ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ ಆಗಸದಲ್ಲಿ ಹಾರಾಡಿ ಮನಗೆದ್ದ ರಫೇಲ್ ಯುದ್ಧ ವಿಮಾನ

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ವಾಯುಸೇನೆ ಸೇರಲಿರುವ ರಫೇಲ್ ಯುದ್ಧ ವಿಮಾನ ಬಾನಿನಲ್ಲಿ ಹಾರಾಟ ನಡೆಸಿ ಮನಗೆದ್ದಿತು. ಗಾಳಿಯನ್ನು ತೂರಿಕೊಂಡು ವೇಗವಾಗಿ ನುಗ್ಗುವ ಜೊತೆಗೆ ಅಷ್ಟೇ ವೇಗವಾಗಿ ಪಲ್ಟಿ ಹೊಡೆಯುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿತು.

ಕೊನೆಯಲ್ಲಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ನಿಧಾನವಾಗಿ ಚಲಿಸಿ, ಮೃತ ಪೈಲಟ್ ಸಾಹಿಲ್ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು.ಪ್ರದರ್ಶನದ ಆಕರ್ಷಣೆಯಾಗಿದ್ದ ಸಾರಂಗ್ ಹೆಲಿಕಾಪ್ಟರ್ ಗಳು ಎಂದಿನಂತೆ ತಮ್ಮ ಅಪಾಯಕಾರಿ ಕ್ರಾಸಿಂಗ್ ಗಳ ಮೂಲಕ ಜನರನ್ನು ಬೆಚ್ಚಿ ಬೀಳಿಸಿದವು.

ಹೊಗೆ ಉಗುಳುತ್ತಾ ಮೈದಾನದ ನಾಲ್ಕು ದಿಕ್ಕುಗಳನ್ನು ಆವರಿಸಿ, ಆಗಾಗ್ಗೆ ಒಂದೊಕ್ಕೊಂದು ಡಿಕ್ಕಿ ಹೊಡೆಯುವಂತೆ ವೇಗವಾಗಿ ನುಗ್ಗಿ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡು ಮತ್ತೆ ಹಾರಾಟ ನಡೆಸುವ ಮೂಲಕ ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿದವು.

ಭಾರತೀಯ ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಹಗುರ ಉಪಯುಕ್ತತೆಯ ಹೆಲಿಕಾಪ್ಟರ್ (ಎಲ್‍ಯುಎಚ್ ) ಅನ್ನು ಆದರದಿಂದ ಸೇನೆಗೆ ಬರಮಾಡಿಕೊಳ್ಳಲಾಯಿತು. ನೆಲದಿಂದ, ನೀರಿನಿಂದ ಹಾಗೂ ಅಗ್ನಿ ಆಕಸ್ಮಿಕಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಈ ಹೆಲಿಕಾಪ್ಟರ್, ಹಲವು ಕಸರತ್ತುಗಳಿಂದ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು.

Aero india 2019, Controversial rafale flies in aero india

ಈ ವರ್ಷ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿ. ಈ ಪ್ರದರ್ಶನ ರಕ್ಷಣಾ ಮತ್ತು ತಂತ್ರಜ್ಞಾನ ಇಲಾಖೆಗಳ ವ್ಯಾಪಾರಕ್ಕೆ ಉತ್ತಮ ವೇದಿಕೆ ಮಾತ್ರವಲ್ಲದೆ, ಈ ಕ್ಷೇತ್ರಗಳ ಬಗ್ಗೆ ಅನೇಕ ಜ್ಞಾನವನ್ನು ಹಂಚಿಕೊಳ್ಳಲಾಗುತ್ತದೆ.

ಈ ವರ್ಷದ ಪ್ರದರ್ಶನ ಭಾರತದ ವೈಮಾನಿಕ ಪ್ರದರ್ಶನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡದಾಗಿದ್ದು 51 ದೇಶಗಳು ಮತ್ತು 44 ಅಧಿಕಾರಿ ನಿಯೋಗಗಳು ಭಾಗವಹಿಸುತ್ತಿವೆ.
ಉಳಿದಂತೆ ರಾಷ್ಟ್ರೀಯ ಬಾವುಟ ಹೊತ್ತು ಸಾಗುವ ಎಂಇ-17, ಡಕೋಟ ಡಿಸಿ -3, ಎಎಲ್ ಎಚ್ ಎಂಕೆ-3 (ಧ್ರುವ), ರುದ್ರ, ಎಚ್ಎಎಲ್ ನ ಆವ್ರೋ, ಕಿರಣ್ ಎಂಕೆ 1 , ಮಿಗ್ 21 ಬಿಷನ್, ಸಾರಸ್, ನೇತ್ರಾ, ಪಿ-81, ಎಸ್ ಯು 30 ಎಂಕೆಐ, ಎಫ್ -16, ಏರ್ ಬಸ್ 330, ಬಿ 52 ಯುದ್ಧ ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

English summary
Aero india 2019: Rafale aircraft is set to deliver in september for India. In this circumstances rafale started its flying show in Aero India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X