ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಲ್‌ಸ್ಟೋನ್‌ನಿಂದ ಏರ್‌ಬಸ್ ಹೆಲಿಕಾಪ್ಟರ್ ಪಡೆದ ಹೆಲಿಗೋ ಚಾರ್ಟರ್ಸ್

|
Google Oneindia Kannada News

ಬೆಂಗಳೂರು, ಫೆಬ್ರವರಿ 20 : ಹೆಲಿಗೋ ಚಾರ್ಟರ್ ಮೈಲ್‌ಸ್ಟೋನ್ ಕಂಪನಿಯಿಂದ ಏರ್‌ಬಸ್ ಎಚ್‌145 ಹೆಲಿಕಾಪ್ಟರ್‌ನ್ನು ಪಡೆದುಕೊಂಡಿದೆ.

ಈ ಹೆಲಿಕಾಪ್ಟರ್ ವೈವಿಧ್ಯಮಯವಾದ ಗುರಿಯೊಂದಿಗೆ ಕಾರ್ಯನಿರ್ವಹಿಸಲಿದೆ. ಮೈಲ್‍ಸ್ಟೋನ್‍ನಿಂದ ಲೀಸ್ ಆಧಾರದಲ್ಲಿ ಪಡೆದಿರುವ ಈ ಹೆಲಿಕಾಪ್ಟರ್‍ನ ಹಾರಾಟವನ್ನು ಸದ್ಯದಲ್ಲೇ ಜಾರ್ಖಂಡ್ ರಾಜ್ಯದಲ್ಲಿ ಆರಂಭಿಸಲಾಗುತ್ತದೆ.

ಏರೋ ಇಂಡಿಯಾ ಆಗಸದಲ್ಲಿ ಹಾರಾಡಿ ಮನಗೆದ್ದ ರಫೇಲ್ ಯುದ್ಧ ವಿಮಾನಏರೋ ಇಂಡಿಯಾ ಆಗಸದಲ್ಲಿ ಹಾರಾಡಿ ಮನಗೆದ್ದ ರಫೇಲ್ ಯುದ್ಧ ವಿಮಾನ

ಈ ಸಂದರ್ಭದಲ್ಲಿ ಮಾತನಾಡಿದ ಮೈಲ್‍ಸ್ಟೋನ್‍ನ ಹಿರಿಯ ಉಪಾಧ್ಯಕ್ಷ (ಕಮರ್ಷಿಯಲ್) ಮೈಕೆಲ್ ಯಾರ್ಕ್ ಅವರು, ಮೈಲ್‍ಸ್ಟೋನ್‍ನಲ್ಲಿ ಹೆಲಿಗೋ ವಿಶ್ವಾಸ ಇಟ್ಟಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಹೆಲಿಗೋ ಸಂಸ್ಥೆಗೆ ನಾವು ಹೆಲಿಕಾಪ್ಟರ್‍ಗಳನ್ನು ಪೂರೈಸುವ ಮೂಲಕ ನಮ್ಮ ಹಣಕಾಸು ಮತ್ತು ತಾಂತ್ರಿಕ ಸಾಮಥ್ರ್ಯಗಳು ದುಪ್ಪಟ್ಟಾಗಿವೆ.

Aero india 2019, Heligo got airbus h145 helicopter

ನಮ್ಮ ಈ ಎರಡೂ ಸಂಸ್ಥೆಗಳ ಸಂಬಂಧ ದೀರ್ಘಾವಧಿವರೆಗೆ ಮುಂದುವರಿದು, ಉಭಯ ಸಂಸ್ಥೆಗಳು ಪ್ರಗತಿ ಕಾಣಲಿ'' ಎಂದು ಹಾರೈಸಿದರು.

ಏರ್‍ಬಸ್‍ನಿಂದ ವಾಣಿಜ್ಯ ಪೈಲಟ್ ಮತ್ತು ನಿರ್ವಹಣೆ ತರಬೇತಿ ಕೇಂದ್ರ ಆರಂಭ ಏರ್‍ಬಸ್‍ನಿಂದ ವಾಣಿಜ್ಯ ಪೈಲಟ್ ಮತ್ತು ನಿರ್ವಹಣೆ ತರಬೇತಿ ಕೇಂದ್ರ ಆರಂಭ

ಎಚ್‍ಸಿಪಿಎಲ್ ಒಂದು ಪ್ರಮುಖವಾದ ಆನ್‍ಶೋರ್ ಮತ್ತು ಆಫ್‍ಶೋರ್ ಹೆಲಿಕಾಪ್ಟರ್ ಸೇವಾ ಸಂಸ್ಥೆಯಾಗಿದೆ. ಇದು ತೈಲ ಮತ್ತು ಅನಿಲ ಕಂಪನಿಗಳು, ಭಾರತದಲ್ಲಿ ಕಾರ್ಪೊರೇಟ್‍ಗಳು ಮತ್ತು ಅತಿ ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ ಹೆಲಿಕಾಪ್ಟರ್‍ಗಳನ್ನು ಒದಗಿಸುತ್ತಿದೆ. ಪ್ರಸ್ತುತ ಕಂಪನಿಯು ನಾಲ್ಕು ಏರ್‍ಬಸ್ ಎಎಸ್365 ಎನ್3 ಡೌಫಿನ್ಸ್ ಸೇರಿದಂತೆ 10 ಹೆಲಿಕಾಪ್ಟರ್‍ಗಳ ಸೇವೆಯನ್ನು ನೀಡುತ್ತಿದೆ.

