ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ ಶೋ, ಮಾರ್ಗ ಬದಲಾವಣೆ, ಹೇಗೆ ಹೋಗ್ಬೇಕು?

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಏರೋ ಇಂಡಿಯಾ ಪ್ರದರ್ಶನ ನಡೆಯುವ ಹಿನ್ನೆಲೆಯಲ್ಲಿ ಮಾರ್ಗವನ್ನು ಬದಲಾಯಿಸಲಾಗಿದೆ. ಬಳ್ಳಾರಿ ರಸ್ತೆಯ ಹೆಬ್ಬಾಳ ಫ್ಲೈಓವರ್‌ನಿಂದ ಎಂವಿಐಟಿ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ.

ಏರೋ ಇಂಡಿಯಾ 2019 : ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಶಕ್ತಿ ಪ್ರದರ್ಶನ

ಈ ರಸ್ತೆಯಲ್ಲಿ ಲಾರಿ ಸೇರಿದಂತೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಪರ್ಯಾಯ ಮಾರ್ಗ ಕಲ್ಪಿಸಿಕೊಡಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ಹೋಗುವವರಿಗೆ ಮಾರ್ಗ

ಕೆಂಪೇಗೌಡ ಏರ್‌ಪೋರ್ಟ್‌ಗೆ ಹೋಗುವವರಿಗೆ ಮಾರ್ಗ

ಕೆಆರ್ ಪುರಂನಿಂದ ಬರುವವರಿಗೆ ಹೆಣ್ಣೂರು ಕ್ರಾಸ್, ಬಾಗಲೂರು, ಮೈಲನಹಳ್ಳಿ, ಬೇಗೂರು ಮೂಲಕ ಏರ್‌ಪೋರ್ಟ್ ತಲುಪುತ್ತಾರೆ.

ತುಮಕೂರು ರಸ್ತೆ ಕಡೆಯಿಂದ ಬರುವವರಿಗೆ ಗೊರಗುಂಟೆಪಾಳ್ಯ ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆಯಿಂದ ವಿದ್ಯಾನಗರ ಕ್ರಾಸ್ ಏರ್‌ಪೋರ್ಟ್ ತಲುಪಬಹುದಾಗಿದೆ.ಇನ್ನು ಮೈಸೂರು ರಸ್ತೆ ಕಡೆಯಿಂದ ಬರುವವರಿಗೆ ನಾಯಂಡಹಳ್ಳಿ, ಚಂದ್ರಲೇಔಟ್, ಗೊರಗುಂಟೆ ಪಾಳ್ಯ, ಬಿಇಎಲ್ ವೃತ್ತದಿಂದ ವಿದ್ಯಾನಗರ ಕ್ರಾಸ್ ಮೂಲಕ ಕೆಐಎಗೆ ತಲುಪಬಹುದಾಗಿದೆ.
ರಸ್ತೆಯಲ್ಲಿ ಭಾರಿ ವಾಹನಗಳ ನಿಷೇಧ

ರಸ್ತೆಯಲ್ಲಿ ಭಾರಿ ವಾಹನಗಳ ನಿಷೇಧ

ಬೆಳಗ್ಗೆ 6ರಿಂದಲೇ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ರಾತ್ರಿ 12 ಗಂಟೆವರೆಗೂ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು , ತುರ್ತು ವಾಹನಗಳು, ಅತಿಥಿಗಳ ವಾಹನಗಳು ಹೊರತುಪಡಿಸಿ ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳ ಫ್ಲೈಓವರ್‌ನಿಂದ ಎಂವಿಐಟಿ ವರೆಗೆ ಮತ್ತು ರಿಂಗ್ ರಸ್ತೆಯಲ್ಲಿ ಕೆಆರ್ ಪುರ, ಹೆಬ್ಬಾಳ ಮತ್ತು ತುಮಕೂರು ರಸ್ತೆವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಬಿಎಂಟಿಸಿ ವಿಶೇಷ ಬಸ್ ಸೇವೆ

ಬಿಎಂಟಿಸಿ ವಿಶೇಷ ಬಸ್ ಸೇವೆ

ನಗರದ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 20 ರಿಂದ 24ರವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಬಿಎಂಟಿಸಿ ಹೆಚ್ಚುವರಿ ಬಸ್‌ಗಳ ಸೇವೆ ಕಲ್ಪಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ನಿಗಮ ಫೆ.23 ಮತ್ತು 24ರಂದು ನಗರದ ವಿವಿಧೆಡೆಯಿಂದ ಪ್ರದರ್ಶನ ನಡೆಯುವ ಸ್ಥಳಕ್ಕೆ 70 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ. ಪ್ರಮುಖವಾಗಿ ಮೆಜೆಸ್ಟಿಕ್‌ ಬಸ್ ನಿಲ್ದಾಣ, ಎಂಜಿ ರಸ್ತೆ ಮೆಟ್ರೋ ನಿಲ್ದಾಣ, ಎಚ್‌ಎಸ್‌ಆರ್‌ ಬಡಾವಣೆ , ಹೆಬ್ಬಾಳ ರಿಂಗ್ ರಸ್ತೆ ಜಂಕ್ಷನ್, ಯಲಹಂಕ, ಬನಶಂಕರಿ ಟಿಟಿಎಂಸಿ, ಕೆಂಗೇರಿ, ಟಿನ್ ಫ್ಯಾಕ್ಟರಿ, ಯಶವಂತಪುರ, ಹೆಬ್ಬಾಳ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮೊದಲಾದ ಸ್ಥಳಗಳಿಂದ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕರು ವೈಯಕ್ತಿಕ ವಾಹನಗಳನ್ನು ನಿಗಮದ ಟಿಟಿಎಂಸಿಗಳಲ್ಲಿ ನಿಲುಗಡೆ ಮಾಡಿ, ಬಸ್ ಗಳಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
ಸೂರ್ಯಕಿರಣ್ ವಿಮಾನ ಹಾರಾಟ ನಿಷೇಧ

ಸೂರ್ಯಕಿರಣ್ ವಿಮಾನ ಹಾರಾಟ ನಿಷೇಧ

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ ಆರಂಭವಾಗಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಸೂರ್ಯಕಿರಣ್ ಯುದ್ಧ ವಿಮಾನ ಪ್ರದರ್ಶನ ರದ್ದುಗೊಳಿಸಲಾಗಿದೆ.

ಮಂಗಳವಾರ ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ಪ್ರಯುಕ್ತ ನಡೆಸುತ್ತಿದ್ದ ತಾಲೀಮಿನ ಸಂದರ್ಭದಲ್ಲಿ ಎರಡು ಸೂರ್ಯಕಿರಣ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಮನೆಯೊಂದರ ಮೇಲೆ ಉರುಳಿತ್ತು. ಇಬ್ಬರು ಪೈಲಟ್‌ಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು.

English summary
Aero india 2019: Is commensing from today, so route changed in this lane and parking is also barred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X