ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ ಆಗಸದಲ್ಲಿ ಸರ್ಜಿಕಲ್ ಸ್ಟ್ರೈಕ್

|
Google Oneindia Kannada News

ಬೆಂಗಳೂರು, ಫೆ.22: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಧ್ರುವ ಹಾಗೂ ರುದ್ರ ಹೆಲಿಕಾಪ್ಟರ್‌ಗಳು ಸರ್ಜಿಕಲ್ ಸ್ಟ್ರೈಕ್ ಮಾದರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದವು.

ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಬೋಯಿಂಗ್ ಉತ್ಪಾದನಾ ಘಟಕ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಬೋಯಿಂಗ್ ಉತ್ಪಾದನಾ ಘಟಕ

ಲೆಫ್ಟಿನೆಂಟ್ ಕರ್ನಲ್ ವಿಕಾಸ್‍ಸಿಂಗ್ ನೇತೃತ್ವದ ಎಚ್‍ಎಎಲ್ ನಿರ್ಮಿತ ರುದ್ರ ಮತ್ತು ಧ್ರುವ ಹೆಲಿಕಾಪ್ಟರ್‍ಗಳು ಬಾನಂಗಳದಲ್ಲೇ ನಿಂತು ಹಗ್ಗವನ್ನು ಕೆಳಗೆ ಬಿಟ್ಟು ಈ ಮೂಲಕ ಸೈನಿಕರು ಸರಸರನೆ ಇಳಿದುಬರುವುದು, ಒಂದು ಕೈಯಲ್ಲಿ ಹಗ್ಗ ಹಿಡಿದು, ಮತ್ತೊಂದು ಕೈಯನ್ನು ಇನ್ನೊಬ್ಬ ಯೋಧನೊಂದಿಗೆ ಜೋಡಿಸಿ ಬಂದೂಕು ಹಾರಿಸುವುದು, ನಾಲ್ಕು ದಿಕ್ಕಿನಲ್ಲಿ ಜೀಪ್‍ಗಳನ್ನು ಹಗ್ಗದಿಂದ ಕಟ್ಟಿ ನಿಗದಿತ ಸ್ಥಳದಲ್ಲಿ ಇಳಿಸುವ ದೃಶ್ಯಗಳು ವಾಯುನೆಲೆಯ ಅಧಿಕಾರಿಗಳು ಎಲ್ಲವೂ ನಿಜವಾದ ಸರ್ಜಿಕಲ್ ಸ್ಟ್ರೈಕ್‌ನಂತೆಯೇ ಇತ್ತು.

Aero india 2019, Dhruv and rudra helicopter showcase surgical strike scenes

ಎರಡು ಯಾಕ್ ವಿಮಾನಗಳು ಇನ್ನೇನು ಪರಸ್ಪರ ಡಿಕ್ಕಿಯಾದವೇನೋ ಎಂದು ಪ್ರೇಕ್ಷಕರು ಹೃದಯ ಬಿಗಿ ಹಿಡಿದು ನೋಡುತ್ತಿರುವಾಗಲೇ ಕ್ಷಣ ಮಾತ್ರದಲ್ಲಿ ಬೇರೆ ಬೇರೆಯಾಗಿ ಸುಂಯ್ ಎಂದು ಮೇಲೇರುವ ದೃಶ್ಯ ಎಲ್ಲರ ಎದೆ ಝಲ್ಲೆನಿಸಿತ್ತು.

ಇದು ಬೆಂಗಳೂರಲ್ಲಿ ನಡೆಯುತ್ತಿರುವ ಕೊನೆಯ ಏರ್‌ ಶೋ? ಇದು ಬೆಂಗಳೂರಲ್ಲಿ ನಡೆಯುತ್ತಿರುವ ಕೊನೆಯ ಏರ್‌ ಶೋ?

ಪ್ರದರ್ಶನಕ್ಕೂ ಮುನ್ನ ಪ್ಯಾರಾರೆಜಿಮೆಂಟ್‍ನ ಯೋಧರು 8000 ಅಡಿ ಮೇಲಿನಿಂದ ಬಣ್ಣಬಣ್ಣದ ಪ್ಯಾರಾಚೂಟ್ ಮೂಲಕ ಭೂಮಿಗಿಳಿಯುತ್ತಿದ್ದ ದೃಶ್ಯ ಎಲ್ಲರನ್ನು ಆಕರ್ಷಿಸಿತು.

English summary
Aero india 2019: HAL made Rudra and Dhruv helicopter showcase surgical strike scenes in Aero india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X