ಹೆಲಿಗೋ ಚಾರ್ಟರ್ಸ್ ಪ್ರೈವೇಟ್ ಲಿಮಿಟೆಡ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ್ಯಾಪ್ಟನ್ ಕೆ.ಪದ್ಮನಾಭನ್ ಅವರು ಮಾತನಾಡಿ, ಎಚ್‍ಸಿಪಿಎಲ್ ಈ ವಿನೂತನವಾದ ಎಚ್145 ಹೆಲಿಕಾಪ್ಟರ್ ಅನ್ನು ತನ್ನ ವೈವಿಧ್ಯಮಯ ಉದ್ದೇಶಗಳಿಗೆ ಬಳಸಿಕೊಳ್ಳಲಿದೆ. ಸುರಕ್ಷತಾ ಕ್ರಮಗಳ ಸುಧಾರಣೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಈ ಎಚ್145 ಹೆಲಿಕಾಪ್ಟರ್ ವೈವಿಧ್ಯಮಯವಾದ ಪಾತ್ರಗಳನ್ನು ನಿರ್ವಹಿಸಲಿದೆ'' ಎಂದು ತಿಳಿಸಿದರು.

'ಮಿಸ್ಸಿಂಗ್ ಮ್ಯಾನ್' ಮೃತ ಪೈಲಟ್‌ಗೆ ಆಗಸದಲ್ಲೇ ಶ್ರದ್ಧಾಂಜಲಿ 'ಮಿಸ್ಸಿಂಗ್ ಮ್ಯಾನ್' ಮೃತ ಪೈಲಟ್‌ಗೆ ಆಗಸದಲ್ಲೇ ಶ್ರದ್ಧಾಂಜಲಿ

4 ಟನ್-ವರ್ಗದ ಟ್ವಿನ್-ಎಂಜಿನ್ ರೋಟೋಕ್ರಾಫ್ಟ್ ಶ್ರೇಣಿಯಲ್ಲಿ ಎಸ್145 ಹೊಸ ಸದಸ್ಯನಾಗಿದೆ. ಉದ್ದೇಶಿತ ಸಾಮಥ್ರ್ಯ ಮತ್ತು ನಮ್ಯತೆ, ವಿಶೇಷವಾಗಿ ಎತ್ತರ ಮತ್ತು ಬಿಸಿಯಾದ ಕಾರ್ಯನಿರ್ವಹಣೆ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆಗೆ ಪೂರಕವಾಗಿ ವಿನ್ಯಾಸ, ಅಭಿವೃದ್ಧಿಗೊಳಿಸಲಾಗಿದೆ.

ಗಾತ್ರದಲ್ಲಿ ಕಾಂಪ್ಯಾಕ್ಟ್ ಆಗಿದ್ದು, ನೋಡಲು ಸಣ್ಣದಾಗಿದ್ದರೂ ಈ ಹೆಲಿಕಾಪ್ಟರ್ ಫ್ಲೆಕ್ಸಿಬಲ್ ಕ್ಯಾಬಿನ್‍ಗಳನ್ನು ಒಳಗೊಂಡಿದೆ. ಇದರ ಮೂಲಕ ಹಲವಾರು ಉದ್ದೇಶಗಳಿಗೆ ಬಳಸಬಹುದಾದ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹ್ಯೂಮನ್ ಮಶಿನ್ ಇಂಟರ್‍ಫೆಸ್(ಎಚ್‍ಎಂಐ) ಹೊಂದಿದ ಅತ್ಯಾಧುನಿಕ ಕಾಕ್‍ಪಿಟ್ ವಿನ್ಯಾಸ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಹೆಲಿಯೋನಿಕ್ಸ್ ಏವಿಯೋನಿಕ್ಸ್‍ನಂತಹ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಅತ್ಯುತ್ತಮ ಸಾಮಥ್ರ್ಯದ ಎಂಜಿನ್‍ಗಳು, ಸುಧಾರಿತ ಪರಿವರ್ತನಾ ವ್ಯವಸ್ಥೆಯನ್ನು ಈ ಹೆಲಿಕಾಪ್ಟರ್‍ನಲ್ಲಿ ಅಳವಡಿಸಲಾಗಿದೆ. ಈ ಎಚ್145 ಹೆಲಿಕಾಪ್ಟರ್‍ನಲ್ಲಿ ಪ್ರಮುಖವಾಗಿ ರೋಟರ್ ಸಿಸ್ಟಂ ಇದ್ದು, ಬಹುಪಯೋಗಿ ಕ್ಯಾಬಿನ್ ಇದೆ.

ಬೆಂಗಳೂರಿನಲ್ಲಿ ಆರಂಭವಾಗಿರುವ ಏರೋ ಇಂಡಿಯಾ 2019 ನಲ್ಲಿ ಏರ್‍ಬಸ್ ಈ ಎಚ್145 ಹೆಲಿಕಾಪ್ಟರ್ ಅನ್ನು ಪ್ರದರ್ಶನಕ್ಕೆ ಇಟ್ಟಿದೆ.

English summary
Aero india 2019, Heligo charters private limited got Airbus helicopter, Milestone aviation gave leased to this company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X