ಜು'ಏರೋ ಇಂಡಿಯಾ 2021' ರಲ್ಲಿ ಹಾರಾಟ ನಡೆಸಲು 'ಏರ್‌ಬಸ್‌' ಸಜ್ಜು

ಏರ್‌ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲಾರ್ಡ್, "ಡ್ರೋನ್ ಮತ್ತು ರಿಮೋಟ್ ಪೈಲಟ್ ವಿಮಾನ ಉದ್ಯಮವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ತಾಂತ್ರಿಕ ಕೌಶಲ್ಯದ ಜೊತೆಗೆ ಅಗತ್ಯ ಕೌಶಲ್ಯ ಮತ್ತು ಸುರಕ್ಷತೆ ಮತ್ತು ಹಾರುವ ನಿಯಮಗಳ ಜ್ಞಾನವನ್ನು ಹೊಂದಿರುವ ಡ್ರೋನ್ ಪೈಲಟ್‌ಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ. 'ಸ್ಕಿಲ್ ಇಂಡಿಯಾ' ಮಿಷನ್‌ನ ಬದ್ಧತೆಗೆ ಅನುಗುಣವಾಗಿ, ಈಗ ಏರ್‌ಬಸ್ ಉದ್ದೇಶ ಮತ್ತು ಸುರಕ್ಷತೆ, ನಾವೀನ್ಯತೆ, ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಸುಸ್ಥಿರತೆಯ ಮೌಲ್ಯಗಳನ್ನು ಅನ್ವಯಿಸುವ ಮೂಲಕ ಯುಎವಿ ಪರಿಸರ ವ್ಯವಸ್ಥೆಯಲ್ಲಿ ಭಾಗವಹಿಸಲು ಮತ್ತು ಕೊಡುಗೆ ನೀಡಲು ಬದ್ಧರಾಗಿದ್ದೇವೆ" ಎಂದರು.

ಒಪ್ಪಂದದ ಭಾಗವಾಗಿ, ಏರ್‌ಸ್ ಮತ್ತು ಫ್ಲೈಟೆಕ್ ಹೊಸ ಡ್ರೋನ್ ಪೈಲಟ್‌ಗಳಿಗೆ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡುವ ಕೆಲಸ ಮಾಡಲಿದ್ದು, ಸುರಕ್ಷತೆ ಮತ್ತು ಗುಣಮಟ್ಟದ ಉನ್ನತ ಗುಣಮಟ್ಟವನ್ನು ಖಾತ್ರಿಪಡಿಸುತ್ತದೆ

Recommended Video

AERO India ಬಗ್ಗೆ ರಕ್ಷಣಾ ಸಚಿವರ ಮಾತು | Oneindia Kannada

English summary
Aero India 2021: Airbus and Flytech aviation signed a pact to provide Remote Pilot aircraft System training.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X