ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ 2019: ಯಲಹಂಕ ಸುತ್ತಮುತ್ತ ಟ್ರಾಫಿಕ್ ಜಾಮ್

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ ಆರಂಭವಾಗಿರುವ ಏರೋ ಇಂಡಿಯಾ 2019 ಪ್ರದರ್ಶನದ ಹಿನ್ನೆಲೆಯಲ್ಲಿ ಸುತ್ತಮುತ್ತಲೂ ಟ್ರಾಫಿಕ್ ಜಾಮ್ ಉಂಟಾಗಿದೆ.

ಯಲಹಂಕದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ಒಂದು ಕಿ.ಮೀ ದೂರದವರೆಗೆ ಸಂಚಾರ ದಟ್ಟಣೆ ಏರ್ಪಟ್ಟಿದೆ. ಯಲಹಂಕ ವೈಮಾನಿಕ ಪ್ರದರ್ಶನ ವೀಕ್ಷಿಸಲು ಬರುವವರು, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಏರ್ ಪೋರ್ಟ್ ರಸ್ತೆ ಯಲಹಂಕ ವಾಯನೆಲೆ ಹತ್ತಿರ ಗಣ್ಯ, ಅತಿಗಣ್ಯ, ತುರ್ತು ವಾಹನ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹೊರತುಪಡಿಸಿ ಸಾರಿಗೆ ಸಂಚಾರಕ್ಕೆ ನಿಷೇಧ ಮಾಡಲಾಗಿದೆ. ಇತ್ತ ಹೆಬ್ಬಾಳ ಫ್ಲೈಓವರ್ ನಿಂದ ಎಂವಿಐಟಿ ಜಂಕ್ಷನ್‍ವರೆಗೂ ಭಾರೀ ವಾಹನ ಸಂಚಾರವನ್ನು ನಿಷೇಧಿಸಿದ್ದು, ಲಾರಿ, ಟ್ರಕ್, ಖಾಸಗಿ ಬಸ್ ಇತರೆ ಭಾರೀ ಸರಕು ಸಾಗಾಣೆ ವಾಹನ ನಿಷೇಧ ಮಾಡಲಾಗಿದೆ.

Aero india 2019, Stuck in traffic jam, visitors enjoy Air Show from flyovers

ಬೆಂಗಳೂರು, ಹೈದರಾಬಾದ್, ಚಿಕ್ಕಬಳ್ಳಾಪುರ ಕಡೆಗಳಿಂದ ಹೋಗುವ ಬರುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಇತ್ತ ಏರ್ ಪೋರ್ಟ್ ರಸ್ತೆ, ದೊಡ್ಡಬಳ್ಳಾಪುರ ರಸ್ತೆಗಳ ರಸ್ತೆ ಬದಿ ವಾಹನಗಳನ್ನು ಪಾರ್ಕಿಂಗ್ ಮಾಡುವಾಗಿಲ್ಲ. ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮೂಲಕ ಆಂಬಿಯೆನ್ಸ್ ಡಾಬಾವರೆಗೆ ರಸ್ತೆ ಬದಿ ವಾಹನಗಳ ಪಾರ್ಕಿಂಗ್ ನನ್ನು ನಿಷೇಧಿಸಲಾಗಿದೆ.

ಕೆಆರ್ ಪುರಂನಿಂದ ಬರುವವರಿಗೆ ಹೆಣ್ಣೂರು ಕ್ರಾಸ್, ಬಾಗಲೂರು, ಮೈಲನಹಳ್ಳಿ, ಬೇಗೂರು ಮೂಲಕ ಏರ್‌ಪೋರ್ಟ್ ತಲುಪುತ್ತಾರೆ. ತುಮಕೂರು ರಸ್ತೆ ಕಡೆಯಿಂದ ಬರುವವರಿಗೆ ಗೊರಗುಂಟೆಪಾಳ್ಯ ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆಯಿಂದ ವಿದ್ಯಾನಗರ ಕ್ರಾಸ್ ಏರ್‌ಪೋರ್ಟ್ ತಲುಪಬಹುದಾಗಿದೆ.

ಇನ್ನು ಮೈಸೂರು ರಸ್ತೆ ಕಡೆಯಿಂದ ಬರುವವರಿಗೆ ನಾಯಂಡಹಳ್ಳಿ, ಚಂದ್ರಲೇಔಟ್, ಗೊರಗುಂಟೆ ಪಾಳ್ಯ, ಬಿಇಎಲ್ ವೃತ್ತದಿಂದ ವಿದ್ಯಾನಗರ ಕ್ರಾಸ್ ಮೂಲಕ ಕೆಐಎಗೆ ತಲುಪಬಹುದಾಗಿದೆ.

English summary
Aero india 2019: Mmany visitors parked their vehicles on the flyovers along Bellary Road in the city and watched the air show here, as the traffic snarls stretched for more than five kilometres along the road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X