ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ : ಫೆ.23,24ರಂದು ಬಿಎಂಟಿಸಿ ಹೆಚ್ಚುವರಿ ಬಸ್‌ ಸೇವೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ನಗರದ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 20 ರಿಂದ 24ರವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಬಿಎಂಟಿಸಿ ಹೆಚ್ಚುವರಿ ಬಸ್‌ಗಳ ಸೇವೆ ಕಲ್ಪಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ನಿಗಮ ಫೆ.23 ಮತ್ತು 24ರಂದು ನಗರದ ವಿವಿಧೆಡೆಯಿಂದ ಪ್ರದರ್ಶನ ನಡೆಯುವ ಸ್ಥಳಕ್ಕೆ 70 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ.

ಏರ್ ಶೋ : ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಸೂರ್ಯಕಿರಣ್ ವಿಮಾನ ಏರ್ ಶೋ : ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಸೂರ್ಯಕಿರಣ್ ವಿಮಾನ

ಪ್ರಮುಖವಾಗಿ ಮೆಜೆಸ್ಟಿಕ್‌ ಬಸ್ ನಿಲ್ದಾಣ, ಎಂಜಿ ರಸ್ತೆ ಮೆಟ್ರೋ ನಿಲ್ದಾಣ, ಎಚ್‌ಎಸ್‌ಆರ್‌ ಬಡಾವಣೆ , ಹೆಬ್ಬಾಳ ರಿಂಗ್ ರಸ್ತೆ ಜಂಕ್ಷನ್, ಯಲಹಂಕ, ಬನಶಂಕರಿ ಟಿಟಿಎಂಸಿ, ಕೆಂಗೇರಿ, ಟಿನ್ ಫ್ಯಾಕ್ಟರಿ, ಯಶವಂತಪುರ, ಹೆಬ್ಬಾಳ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮೊದಲಾದ ಸ್ಥಳಗಳಿಂದ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕರು ವೈಯಕ್ತಿಕ ವಾಹನಗಳನ್ನು ನಿಗಮದ ಟಿಟಿಎಂಸಿಗಳಲ್ಲಿ ನಿಲುಗಡೆ ಮಾಡಿ, ಬಸ್ ಗಳಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.

Aero india 2019, BMTC to operate special buses

ಈ ಎರಡು ದಿನ ಬೆಳಗ್ಗೆ 8ರಿಂದ ಈ ಬಸ್‌ ಸೇವೆ ಲಭ್ಯವಾಗಲಿದೆ. ಎಚ್‌ಎಸ್‌ಆರ್ ಬಡಾವಣೆಯಿಂದ ಹೊರಡುವ ಬಸ್‌ಗಳನ್ನು ಪ್ರಯಾಣ ದರ 50 ನಿಗದಿಗೊಳಿಸಲಾಗಿದೆ. ಎಂಜಿ ರಸ್ತೆ ಮೆಟ್ರೋ ನಿಲ್ದಾಣ, ಎಚ್‌ಎಎಲ್‌ ಕಲ್ಯಾಣ ಮಂಟಪ, ಪೀಣ್ಯ 2ನೇ ಹಂತ, ಟಿನ್ ಫ್ಯಾಕ್ಟರಿ, ಯಶವಂತಪುರ, ಹೆಬ್ಬಾಳ, ಯಶವಂತಪುರ, ಮೆಜೆಸ್ಟಿಕ್ ನಿಲ್ದಾಣದಿಂದ ಸಂಚರಿಸುವ ಬಸ್‌ಗಳ ಪ್ರಯಾಣ ದರ 40 ರೂ ಹಾಗೂ ಬನಶಂಕರಿ, ಕೆಂಗೇರಿ, ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಸಂಚರಿಸುವ ಬಸ್‌ಗಳಿಗೆ 45 ರೂ ನಿಗದಿ ಮಾಡಲಾಗಿದೆ.

ಅಲ್ಲದೆ, ನಗರದ ವಿವಿಧೆಡೆಯಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಚರಿಸುವ ವಾಯುವಜ್ರ ಬಸ್‌ಗಳಲ್ಲಿ ಹುಣಸೆಮಾರನಹಳ್ಳಿವರೆಗೆ ಸಂಚರಿಸಲು ಅವಕಾಶವಿದೆ.

English summary
With aero show 2019 expected to choke congested Hebbal and ballari road from February 20 and 24. BMTC plans to operate additional buses to yelahanka air force station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X